ಮಂಗಳೂರು,ಡಿಸೆಂಬರ್.20: ಸರ್ವ ಶಿಕ್ಷಣ ಅಭಿಯಾನ ದ.ಕ. ಜಿಲ್ಲೆಯಲ್ಲಿ ದೇಶಕ್ಕೆ ಹೋಳಿಸಿದರೆ ಎರಡು ಹೆಜ್ಜೆ ಮುಂದಿದೆ, ಸ್ವಚ್ಛತೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಮಂಗಳೂರು ಜಿಲ್ಲ್ಲಾ ಸರ್ವ ಶಿಕ್ಷಣ ಅಭಿಯಾನದ, ಉಪಯೋಜನಾ ಅಧಿಕಾರಿ ಶಿವಪ್ರಕಾಶ್ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿಂದು ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ 3 ದಿನಗಳ ಮಾಹಿತಿ ಆಂದೋಲನದ ಮೂರನೇ ದಿನವಾದ ಇಂದು ಸರ್ವ ಶಿಕ್ಷಣ ಅಭಿಯಾನ, ಮಧ್ಯಾಹ್ನ ಬಿಸಿಯೂಟ ಯೋಜನೆ, ಕುರಿತು ಮಾತನಾಡುತ್ತಾ ಸರ್ವ ಶಿಕ್ಷಣ ಅಭಿಯಾನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾಗಿದ್ದು ಇದರ ಮುಖ್ಯ ಉದ್ದೇಶ 6 ರಿಂದ 16 ವರುಷದ ಎಲ್ಲಾ ಮಕ್ಕಳು ಶಾಲೆಗೆ ಬರಬೇಕೆಂಬುದು ಮುಖ್ಯ ಗುರಿಯಾಗಿದೆ. ಈ ಯೋಜನೆಯು ಜಾರಿಗೆ ಬಂದ 11 ವರ್ಷದಲ್ಲಿ ಈ ಜಿಲ್ಲೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ ಹಾಗು ಪ್ರತಿ ಶಾಲೆಯಲ್ಲಿ ಹೆಣ್ಣು ಹಾಗು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವನ್ನು ಈ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದೆ ಎಂದರು.
ಈ ಯೋಜನೆಯು ಜಾರಿಗೆ ಬಂದ ನಂತರ ರಾಜ್ಯದಲ್ಲಿ ಅತೀ ಹೆಚ್ಚು ಸಾಕ್ಷರರು ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಶೇ 86.16 ರಷ್ಟಿದೆ. ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಶೇ 75ರಷ್ಟಿದೆ ಎಂದು ತಿಳಿಸಿದರು.
ಜಿಲ್ಲ್ಲಾ ಉಪಯೋಜನಾ ಅಧಿಕಾರಿ, ಶಿವಪ್ರಕಾಶ್ ಸರ್ವ ಶಿಕ್ಷಣ ಅಭಿಯಾನದ ಬಗ್ಗೆ ಮಾತನಾಡುತ್ತಿರುವುದು. |
ಈ ಯೋಜನೆಯು ಜಾರಿಗೆ ಬಂದ ನಂತರ ರಾಜ್ಯದಲ್ಲಿ ಅತೀ ಹೆಚ್ಚು ಸಾಕ್ಷರರು ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಶೇ 86.16 ರಷ್ಟಿದೆ. ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಶೇ 75ರಷ್ಟಿದೆ ಎಂದು ತಿಳಿಸಿದರು.