Saturday, December 29, 2012

'ಅಪೌಷ್ಟಿಕತೆ ನಿವಾರಣೆಗೆ ಎಲ್ಲರ ಸಹಕಾರ ಅಗತ್ಯ'

ಮಂಗಳೂರು, ಡಿಸೆಂಬರ್.29 :- ಪೌಷ್ಟಿಕ ಆಹಾರಕ್ಕಾಗಿ ಕ್ರಿಯಾ ಯೋಜನೆ ರೂಪಿಸಿದ ಪ್ರಥಮ ಗ್ರಾಮ ಪಂಚಾಯತ್ ಮುಚ್ಚೂರು. ಪ್ರಥಮವಾಗಿ ಅಪೌಷ್ಠಿಕ ಮಕ್ಕಳ ಸಮಸ್ಯೆ ಪರಿಹರಿಸಲು ಪೋಷಕರ ಸಭೆ ನಡೆಸಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪಂಚಾಯಿತಿ ಮುಚ್ಚೂರು. ಈ ಎಲ್ಲಾ ಕಾರ್ಯಕ್ರಮಗಳಿಂದಾಗಿ 23 ರಷ್ಟಿದ್ದ ಅಪೌಷ್ಠಿಕ ಮಕ್ಕಳ ಸಂಖ್ಯೆ ಇಂದು 11 ಕ್ಕೆ ಇಳಿದಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ ಅವರು ಹೇಳಿದರು.
   ವಾರ್ತಾ ಇಲಾಖೆ ಇಂದು ಕೊಂಪ ದವಿನ ಹಿರಿಯ ಪ್ರಾಥ ಮಿಕ ಶಾಲೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿ ವೃದ್ಧಿ ಯೋಜನೆ ಮಂಗ ಳೂರು ಗ್ರಾಮಾಂ ತರ ಹಾಗೂ ಪ್ರಾಥ ಮಿಕ ಆರೋಗ್ಯ ಕೇಂದ್ರ, ಕೊಂಪದವು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 'ಪೌಷ್ಟಿಕ ಆಹಾರ ಸದೃಢ ಸಮಾಜಕ್ಕೆ ಆಧಾರ'  ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅರವರು ಮಾತನಾಡಿದರು. ನಮ್ಮ ಜಿಲ್ಲೆ ಶೈಕ್ಷಣಿಕವಾಗಿ ಮುಂದುವರಿದಿದ್ದು ಹಲವು ಜನಾಂದೋಲನಗಳಿಗೆ ಸಾಕ್ಷಿಯಾಗಿದೆ. ಆದರೂ ಕೆಲವು ಕಾರಣಗಳಿಂದಾಗಿ ನಮ್ಮ ಜಿಲ್ಲೆಯಲ್ಲೂ ಅಪೌಷ್ಠಿಕ ಮಕ್ಕಳು ಲಭ್ಯವಾಗಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಒಟ್ಟಾಗಿ ದುಡಿಯುತ್ತಿದ್ದು, ನೈಸರ್ಗಿಕವಾಗಿ ದೊರೆಯುವ ಪೌಷ್ಟಿಕ ಆಹಾರಗಳಿಂದಲೂ ಅಪೌಷ್ಟಿಕತೆ ನಿವಾರಣೆ ಸಾಧ್ಯವಿದೆ ಎಂದರು. 
ಕಾರ್ಯಕ್ರಮದಲ್ಲಿ ಪಡೆಯುವ ಮಾಹಿತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದರೆ ಸಮಸ್ಯೆ ಪರಿಹಾರ ಸುಲಭ ಸಾಧ್ಯ ಎಂದರು. ಮುಚ್ಚೂರು ಗ್ರಾಮಪಂಚಾಯತ್ ಅಧ್ಯಕ್ಷರಾದ  ಪ್ರಕಾಶ್ ಹೆಗ್ಡೆ, ಅಧ್ಯಕ್ಷೀಯ ಭಾಷಣದಲ್ಲಿ ನೂಡಲ್ಸ್ ಸಂಸ್ಕೃತಿಯಿಂದ ದೂರವಾಗಿ ಹಸಿದಾಗ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿದರೆ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಲಿದೆ ಎಂದರು.
