ಮಂಗಳೂರು,
ಡಿಸೆಂಬರ್. 29: ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ
ಮಾಡುತ್ತಿರುವ ವಿದ್ಯಾರ್ಥಿನಿಯರ ಹಾಗೂ ಅಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ
ದೃಷ್ಟಿಯಿಂದ ಅಲ್ಲಿಯ ಪ್ರಾಂಶುಪಾಲರು ಹಾಗೂ ಮಹಿಳಾ ಸಿಬ್ಬಂದಿ ಸೇರಿದಂತೆ ಸಮಿತಿ
ರಚಿಸಲಾಗುವುದು, ಈ ಸಮಿತಿಯು ವಿದ್ಯಾರ್ಥಿನಿಯರ ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವ
ಮಹಿಳೆಯರ ಕುಂದು ಕೊರತೆಗಳನ್ನು ಪ್ರತಿ ವಾರಕ್ಕೊಮ್ಮೆ ವಿಚಾರಿಸಬೇಕು ಎಂದು ರಾಜ್ಯದ
ಉನ್ನತ ಶಿಕ್ಷಣ ಸಚಿವರು ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ.ರವಿ ಅವರು
ತಿಳಿಸಿದ್ದಾರೆ.
ಅವರು ಇಂದು ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಈ ಸಮಿತಿಗೆ ದೂರು ನೀಡುವವರ ಬಗ್ಗೆ ಗೌಪ್ಯತೆಯನ್ನು ಕಾಪಾಡುವುದು ಹಾಗೂ ಅವರಿಗೆ ರಕ್ಷಣೆ ಒದಗಿಸುವುದು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಅವಶ್ಯಕತೆ ಕಂಡುಬಂದಲ್ಲಿ ಪೋಲೀಸರಿಗೂ ಮಾಹಿತಿ ನೀಡಲಾಗುವುದೆಂದರು. ಇದಲ್ಲದೆ ಅವರ ಸಮಸ್ಯೆಗಳ ವಿಚಾರ ವಿನಿಮಯಕ್ಕೆ ಆಪ್ತಸಮಾಲೋಚನೆ ನಡೆಸಲಾಗುವುದೆಂದರು.ಈ ಕುರಿತಂತೆ ಚರ್ಚಿಸಲು ಈ ತಿಂಗಳ 31ರಂದು ಅಥವಾ ಜನವರಿ 5ರಂದು ರಾಜ್ಯದ ಎಲ್ಲಾ ಕುಲಪತಿಗಳ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆಯಲಾಗುವುದೆಂದರು.
ವಾರಕ್ಕೊಮ್ಮೆಯಾದರೂ ಶಾಲಾ/ಕಾಲೇಜುಗಳಲ್ಲಿ ನೈತಿಕ/ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದರು.
ಶಿಕ್ಷಣ ಸಂಸ್ಥೆಗಳಲ್ಲಿ ದೌರ್ಜನ್ಯಗಳು ನಡೆಯದಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗುವುದೆಂದರು.