ಮಂಗಳೂರು,
ಡಿಸೆಂಬರ್.05: ಎಂಡೋಸಲ್ಫಾನ್ ಸಿಂಪಡಿಸಿದ ಪ್ರದೇಶದಲ್ಲಿರುವ ಜನರಲ್ಲಿ
ಕಂಡು ಬರುವ ಕಾಯಿಲೆಗಳನ್ನು ಕಂಡು ಹಿಡಿಯಲು ವಿಶೇಷ ತಜ್ಞ ಶಿಬಿರಗಳನ್ನು ಪುತ್ತೂರಿನ
ಕೊಯ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬೆಳ್ತಂಗಡಿಯ ಕೊಕ್ಕಡ ಪ್ರಾಥಮಿಕ ಆರೋಗ್ಯ
ಕೇಂದ್ರದಲ್ಲಿ ಆಯೋಜಿಸಲಾಗಿದ್ದು ಪ್ರಥಮ ದಿನ ಈ ಪ್ರದೇಶದ 1020 ಜನರ ಪರೀಕ್ಷೆ
ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ. ಆರ್
ಶ್ರೀರಂಗಪ್ಪ ಹೇಳಿದರು.
ಪುತ್ತೂರಿನ ಕೊಯ್ಲಾದಲ್ಲಿ 590 ಜನ ಪರೀಕ್ಷೆಗೊಳಗಾಗಿದ್ದಾರೆ. ಇಲ್ಲಿ ಕೆ ಎಸ್ ಹೆಗಡೆ ಮತ್ತು ಯೆನಪೋಯ ಆಸ್ಪತ್ರೆ ಸಹಕಾರದಿಂದ ಶಿಬಿರವು ಯಶಸ್ವಿಯಾಗಿದೆ ಎಂದ ಆರೋಗ್ಯಾಧಿಕಾರಿಗಳು, ಬೆಳ್ತಂಗಡಿಯ ಕೊಕ್ಕಡದಲ್ಲಿ ಫಾದರ್ ಮುಲ್ಲರ್ಸ್ ನಿಂದ ತಜ್ಞ ವೈದ್ಯರು ಆಗಮಿಸಿದ ಕಾರಣ ಪುತ್ತೂರಿನರಿ ಆಸ್ಪತ್ರೆ ಮತ್ತು ಕೊಯ್ಲಾದ ಶಿಬಿರದಲ್ಲಿದ್ದ ಕೆ ಎಸ್ ಹೆಗಡೆ ಆಸ್ಪತ್ರೆಯ ವೈದ್ಯರನ್ನು ಪರ್ಯಾಯವಾಗಿ ನೇಮಿಸಿ ಸೂಕ್ತ ವ್ಯವಸ್ಥೆ ಮಾಡಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೇಳಿದ್ದಾರೆ.