ಮಂಗಳೂರು,ಫೆಬ್ರವರಿ.09: ಕೆಲವು ಸಂದರ್ಭಗಳಲ್ಲಿ ವಿವಿಧ ಕಾರಣಗಳಿಂದ ಅಸಂಘಟಿತ ಸೇವಾ ಕ್ಷೇತ್ರದಲ್ಲಿರುವ ಅರ್ಹ ಕಾರ್ಮಿಕರಿಗೆ ಸೌಲಭ್ಯಗಳು ತಲುಪುತ್ತಿಲ್ಲ. ಇಂತಹ ಅಸಂಘಟಿತ ಕಾರ್ಮಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳಲ್ಲಿ 42 ಕಾರ್ಮಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಅವ ರಿಂದು ಜಿಲ್ಲಾ ಧಿಕಾ ರಿಗಳ ಕಚೇರಿ ಯಲ್ಲಿ ಆಯೋ ಜಿಸ ಲಾಗಿದ್ದ ಕಾ ರ್ಮಿಕ ಸೇವಾ ಸೌಲಭ್ಯ ಕೇಂ ದ್ರದ ಲೋಗೋ ಉದ್ಘಾ ಟನೆ ಯನ್ನು ನೆರ ವೇರಿಸಿ ಮಾತ ನಾಡು ತ್ತಿದ್ದರು. ಮಾಹಿತಿ ಇದ್ದ ವರಿಗೆ ಮಾತ್ರ ಸೌಲಭ್ಯ ಗಳನ್ನು ಪಡೆ ಯಲು ಸಾಧ್ಯ ಎಂಬ ಮಾತು ಚಾಲ್ತಿ ಯಲ್ಲಿರುವ ಸಂದರ್ಭ ದಲ್ಲಿ ಅರ್ಹ ಶೇಕಡ ನೂರರಷ್ಟು ಜನರಿಗೆ ಸಾಮಾಜಿಕ ಸುರಕ್ಷಾ ಸೌಲಭ್ಯಗಳನ್ನು ಲಭ್ಯವಾಗಿಸಲು ಜಿಐಝಡ್ ಎಂಬ ಜರ್ಮನಿ ಸಂಸ್ಥೆಯ ಜೊತೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ಕರ್ನಾಟಕದ ಐದು ಜಿಲ್ಲೆಗಳನ್ನು ಆರಿಸಲಾಗಿದೆ ಎಂದು ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಪ್ರಪ್ರಥಮವಾಗಿ ತನ್ನ ಗುರಿಯನ್ನು ಸಾಧಿಸುವ ವಿಶ್ವಾಸವನ್ನು ಜಿಲ್ಲಾಧಿಕಾರಿಗಳಾದ ಡಾ ಎನ್ ಎಸ್ ಚನ್ನಪ್ಪಗೌಡ ವ್ಯಕ್ತಪಡಿಸಿದರು.ಜಿಐಝಡ್ ನ ಯೋಜನಾ ನಿರ್ದೇಶಕರಾದ ಹನ್ಸ್ ಕ್ರಿಟೋಫ್ ಅಮನ್ ಅವರು ಮಾತನಾಡಿ, ತಮ್ಮ ಸಂಸ್ಥೆ ಪ್ರಪಂಚದಾದ್ಯಂತ ವಿವಿಧ ಸಾಮಾಜಿಕ ಸೇವಾ ಯೋಜನೆಯಡಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಭಾರತ ಸರ್ಕಾರದೊಂದಿಗೆ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಭಾಗಿ ಪಾತ್ರ ವಹಿಸಲು ಒಪ್ಪಂದ ಮಾಡಿಕೊಂಡಿದ್ದು, ಇಲ್ಲಿ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ನಿರತವಾಗಿದೆ ಎಂದರು.
ಯೋಜನೆಯ ಸಲಹೆಗಾರರಾದ ಟಿ ಎಸ್ ಮಂಜುನಾಥ್ ಅವರು ಯೋಜನೆಯ ಉದ್ದೇಶಗಳನ್ನು ವಿವರಿಸಿದರು. ಅಪರ ಕಾರ್ಮಿಕ ಆಯುಕ್ತ ಗುರುದಾಸ್ ಅವರು, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ಉಪಸ್ಥಿತರಿದ್ದರು. ಸಹಾಯಕ ಕಾರ್ಮಿಕ ಆಯುಕ್ತರಾದ ಅಪ್ಪಯ್ಯ ಶಿಂಧಿಹಟ್ಟಿ ಸ್ವಾಗತಿಸಿದರು. ಕಾರ್ಮಿಕಾಧಿಕಾರಿ ಡಿ ಜಿ ನಾಗೇಶ್ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಯೋಜನಾ ಅನುಷ್ಠಾನಕರಿಗೆ ತರಬೇತಿ ನೀಡಲಾಯಿತು.