ಮಂಗ ಳೂರು ವಿಶ್ವ ವಿದ್ಯಾ ನಿಲಯ ಕಾಲೇ ಜಿನ ರ ವೀಂದ್ರ ಕಲಾ ಭವನ ದಲ್ಲಿ ಘಟಿ ಕೋತ್ಸ ವದ ಬಗ್ಗೆ ಇಂದು ಮಾಹಿತಿ ನೀಡಿದ ಅವರು, ಘಟಿ ಕೋತ್ಸ ವದಲ್ಲಿ 44 ಮಂದಿಗೆ ಡಾಕ್ಟ ರೇಟ್ ಪದವಿ (ಕಲೆ- 13, ವಿಜ್ಞಾನ-26, ವಾಣಿಜ್ಯ-5), 17 ಎಂಫಿಲ್ (ಕಲೆ-1, ವಿಜ್ಞಾನ- 9, ವಾಣಿಜ್ಯ-7), 35 ಂದಿಗೆ ಚಿನ್ನದ ಪದಕ ಹಾಗೂ 57 ಮಂದಿಗೆ ನಗದು ಬಹುಮಾನ ನೀಡಲಾಗುವುದು. ಒಟ್ಟು 62 ಮಂದಿಗೆ ರ್ಯಾಂಕ್ (ಸ್ನಾತಕೋತ್ತರ ಪದವಿ -44, ಪದವಿ-18, ಕಲೆ- 12, ವಿಜ್ಞಾನ ಮತ್ತು ತಂತ್ರಜ್ಞಾನ-33, ವಾಣಿಜ್ಯ- 9, ಕಾನೂನು- 3, ಶಿಕ್ಷಣ- 3, ಸ್ನಾತಕೋತ್ತರ ಡಿಪ್ಲೊಮಾ- 2) ನೀಡಲಾಗುವುದು ಎಂದು ತಿಳಿಸಿದರು.
ಘಟಿಕೋತ್ಸವ ಸಮಾರಂಭವು ರಾಜ್ಯಪಾಲ ಹಾಗೂ ಮಂಗಳೂರು ವಿವಿಯ ಕುಲಾಧಿಪತಿ ಎಚ್.ಆರ್. ಭಾರದ್ವಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಪ್ರಭಾರ ಹಾಗೂ ಮಂಗಳೂರು ವಿವಿಯ ಸಹಕುಲಾಧಿಪತಿಯಾಗಿರುವ ಡಿ.ವಿ. ಸದಾನಂದ ಗೌಡ ಉಪಸ್ಥಿತರಿರುವರು. ಅಣುಶಕ್ತಿ ಆಯೋಗದ ಅಧ್ಯಕ್ಷ ಡಾ. ಶ್ರೀಕುಮಾರ್ ಬ್ಯಾನರ್ಜಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದವರು ತಿಳಿಸಿದರು.

ಮುಂಬೈನ ಡಿಪಾರ್ಟಮೆಂಟ್ ಆಫ್ ಅಟೊಮಿಕ್ ಎನರ್ಜಿ (ಡಿಎಇ)ಯ ಅಂಗಸಂಸ್ಥೆಗಳಾದ ಬೋರ್ಡ್ ಆಫ್ ರಿಸರ್ಚ್ ಇನ್ ನ್ಯೂಕ್ಲಿಯರ್ ಸೈಯನ್ಸ್ (ಬಿಆರ್ಎನ್ಎಸ್)ಮತ್ತು ಬೋರ್ಡ್ ಆಫ್ ರೇಡಿಯೇಶನ್ & ಐಸೋಟೋಪ್ ಟೆಕ್ನಾಲಜಿ (ಬಿಆರ್ಐಟಿ)ಸಹಯೋಗದೊಂದಿಗೆ ಸ್ಥಾಪಿಸಿರುವ ಸೆಂಟರ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೋಐಸೋಟೊಪ್ಸ್ & ರೇಡಿಯೇಶನ್ ಟೆಕ್ನಾಲಜಿ (ವಿಕಿರಣಶೀಲಧಾತುಗಳು ಮತ್ತು ವಿಕಿರಣೀಯ ತಂತ್ರಜ್ಞಾನ ಅನ್ವಯಿಕ ಕೇಂದ್ರ)ಯ ಉದ್ಘಾಟನೆ ಯೂ ಘಟಿಕೋತ್ಸವ ಸಮಾರಂಭದ ತರುವಾಯ ಅತಿಥಿಗಳಿಂದ ನಡೆಯಲಿದೆ ಎಂದು ಕುಲಪತಿಗಳು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಕೆ. ಚಿನ್ನಪ್ಪ ಗೌಡ, ಪತ್ರಿಕೋದ್ಯಮ ವಿಭಾಗದ ಡಾ.ಜಿ.ಪಿ ಶಿವರಾಂ, ಪ್ರೊ. ಯಡಪಡಿತ್ತಾಯ ಉಪಸ್ಥಿತರಿದ್ದರು.