Wednesday, December 19, 2012

ಜಲಾನಯನ ಅಭಿವೃದ್ಧಿ ಯೋಜನೆಯಡಿ ಪಶ್ಚಿಮಘಟ್ಟ ಪ್ರಗತಿ

ಮಂಗಳೂರು,ಡಿಸೆಂಬರ್.19: ಆಯ್ದ ಪ್ರದೇಶಗಳ ವ್ಯಾಪ್ತಿಯಲ್ಲಿ ಜಲಾನಯನ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದು. ಅಂತರ್ಜಲ ಅಭಿವೃದ್ಧಿಪಡಿಸುವುದು, ಜಾನುವಾರ ಆರೋಗ್ಯ ಶಿಬಿರಗಳ ಮೂಲಕ  ಜಾನುವಾರಗಳು ಉತ್ಪಾದಕತೆ ಮತ್ತು ಉತ್ಪಾದನೆ ಹೆಚ್ಚಿಸುವುದು. ಭೂರಹಿತ ರೈತ ಮಹಿಳೆ, ಕುಶಲ ಕರ್ಮಿಗಳು, ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರಿಗೆ, ತರಬೇತಿ ನೀಡಿ ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ಉದ್ಯಮ ಶೀಲತೆಯನ್ನು ಬೆಳೆಸುವುದು ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆಗಳ ಉದ್ದೇಶವೆಂದು ಪುತ್ತುರು ತಾಲ್ಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ  ಪ್ರವೀಣ್ ಹೇಳಿದರು.

 ಭಾರತ್ ನಿರ್ಮಾಣ್ ನಿರ್ಮಲ ಭಾರತ ಕಾರ್ಯಾಗಾರದಲ್ಲಿ ಜಿಲ್ಲಾ ನೆರವು ಘಟಕದ ಸಂಯೋಜಕರಾದ ಶ್ರೀಮತಿ ಮಂಜುಳಾ ಮಾತನಾಡಿದರು.
          ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕೇಂದ್ರ ವಾರ್ತಾ ಇಲಾಖೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಏರ್ಪಡಿಸಿರುವ ಭಾರತ ನಿರ್ಮಾಣ ಯೋಜನೆ ಎರಡನೇ ದಿನದ ಕಾರ್ಯಕ್ರಮದಲ್ಲಿ ಕಾರ್ಯಾಗಾರ ಉದ್ದೇಶಿ ಅವರು ಮಾತನಾಡಿದರು.
ಈ ಯೋಜನೆಯ ಮೂಲಕ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡಲಾಗುತ್ತದೆ. ಯೋಜನೆಯನ್ನು ಸಮಗ್ರ  ಜಲಾನಯನ ತತ್ವವಾದ ಕೃಷಿ, ತೋಟಗಾರಿಕೆ, ಅರಣ್ಯೀಕರಣ, ಪಶುಸಂಗೋಪನೆ, ಮೀನುಗಾರಿಕೆ, ಕಾಮಗಾರಿಗಳ ಮೂಲಕ ಮಣ್ಣು, ನೀರು ಸಂರಕ್ಷಣೆ, ಉತ್ಪಾದನೆ, ಉತ್ಪಾದಕತೆ ಹೆಚ್ಚಿಸುವುದರೊಂದಿಗೆ ಆದಾಯೋತ್ಪನ್ನ ಚಟುವಟಿಕೆ ಹಾಗೂ ಸಮುದಾಯ ಸಂಘಟನೆ, ತರಬೇತಿಗಳ ಮೂಲಕ ಸಮಗ್ರ ಜಲಾನಯನ ಅಭಿವೃದ್ಧಿ ಆಧಾರದ ಮೇಲೆ ಅನುಷ್ಠಾನಿಸಿ ಪಶ್ಚಿಮ ಘಟ್ಟ ಪ್ರದೇಶದ ಜನರ ಜೀವನ ಮಟ್ಟ ಸುಧಾರಣೆ ಮಾಡಲಾಗುತ್ತದೆ ಎಂದು ಪ್ರವೀಣ್ ವಿವರಿಸಿದರು.
ಈ ಯೋಜನೆಯ ಮೂಲಕ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡುವುದು. ಔಷಧೀಯ ಸಸ್ಯಗಳನ್ನು ಬೆಳೆಯುವುದು. ಅಂತರ್ಜಲ ಹೆಚ್ಚಳ ಮಾಡುವುದು, ಮಳೆ ನೀರು ಸಂಗ್ರಹಣೆ ಮಾಡಿ ಸಂದಿಗ್ಧ ಹಂತದಲ್ಲಿ ಕೃಷಿಗೆ ಬಳಕೆ ಮಾಡಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ರೈತರ ಆರ್ಥಿಕಾಭಿವೃದ್ಧಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.