ಮಂಗಳೂರು,ಮೇ.31:ಅಭಿವೃದ್ದಿ ಹೊಂದಿದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಅರಣ್ಯ ಪ್ರದೇಶ ಕಡಿಮೆಯಿದ್ದು, ರಾಜ್ಯದಲ್ಲಿ ಅರಣ್ಯವನ್ನು ಸಂರಕ್ಷಿಸಲು ಮತ್ತು ಅರಣ್ಯೇತರ ಭೂಮಿಯಲ್ಲಿ ಅರಣ್ಯ ಬೆಳೆಸಲು ಮುಖ್ಯಮಂತ್ರಿಗಳು 150 ಕೋಟಿ ರೂ. ಗಳ ಹೆಚ್ಚುವರಿ ಅನುದಾನ ನೀಡಿರುವುದಾಗಿ ಸಣ್ಣ ಕೈಗಾರಿಕೆ ಮತ್ತು ಅರಣ್ಯ ಸಚಿವ ಸಿ. ಎಚ್.ವಿಜಯಶಂಕರ್ ಹೇಳಿದರು.
ಅವರಿಂದು ಗುಂಡ್ಯದಲ್ಲಿ ಅರಣ್ಯ ಇಲಾಖೆಯ ಪ್ಲಾಂಟೇಷನ್ ಗಳ ವೀಕ್ಷಣೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಅರಣ್ಯ ಇಲಾಖೆ ಸಹಜ ಮಳೆ, ಶುದ್ಧ ಗಾಳಿ ಹಾಗೂ ಹಸುರೀಕರಣದ ಉದ್ದೇಶವನ್ನಿರಿಸಿ ವಿನೂತನ ಯೋಜನೆಗಳನ್ನು ರೂಪಿಸಿದ್ದು ಅನುಷ್ಠಾನಕ್ಕೆ ತರಲು ಹಣಕಾಸಿನ ಕೊರತೆ ಇಲ್ಲ ಎಂದು ಅವರು ನುಡಿದರು.ಕೃಷಿ ಪ್ರೋತ್ಸಾಹ ಯೋಜನೆಯಡಿ ಅರಣ್ಯ ಇಲಾಖೆಯು ಕೃಷಿಕರಿಗೆ ತನ್ನದೇ ಆದ ಕೊಡುಗೆಯನ್ನು ನೀಡಲು ತೀರ್ಮಾನಿಸಿದ್ದು, ಕೃಷಿಕರು ಬಯಸಿದ ಸಸಿ ನೀಡಲು ನಿರ್ಧರಿಸಲಾಗಿದೆ. ರೈತರಿಂದ ಈ ಸಂಬಂಧ ಅರ್ಜಿ ಪಡೆದು ಆರ್ ಟಿ ಸಿ ಆಧಾರದಲ್ಲಿ ಉಚಿತವಾಗಿ ಸಸಿಗಳನ್ನು ಹಂಚಲಾಗುವುದಲ್ಲದೆ ಒಂದು ಸಸಿಗೆ ಮೂರು ವರ್ಷ ಅವುಗಳ ನಿರ್ವಹಣೆಗೆ 45 ರೂ.ಗಳಂತೆ ಅನುದಾನವನ್ನೂ ನೀಡಲಾಗುವುದು ಎಂದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಯಲ್ಲಿ ಅಜರ್ಿಗಳು ಲಭ್ಯವಾಗಲಿದ್ದು, ನಮೂನೆ ಯನ್ನು ಸಿದ್ಧಪಡಿಸಲಾಗಿದ್ದು ಅಂತಿಮಗೊಳಿಸಬೇಕಿದೆ ಎಂದರು.ಅರಣ್ಯ ಇಲಾಖೆ ಏಕ ರೂಪದ ಸಸ್ಯೋ ತ್ಪಾದನೆಗೆ ಇತಿಶ್ರೀ ಹಾಡಿದ್ದು, ನೀಲ ಗಿರಿ ಯನ್ನು ನಿಷೇ ಧಿಸ ಲಾಗಿದೆ. ಅಕೇಷಿ ಯವನ್ನು ಬೆಟ್ಟ ಗಳ ಮೇಲೆ ಮತ್ತು ಸಮುದ್ರ ದ ಅಂಚಿ ನಲ್ಲಿ ಬೆಳೆ ಯಲು ಮಾತ್ರ ಅವ ಕಾಶ ನೀಡ ಲಾಗಿದೆ ಎಂದರು.ಸಸಿ ಗಳನ್ನು ಉತ್ಪಾ ದಿಸಿ, ವಿತ ರಿಸಲು ರಾಜ್ಯ ಕೃಷಿ ವಿಶ್ವ ವಿದ್ಯಾಲಯ, ತೋಟಗಾರಿಕೆ ಕೇಂದ್ರ ಸರ್ಕಾರದ ಕೃಷಿ, ಸಂಶೋಧನಾ ಕೇಂದ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಡಂಬಡಿಕೆ ಮಾಡಲಾಗಿದೆ. ಮುಂದಿನ ವರ್ಷದಿಂದ ಅವರಿಂದ ಸಸಿ ಪಡೆದು ರೈತರಿಗೆ ವಿತರಿಸಲು ಹಾಗೂ ಗುಣಮಟ್ಟದ ಖಾತ್ರಿಗೆ ಇಲಾಖೆಯ ಸಂಶೋಧನಾ ವಿಭಾಗಗಳನ್ನು ಬಳಸಿಕೊಳ್ಳುವ ಬಗ್ಗೆಯೂ ತಜ್ಞರ ಅಭಿಪ್ರಾಯ ಪಡೆಯಲಾಗಿದೆ ಎಂದರು. ಪ್ರತೀ ಜಿಲ್ಲೆಯಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಟ್ರೀ ಪಾಕ್ರ್ ಮಾಡುವ ಯೋಜನೆ ಹೊಂದಿದೆ. ಮಂಗಳೂರಿನಲ್ಲಿ ಪಿಲಿಕುಳದಲ್ಲಿ ಟ್ರೀ ಪಾರ್ಕ್ ಮಾಡುವ ಸಂಬಂಧ ಅಧಿಕಾರಿಗಳು ಸ್ಥಳ ಗುರುತಿಸಿದ್ದಾರೆ ಎಂದರು.
