ಮಂಗಳೂರು,ಡಿಸೆಂಬರ್.12:ಮಗು ಈ ದೇಶದ ಮುಂದಿನ ಪ್ರಜೆ.ಅದು ತನ್ನ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡು ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕಿದೆ.ಆದ್ದರಿಂದ ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ತಿಳಿಸಿದ್ದಾರೆ.ಅವರು ಇಂದು ಜಿಲ್ಲಾಧಿ ಕಾರಿ ಗಳ ಕಚೇರಿಯ ಸಭಾಂಗ ಣದಲ್ಲಿ ಕರ್ನಾ ಟಕ ರಾಜ್ಯ ಸಮಗ್ರ ಮಕ್ಕಳ ಸೊಸೈಟಿ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಬಾಲ ನ್ಯಾಯ (ಮಕ್ಕಳ ಪಾಲನೆ ಪೋಷಣೆ)ಅಧಿ ನಿಯಮ 2000,ತಿದ್ದು ಪಡಿ 2006 ಕರ್ನಾಟಕ ನಿಯಮ 2010 ರ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕಾರ್ಯಾ ಗಾರ ದಲ್ಲಿ ಉಪ ಸ್ಥಿತ ರಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ್ಯೆ ಶ್ರೀಮತಿ ಆಶಾ ನಾಯಕ್ ಅವರು ಮಾತ ನಾಡಿ ಮಕ್ಕಳ ಪಾಲನೆ ಪೋಷಣೆ ಯಲ್ಲಿ ತೊಡ ಗಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆ ಗಳು ಕಡ್ಡಾ ಯವಾಗಿ ನೊಂದಾ ಯಿಸಿ ಕೊಳ್ಳ ಬೇಕು.ಪ್ರತೀ 6 ತಿಂಗ ಳಿಗೊ ಮ್ಮೆ ತಮ್ಮ ಲ್ಲಿರುವ ಮಕ್ಕಳ ಆರೋಗ್ಯ ತಪಾ ಸಣೆ ನಡೆಸಬೇಕು. ಮಕ್ಕಳು 7 ದಿನಗಳಿಗಿಂತ ಹೆಚ್ಚು ಹೊರಗೆ ಹೋಗುವಾಗ ಅಂತಹ ಮಕ್ಕಳ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಶ್ರೀಮತಿ ರಮೀಳ ಶೇಖರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ,ಮಹಾನಗರಪಾಲಿಕೆ ಆಯುಕ್ತ ಹರೀಶ್ ಕುಮಾರ್ ಹಾಜರಿದ್ದರು.
ಇಂದಿನ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ 41 ನೊಂದಾಯಿತ ಮಕ್ಕಳ ಪೋಷಣೆ ಸಂಸ್ಥೆಗಳು ಭಾಗವಹಿಸಿದ್ದವು.ಮಕ್ಕಳ ಜಿಲ್ಲಾರಕ್ಷಣಾಧಿಕಾರಿ ಶ್ರೀಮತಿ ಗ್ರೇಸಿ ಗೋನ್ಸಾಲಿಸ್ ಸ್ವಾಗತಿಸಿ,ಜಿಲ್ಲೆಯಲ್ಲಿ 2284 ಮಕ್ಕಳು 41 ನೋಂದಾಯಿತ ಸಂಸ್ಥೆಗಳಲಿದ್ದಾರೆ ಎಂದರು.