ಮಂಗಳೂರು,ಫೆಬ್ರವರಿ.29: ದಕ್ಷಿಣ ಕನ್ನಡ ಜಿಲ್ಲೆ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಅಯ್ಕೆಯಾದ ಜಿಲ್ಲೆಯಾಗಿದ್ದು, ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ರಾಜ್ಯದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆಗೆ ಜಿಲ್ಲೆ ಪಾತ್ರವಾಗಿದೆ.
ಪುರಸ್ಕಾರ ವಿಜೇತ ಜಿಲ್ಲೆಗೆ ಕೇಂದ್ರ ಸರ್ಕಾರ ರೂ 50ಲಕ್ಷ ಬಹುಮಾನವನ್ನು ನೀಡಲಿದೆ ಎಂದು ಇಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾದಿಕಾರಿ ಡಾ! ಕೆ.ಎನ್. ವಿಜಯಪ್ರಕಾಶ್ ಹರ್ಷೋದ್ಗಾರಗಳ ನಡುವೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಘೋಷಿಸಿದರು.
ಜಿಲ್ಲೆಯ 203ಗ್ರಾಮ ಪಂಚಾಯತ್ ಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ಈಗಾಗಲೆ ಲಭ್ಯವಾಗಿದ್ದು, ಇದೀಗ ಜಿಲ್ಲೆಗೆ ಜಿಲ್ಲಾ ಮಟ್ಟದ ಪುರಸ್ಕಾರವೂ ಲಭ್ಯವಾಗಿದೆ ಎಂದು ಅವರು. ತಿಳಿಸಿದರು.
2009ರಲ್ಲಿ ಜಿಲ್ಲೆಯ ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕುಗಳು ಬ್ಲಾಕ್ ಮಟ್ಟದಲ್ಲಿ ಪುರಸ್ಕಾರಗಳನ್ನು ಪಡೆದಿದ್ದರೆ 2011ರಲ್ಲಿ ಸುಳ್ಯ ಮತ್ತು ಮಂಗಳೂರು ತಾಲ್ಲೂಕುಗಳು ಬ್ಲಾಕ್ ಮಟ್ಟದ ಪುರಸ್ಕಾರ ಪಡೆಯುವ ಮೂಲಕ ಇಡೀ ಜಿಲ್ಲೆಯೇ ನಿರ್ಮಲಗ್ರಾಮ ಪುರಸ್ಕಾರ ಪಡೆದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಎಂಬುದಾಗಿ ಅವರು ತಿಳಿಸಿದರು.