ಮಂಗಳೂರು,ಜೂನ್ 5:ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟ -2010 ನವದೆಹಲಿಯಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ದೇಶದಲ್ಲಿ ಕ್ರೀಡಾ ಜಾಗೃತಿ ಮೂಡಿಸಲು ಕ್ವೀನ್ಸ್ ಬ್ಯಾಟನ್ ರಿಲೇ ತಂಡ ಪ್ರಮುಖ ನಗರಗಳಿಗೆ ಆಗಮಿಸಲಿದ್ದು, ಆತಿಥ್ಯ ಮತ್ತು ಕ್ರೀಡೆಗೆ ಹೆಸರಾದ ಕರಾವಳಿ ಜಿಲ್ಲೆಯಲ್ಲಿ ರಿಲೇ ತಂಡವನ್ನು ಸ್ವಾಗತಿಸಲು ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ಸೆಪ್ಟೆಂಬರ್ 5 ರಂದು ಬೆಳಿಗ್ಗೆ ಹಾಸನ ಮಾರ್ಗದ ಮೂಲಕ ಬರುವ ಕ್ವೀನ್ಸ್ ಬ್ಯಾಟನ್ ರಿಲೇ ತಂಡಕ್ಕೆ ಶಿರಾಡಿ ಘಾಟಿಯ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಸ್ವಾಗತಿಸಲು ನಿರ್ಧರಿಸ ಲಾಯಿತು.ಮಂಗಳೂರು ನಗರಕ್ಕೆ ತಂಡ ಅಪರಾಹ್ನ 2 ಗಂಟೆಗೆ ತಲುಪಲಿದ್ದು, ನಗರದಲ್ಲಿ ಅಂತಾ ರಾಷ್ಟ್ರೀಯ ಕ್ರೀಡಾ ಪಟು ಗಳು /ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿಗಳನ್ನು ಸೇರಿಸಿಕೊಂಡು 5 ಕಿ.ಮೀ ಓಟ ನಡೆಸಲು ನಿರ್ಧರಿ ಸಲಾಯಿತು. ಸಂಜೆ ಟಿ ಎಂ ಎ ಪೈ ಕನ್ವೆನ್ಷನಲ್ ಹಾಲ್ ನಲ್ಲಿ ರಾಜ್ಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಏರ್ಪಡಿಸಲು ನಿರ್ಧರಿ ಸಲಾಯಿತು.ಕಾರ್ಯಕ್ರಮ ಸುಗಮವಾಗಿ ನಡೆಯಲು ವಿವಿಧ ಸಮಿತಿ ಗಳನ್ನು ಪುತ್ತೂರು ಸಹಾಯಕ ದಂಡಾಧಿಕಾರಿ ಮತ್ತು ಮಂಗಳೂರು ಸಹಾಯಕ ದಂಡಾಧಿ ಕಾರಿಗಳ ನೇತೃತ್ವದಲ್ಲಿ ಸಮಿತಿ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳ ನೇತೃತ್ವದಲ್ಲಿ ಪ್ರಮುಖ ಸಮಿತಿಯನ್ನು ರಚಿಸಲು ಸಭೆ ನಿರ್ಧರಿಸಿತು. ವಿವಿಧ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಲು ಯುವಜನಸೇವೆ ಮತ್ತು ಕ್ರೀಡಾ ಇಲಾಖಾಧಿಕಾರಿಗಳಿಗೆ ಕರ್ತವ್ಯ ನಿರ್ವ ಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.ಮಾಧ್ಯಮಗಳು ಈ ಸಂಬಂಧ ಅತೀ ಹೆಚ್ಚಿನ ಮಾಹಿತಿಯನ್ನು ಜನರಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ಕೋರಿದರು. ಊಟೋಪಚಾರ, ವಸತಿ ವ್ಯವಸ್ಥೆ, ಭದ್ರತಾ ವ್ಯವಸ್ಥೆ, ಪ್ರಾಯೋಜಕತ್ವದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.