ಮಂಗಳೂರು,ಫೆಬ್ರವರಿ.27 :ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಮಾರ್ಚ್ ಒಂದರಿಂದ ಅನುಷ್ಠಾನಕ್ಕೆ ಬರಲಿದೆ.
ಅಧಿಕಾರಿಗಳು ಈ ಅಧಿನಿಯಮವನ್ನು ಸಮರ್ಪಕವಾಗಿ ಜಾರಿಗೊಳಿಸಲು ಸನ್ನದ್ಧರಾಗಬೇಕೆಂದು ಅಧಿನಿಯಮ ಅನುಷ್ಠಾನದ ಮಾರ್ಗದರ್ಶಿ ಅಧಿಕಾರಿ ವಿ.ಪೊನ್ನುರಾಜ್ ಹೇಳಿದರು.ಅವ ರಿಂದು ಜಿಲ್ಲಾ ಧಿಕಾ ರಿಗಳ ಕಚೇರಿ ಯಲ್ಲಿ ನಡೆದ ಅಧಿ ಕಾರಿ ಗಳ ಸಭೆ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಮುಖ್ಯ ಮಂತ್ರಿ ಗಳ ತವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂ ಕನ್ನು ಪೈಲಟ್ ಯೋಜನೆ ಯಡಿ ಸೇರಿ ಸಿದ್ದು ಪುತ್ತೂರು ವ್ಯಾ ಪ್ತಿಯ ಕಚೇರಿ ಹಾಗೂ ಅಲ್ಲಿನ ವ್ಯ ವಸ್ಥೆ ಗಳ ಬಗ್ಗೆ ಮಾಹಿತಿ ಯನ್ನು ಅಧಿ ಕಾರಿ ಗಳಿಂದ ಪಡೆದು ಕೊಂಡರು.
ಈಗಾಗಲೇ ಅಧಿಕಾರಿಗಳಿಗೆ ಅಧಿನಿಯಮ ಸಂಬಂಧ ತರಬೇತಿಗಳನ್ನು ಆರಂಭಿಸಲಾಗಿದ್ದು, ಮಂಗಳವಾರ ಜಿಲ್ಲಾ ತರಬೇತಿ ಕೇಂದ್ರದಲ್ಲಿ ತರಬೇತಿ ಆಯೋಜಿಸಲಾಗಿದೆ. ಕಂಪ್ಯೂಟರೀಕರಣಗೊಂಡಿರುವ ಇಲಾಖೆಗಳಲ್ಲಿ ಯೋಜನಾ ಅನುಷ್ಠಾನಕ್ಕೆ ಹೆಚ್ಚಿನ ತೊಂದರೆಯಾಗಲಾರದೆಂದ ಅವರು, ಎಲ್ಲ ಕಚೇರಿಗಳಲ್ಲೂ ಮಾಹಿತಿ ಫಲಕಗಳನ್ನು ಅಳವಡಿಸಬೇಕೆಂದರು.
ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪ್ರತಿದಿನ ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳ ಮಾಹಿತಿ ಪಡೆದ ಪೊನ್ನುರಾಜ್ ಅವರು, ಸೇವೆ ನೀಡುವಲ್ಲಿ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಕಾಳಜಿಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಪ್ರಸ್ತಾವಿತ ಅಧಿನಿಯಮದಡಿ ಪ್ರತಿಯೊಬ್ಬ ನಾಗರಿಕರು ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿ ನಿಗದಿ ಮಾಡಿದ ಕಾಲದೊಳಗೆ, ಈ ಅಧಿನಿಯಮಕ್ಕನುಸಾರವಾಗಿ ರಾಜ್ಯದಲ್ಲಿ ನಾಗರಿಕ ಸಂಬಂಧಿ ಸೇವೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಎಲ್ಲರೂ ಗಮನದಲ್ಲಿರಿಸಿ ಕೊಳ್ಳಬೇಕು ಎಂದರು. ಸ್ಥಳೀಯ ಪ್ರಾಧಿ ಕಾರ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಕಂ ದಾಯ ಇಲಾಖೆ, ಆಹಾರ ಮತ್ತು ನಾಗ ರಿಕ ಸರಬ ರಾಜು ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಅಧಿಕಾ ರಿಗಳು ಉಪ ಸ್ಥಿತರಿದ್ದು ತಮ್ಮ ಇಲಾಖೆ ಗಳ ಗಣಕೀ ಕರಣ ಮಟ್ಟದ ಬಗ್ಗೆ ಮಾಹಿತಿ ನೀಡಿದರು. ಸಿಇಒ ಡಾ ಕೆ ಎನ್ ವಿಜಯ ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.