ಮಂಗಳೂರು,ಜೂ.2:ಬಜಪೆ ಬಳಿ ಮೇ 22ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಗುರುತುಪತ್ತೆಯಾಗದೆ ಡಿ ಎನ್ ಎ ಪರೀಕ್ಷೆಗೊಳಪಡಿಸಿದ ಮೃತದೇಹಗಳಲ್ಲಿ 12 ಶವಗಳು ಮಾದರಿಗಳ (ಸ್ಯಾಂಪಲ್) ಜೊತೆ ಹೊಂದಾಣಿಕೆಯಾಗದ ಕಾರಣ ಜಿಲ್ಲಾಡಳಿತವೇ ಶವಸಂಸ್ಕಾರದ ಹೊಣೆಯನ್ನು ಹೊತ್ತಿದೆ. ಇಂದು ಅಪರಾಹ್ನ 3 ಗಂಟೆಯ ವೇಳೆಗೆ ಕೂಳೂರು ಬಳಿ ಶವಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.
ಆರೋಗ್ಯ ಇಲಾಖೆಯಿಂದ 8 ಆಂಬುಲೆನ್ಸ್ ಗಳು ಮತ್ತು ಒಂದು 108, ಒಂದು ವಿಶೇಷ ಆಂಬುಲೆನ್ಸ್ ನ್ನು ಸಿದ್ಧಪಡಿಸಲಾಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಶವಸಂಸ್ಕಾರ ನಡೆಯಲಿದೆ.