Thursday, December 13, 2012

ಜಿಲ್ಲೆಯಲ್ಲಿ 1907 ಜನ ಎಂಡೋಸಂತ್ರಸ್ತರು


ಮಂಗಳೂರು,ಡಿಸೆಂಬರ್.13:ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ,ಬಂಟ್ವಾಳ,ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ 2012 ರ ಡಿಸೆಂಬರ್ 5 ರಿಂದ 8 ರ ವರೆಗೆ 11 ವಿಶೇಷ ತಜ್ಞರ ತಂಡ ನಡೆಸಿದ ಸಮೀಕ್ಷೆಯಂತೆ ಎಂಡೋಸಲ್ಫಾನ್ ಸಿಂಪಣೆಯಿಂದ ಸಂತ್ರಸ್ಥರಾದವರ ಸಂಖ್ಯೆ 1907 ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಶ್ರೀರಂಗಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಹೋರಾಟ ಸಮಿತಿಯವರು ನೀಡಿದ್ದ 92 ಗ್ರಾಮಗಳು ಸೇರಿದಂತೆ ಆರೋಗ್ಯ ಇಲಾಖೆಯ ವಿಶೇಷ ತಂಡಗಳು ಒಟ್ಟು 103 ಗ್ರಾಮಗಳಲ್ಲಿ ಸಮೀಕ್ಷೆಯನ್ನು ನಡೆಸಿದಾಗ ಎಂಡೋ ಸಲ್ಪಾನ್ ಸಿಂಪಡಿಸಿದ ಪ್ರದೇಶಗಳಲ್ಲಿ ಎಂಡೋಸಲ್ಫಾನ್ ಸಂಬಂಧಿಸಿದ ಕಾಯಿಲೆಗಳು 1907 ಜನರಲ್ಲಿ ಕಂಡು ಬಂದಿದೆ ಎಂದು 11 ವಿಶೇಷ ತಜ್ಞರ ತಂಡ ವರದಿ ನೀಡಿದೆ. ವಿಶೇಷ ತಜ್ಞರ ತಂಡದಲ್ಲಿ 7 ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಾದ ಕೆಎಂಸಿ,ಯೇನೋಪಯಾ,ಕೆ.ಎಸ್.ಹೆಗ್ಡೆ,ಫಾದರ್ ಮುಲ್ಲರ್ಸ್,ಶ್ರೀನಿವಾಸ,ಎಜೆ ಆಸ್ಪತ್ರೆ,ಸುಳ್ಯದ ಕೆವಿಜೆ ಸೇರಿವೆ. ಈ ಎಲ್ಲಾ ಮಹಾವಿದ್ಯಾಲಯಗಳ ಜೊತೆ ಆರೋಗ್ಯ ಇಲಾಖೆ ತಜ್ಞರ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.