ಸಂಪ ನ್ಮೂಲ ವ್ಯಕ್ತಿಗಳಾದ ಡಾ. ಚಿರಾಗ್ ಅವರು ಮಾತನಾಡಿ, ಗರ್ಭ ವತಿಯಾ ದಾಗಿ ನಿಂದ ಉತ್ತಮ ಆಹಾರ ಹಾಗೂ ತಾಯಿ ಕಾರ್ಡಿ ನಲ್ಲಿ ಕೊಟ್ಟಿರುವ ಮಾಹಿತಿ ಯನ್ನು ಅಳ ವಡಿ ಸಿದರೆ ಅಪೌ ಷ್ಟಿಕತೆ ಸಮಸ್ಯೆ ಉದ್ಭವ ವಾಗು ವುದಿಲ್ಲ ಎಂದು ಹೇಳಿ ದರು.
ಕೆಲವು ಅ ವೈಜ್ಞಾನಿಕ  ಸಂಪ್ರ ದಾಯಗಳನ್ನು ಪಾಲಿಸುವುದರಿಂದ ಹಾಗೂ ಅಮ್ಮಂದಿರು ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಅಪೌಷ್ಟಿಕತೆ ಸಮಸ್ಯೆ ಉದ್ಭವಿಸಿದೆ ಎಂದ ಅವರು, ಮಕ್ಕಳಿಗೆ ಆರು ತಿಂಗಳವರೆಗೆ ಎದೆಹಾಲು ಅತ್ಯುತ್ತಮ. ಬಳಿಕ ಎರಡು ವರ್ಷದವರೆಗೆ ತರಕಾರಿ, ಹಣ್ಣು, ಹಂಪಲುಗಳನ್ನು ನೀಡಬಹುದು ಎಂದ ಅವರು, ಅಂಗನವಾಡಿಗಳಲ್ಲಿ ಬೆಳವಣಿಗೆ ನಕ್ಷೆಯನ್ನು ಪಡೆದು ಮಗುವಿನ ಬೆಳವಣಿಗೆಯ ಬಗ್ಗೆ ಸಮಗ್ರ ಮಾಹಿತಿ ಪಡೆಯಿರಿ. ಇಂದು ಸ್ತ್ರೀ ಶಕ್ತಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿದ್ದು ಇವರೆಲ್ಲರ ಸಹಕಾರದಿಂದ ಮಾಹಿತಿ ಕೊರತೆ ಇಲ್ಲ. ಆದರೆ ತಿಳಿದುದನ್ನು ಅನುಷ್ಠಾನಕ್ಕೆ ತರುವ  ಒಳ್ಳೆಯ ಮನಸ್ಸು ಬೇಕಿದೆ ಎಂದರು. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಸ್ಯೆ ನಿವಾರಿಸಿಕೊಂಡು ಜಯದತ್ತ ಹೆಜ್ಜೆ ಇರಿಸುತ್ತಿದ್ದೇವೆ ಎಂದರು.
ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ ರತ್ನಾಕರ ಅವರು, ತಾಲೂಕಿನಲ್ಲಿ 138 ಅಪೌಷ್ಟಿಕ ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ನಿರಂತರ ಅರಿವು ಮೂಡಿಸುವ ಹಾಗೂ ಪೌಷ್ಟಿಕ ಆಹಾರ ವಿತರಿಸುವ ಕ್ರಮಗಳಿಂದ ಸಮಸ್ಯೆ ಪರಿಹಾರವಾಗುತ್ತಿದ್ದು, ಸಮಸ್ಯೆ ನಿವಾರಣೆ ಸಾಮಾಜಿಕ ಹೊಣೆ ಎಂದರು. ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದರು. ಐಸಿಡಿಎಸ್ ನಿರೂಪಣಾಧಿಕಾರಿ ಸುಂದರ ಪೂಜಾರಿ ಮಾತನಾಡಿದರು. ಮುಚ್ಚೂರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಕುಸುಮ, ಗ್ರಾಮ ಪಂಚಾಯತ್  ಸದಸ್ಯರಾದ ಪ್ರಕಾಶ್, ವೀರಪ್ಪ ಗೌಡ, ಶಿಶು ಅಭಿವೃದ್ಧಿ ಅಧಿಕಾರಿ ಶ್ಯಾಮಲ ಉಪಸ್ಥಿತರಿದ್ದರು. ವಾರ್ತಾಧಿಕಾರಿ ಶ್ರೀಮತಿ ರೋಹಿಣಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಮಾಲಿನಿ ಅವರು ನಿರೂಪಿಸಿದರು.