ನಿತ್ಯ ಯಾತ್ರಿಕರು, ಪ್ರವಾಸಿಗರು ಬರುವ ದೇವಾಲಯಗಳ ಪ್ರದೇಶಗಳಲ್ಲಿ ದೇವರೊಂದಿಗೆ ವನವನ್ನೂ ನೋಡಿ ಆನಂದಿಸುವಂತಾಗಲು ಪ್ರತೀ ಬೆಟ್ಟದಲ್ಲಿ ಸಾಂಪ್ರಾದಾಯಿಕ, ಅಳಿವಿನಂಚಿನ ಸಸ್ಯಗಳನ್ನು ಬೆಳೆಸಲಾಗುವುದು. ಪ್ರತೀ ದೇವವನದಲ್ಲಿ ಅರಣ್ಯ ಇಲಾಖೆಯಿಂದ ನರ್ಸರಿಯನ್ನೂ ಆರಂಭಿಸಲು ಚಿಂತಿಸಲಾಗಿದೆ ಎಂದು ಅರಣ್ಯ ಸಚಿವರು ಹೇಳಿದರು.ಕಾಶ್ಮೀರದ ದಾಲ್ ಸರೋವರ, ಮೈಸೂರಿನ ಕಾರಂಜಿ ಕೆರೆ ಮಾದರಿಯಲ್ಲಿ ಕೆರೆಗಳ ಅಭಿವೃದ್ಧಿಯನ್ನು ಲಭ್ಯವಿರುವ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಲು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳಲ್ಲಿ ವೃಕ್ಷ ಪ್ರೇಮ ಬೆಳೆಸಲು 'ಮಗುವಿಗೊಂದು ಮರ' ಎಂಬ ಘೋಷವಾಕ್ಯದಡಿ ಮಗು ಬಯಸಿದ ಸಸಿಯನ್ನು ಪ್ರಮಾಣ ವಚನ ಬೋಧಿಸಿ ನೀಡಲಾಗುವುದು. 5ನೇ ತರಗತಿಯಿಂದ ಪಿಯುಸಿ ವರೆಗಿನ ಎಲ್ಲ ಮಕ್ಕಳಿಗೆ ಸಸಿ ನೀಡಲಾಗುವುದು.
ಪ್ರಾದೇಶಿಕ ಅರಣ್ಯ ನೀತಿ: ಇದುವರೆಗೆ ಇಲಾಖೆ ಕೇಂದ್ರದ ನೀತಿಯ ಚೌಕಟ್ಟಿನಲ್ಲಿ ಅರಣ್ಯ ನೀತಿ, ಮಾರ್ಗದರ್ಶಿಗಳು ಲಭ್ಯವಿದ್ದು, ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿಲ್ಲ; ಮುಂದಿನ ಒಂದು ತಿಂಗಳೊಳಗೆ ಪ್ರಾದೇಶಿಕ ಅರಣ್ಯ ನೀತಿ ರೂಪಿಸಲಾಗುವುದು ಎಂದ ಸಚಿವರು, ಎಲ್ಲ ಯೋಜನೆಗಳಿಗೆ ಜೂನ್ 20ರಿಂದ ಜುಲೈ 25ರೊಳಗೆ ಚಾಲನೆ ನೀಡಲಾಗುವುದು ಎಂದರು.
ನೈಜ ಕಾಡು ಕಾಡಾಗಿ ಉಳಿಯಲು ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯೊಳಗೆ ಯಾವುದೇ ಕಿರು ನೀರಾವರಿ ಯೋಜನೆಗಳಿಗೆ ತನ್ನ ಅವಧಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಸಚಿವರು, ಪರಿಸರಕ್ಕೆ ಪೂರಕವಾದ ಸೋಲಾರ್ ಶಕ್ತಿಗೆ ಆದ್ಯತೆ ನೀಡಲಾಗುವುದೆಂದರು. ಪ್ರಾದೇಶಿಕ ಅರಣ್ಯ ಅಧಿಕಾರಿ ಶಾಂತಪ್ಪ, ಡಿಸಿಎಫ್ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.