ಮಂಗಳೂರು,ಫೆಬ್ರವರಿ.18: ಇಡೀ ರಾಜ್ಯದಲ್ಲಿ ಮಲೇರಿಯಾದಲ್ಲಿ ಶೇ. 30 ಮಲೇರಿಯಾ ಮಂಗಳೂರು ನಗರದಿಂದ ವರದಿಯಾಗುತ್ತಿದೆ. ನಗರದಲ್ಲಿ ಮಲೇರಿಯಾ ತಡೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆಯ ಆರೋಗ್ಯ ವಿಭಾಗ ಜಂಟಿಯಾಗಿ ಯೋಜನೆ ರೂಪಿಸಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಬಿ ಎಸ್ ರಾಮ್ ಪ್ರಸಾದ್ ಸೂಚಿಸಿದರು.


ಮುಂದಿನ ಬಜೆಟ್ ನಲ್ಲಿ ಮಲೇರಿಯಾ ನಿರ್ಮೂ ಲನೆಗಾಗಿ ವಿಶೇಷ ಅನುದಾನ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಮಿ ಕರನ್ನು ನೇಮಿಸಲು ಅಧಿಕಾರ ನೀಡುವ ಬಗ್ಗೆಯೂ ಇಂದು ಬೆಳಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾ ನಿಸಲಾಗಿದೆ. ನಗರದಲ್ಲಿ ಮಲೇರಿಯಾ ನಿರ್ಮೂಲನೆಗೆ ಮೆಡಿಕಲ್ ಕಾಲೇಜುಗಳ ನೆರವು ಪಡೆಯಲು ಯೋಜಿಸಲಾಗಿದೆ ಎಂದು ಬಿ ಎಸ್ ರಾಮ್ ಪ್ರಸಾದ್ ಹೇಳಿದರು. ನಗರದಲ್ಲಿ ಮಲೇರಿಯಾ ಕುರಿತ ಸವಿವರ ಮಾಹಿತಿಯನ್ನು ಸಭೆಯಲ್ಲಿ ಅಧಿಕಾರಿಗಳಿಂದ ಅವರು ಪಡೆದಿದ್ದಾರೆ.