ಮಂಗಳೂರು,ಫೆಬ್ರವರಿ.04:ಶೈಕ್ಷಣಿಕ ವಲಯದಲ್ಲಿ ರಾಜ್ಯಕ್ಕೆ ಉತ್ತಮ ಮಾದರಿಗಳನ್ನು ನೀಡಿದ ಹೆಗ್ಗಳಿಕೆ ದಕ್ಷಿಣ ಕನ್ನಡ ಜಿಲ್ಲೆಯದ್ದು ಎಂದು ವಿಧಾನಸಭಾ ಉಪಸಭಾಪತಿಗಳಾದ ಎನ್.ಯೋಗೀಶ್ ಭಟ್ ಅವರು ಹೇಳಿದರು.
ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾ ರ್ಯರ ಸಂಘ ಎಸ್ ಎಂ ಕುಶೆ ಪದವಿ ಪೂರ್ವ ಕಾಲೇಜು ಸಭಾಂ ಗಣ ದಲ್ಲಿ ಆಯೋ ಜಿಸ ಲಾಗಿದ್ದ ಪ್ರಾಂಶು ಪಾಲರ ಡೈರಿ-2012 ಬಿಡು ಗಡೆ ಮಾಡಿ ಮಾತ ನಾಡು ತ್ತಿದ್ದರು. ಜಿಲ್ಲೆ ಯು ಶಿಕ್ಷಣ ವಲ ಯದ ಸಮಗ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಉತ್ತಮ ಕೈಂಕರ್ಯಗಳನ್ನು ಸಾಧಿಸಿದ್ದು ಇದು ಜಿಲ್ಲೆಯ ಪ್ರಾಂಶುಪಾಲರ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ ಎಂದರು.ಮುಖ್ಯ ಅತಿಥಿ ಗಳಾಗಿ ಹಾಗೂ ಸಂಘದ ವೆಬ್ ಸೈಟ್ ಉದ್ಘಾ ಟಿಸಿ ಮಾತ ನಾಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು, ಜಿಲ್ಲೆಯು ಶೈಕ್ಷ ಣಿಕ ಕ್ಷೇತ್ರ ದಲ್ಲಿ ಉತ್ತಮ ಹೆಸರು ಮಾಡಿ ರುವು ದಕ್ಕೆ ಎಲ್ಲಾ ಶಿಕ್ಷಕ ರನ್ನು ಅಭಿ ನಂದಿ ಸಿದರು. ಶಿಕ್ಷ ಕರ ಸಮಸ್ಯೆ ಗಳಿಗೆ ಸ್ಪಂದಿ ಸುವು ದಾಗಿ ನುಡಿದ ಅವರು, ಶೈ ಕ್ಷಣಿಕ ವಲ ಯದ ಅಭಿ ವೃದ್ಧಿಗೆ ಸಹ ಕಾರ ನೀಡು ವುದಾಗಿ ನುಡಿ ದರು.
ದಕ್ಷಿಣ ಕನ್ನಡ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಕಾರ್ಯದರ್ಶಿಗಳಾದ ಕೆ.ಕೆ. ಉಪಾಧ್ಯಾಯ ಅವರು ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ವಿ ಎಲ್ ಎಚ್ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಜಗಜೀವನ್ ದಾಸ್ ಭಂಡಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉಪಾಧ್ಯಕ್ಷರಾದ ವಾಸುದೇವ ಕಾಮತ್ ವಂದಿಸಿದರು.