ಮಂಗಳೂರು,ಮೇ.07:ಪೊಲೀಸ್ ವ್ಯವಸ್ಥೆಗೆ ಅತ್ಯಾಧುನಿಕತೆಯ ಸ್ಪರ್ಶ ನೀಡಿದ್ದು, ಕಾನೂನು ಸುವ್ಯವಸ್ಥೆಯಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದು ಸರ್ಕಾರ ಮನಗಂಡಿದ್ದು, ಇದಕ್ಕಾಗಿಯೇ ರಾಜ್ಯ ದಕ್ಷ ಪೊಲೀಸ್ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ರಾಜ್ಯ ಗೃಹ ಮತ್ತು ಸಾರಿಗೆ ಸಚಿವರಾದ ಆರ್. ಅಶೋಕ್ ಹೇಳಿದರು.ಅವರು ಶನಿವಾರ ರೂ. 29 ಲಕ್ಷ ವೆಚ್ಚದಲ್ಲಿ ನಿಮರ್ಿಸಿದ ವಿಟ್ಲ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜ ಘಾತುಕ ಶಕ್ತಿ ಗಳನ್ನು ಮಟ್ಟ ಹಾಕು ವಲ್ಲಿ ರಾಜ್ಯ ಪೊಲೀಸರು ಯಶಸ್ವಿ ಯಾಗಿ ರುವು ದಲ್ಲದೆ, ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಯಿಂದ ಉತ್ತಮ ವರ್ಚಸ್ಸನ್ನು ಹೊಂದಿದೆ. ಈ ವ್ಯವಸ್ಥೆ ಯನ್ನು ಇನ್ನಷ್ಟು ಉತ್ತಮ ಗೊಳಿಸಲು ಅಗತ್ಯ ಕ್ರಮ ಗಳನ್ನು ಸರ್ಕಾರ ಕೈ ಗೊಂಡಿದೆ ಎಂದು ಅವರು ನುಡಿದರು. ಉತ್ತಮ ಮೂಲಭೂತ ಸೌಲಭ್ಯಗಳು ಹಾಗೂ ಆಧುನಿಕ ವ್ಯವಸ್ಥೆಗಳಿಂದ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಲು ಸಾಧ್ಯ ಎಂದ ಅವರು ಇಲಾಖೆಯ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಲು ಸರ್ಕಾರ ಬದ್ಧ ಎಂದರು. ನಗರ ಪ್ರದೇಶದಲ್ಲಿ ಪೊಲೀಸರಿಗೆ ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ವಸತಿ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮುಂಬೈಯಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಪೊಲೀಸರಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಅದೇ ಮಾದರಿಯನ್ನು ಇಲ್ಲಿ ಅನುಸರಿಸಲಾಗುವುದು. ಸರಕಾರಿ ಮತ್ತು ಪೊಲೀಸ್ ಇಲಾಖೆಯ ಜಮೀನನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದು ಗೃಹಸಚಿವರು ನುಡಿದರು.ಪೊಲೀಸರ ವಸತಿ ಸೌಲಭ್ಯದ ಬೇಡಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಖಾಸಗಿ ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದ ಗೃಹಸಚಿವರು ಪೊಲೀಸ್ ವಸತಿ ನಿಗಮ ಗ್ರಾಮೀಣ ಭಾಗಗಳಲ್ಲಿ ಕಾರ್ಯೋನ್ಮುಖವಾಗಲಿದೆ ಎಂದರು.
ಬೆಳಗಾವಿಯಲ್ಲಿ ಸಿಆರ್ ಪಿಎಫ್ ತರಬೇತಿ ಕೇಂದ್ರವೊಂದನ್ನು ತೆರೆಯಲು ಉದ್ದೇಶಿಸಿದೆ. ಅದಕ್ಕಾಗಿ 400 ಎಕರೆ ಜಮೀನು ಹುಡುಕಾಟ ನಡೆದಿದೆ. ಎಂದು ಗೃಹಸಚಿವರು ಹೇಳಿದರು.ಕೇಂದ್ರೀಯ ಭದ್ರತಾ ಪಡೆಯ ತರಬೇತಿ ಕೇಂದ್ರದ ಸ್ಥಾಪನೆಯಿಂದ ಒಂದಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಆ ಭಾಗ ಅಭಿವೃದ್ಧಿ ಹೊಂದಲಿದೆ. ಅಷ್ಟೇ ಅಲ್ಲದೆ ರಾಜ್ಯದ ಕಮಾಂಡೋ ಪಡೆಗೆ ಇಲ್ಲಿ ತರಬೇತಿ ಸಿಗಲಿದೆ. ರಾಜ್ಯದ ಕಮಾಂಡೋಗಳಿಗೆ ತರಬೇತಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಸರಕಾರದ ಕೋರಿಕೆಯನ್ನು ಸಿಆರ್ ಪಿಎಫ್ ಒಪ್ಪಿದೆ ಎಂದು ಅಶೋಕ್ ವಿವರಿಸಿದರು.
ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆ ಒಂದೇ ಪೊಲೀಸ್ ವಿಭಾಗವನ್ನು ಹೊಂದಿದೆ. ಶೀಘ್ರ ಬಂಟ್ವಾಳ ಉಪವಿಭಾಗವನ್ನು ರೂಪಿಸಲಾಗುವುದು ಎಂದು ಗೃಹಸಚಿವರು ಹೇಳಿದರು.ನೆಲ್ಯಾಡಿ, ಧರ್ಮಸ್ಥಳ ಮತ್ತು ಬೆಳ್ಳಾರೆ ಉಪಠಾಣೆಗಳನ್ನು ಪೊಲೀಸ್ ಠಾಣೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಬಂಟ್ವಾಳದಲ್ಲಿ ನೂತನ ಸಂಚಾರ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದ ಗೃಹ ಸಚಿವರು ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ತನಿಖೆಯಲ್ಲಿ ವೈಜ್ಞಾನಿಕ ಮಾದರಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ನೂತನ ಪೊಲೀಸ್ ಠಾಣಾ ಕಟ್ಟಡವನ್ನು ನಿರ್ಮಿಸಿದ ಗುತ್ತಿಗೆದಾರ ಸುರೇಶ್ ಅವರನ್ನು ಗೃಹಸಚಿವರು ಸನ್ಮಾನಿಸಿದರು.ರಾಜ್ಯ ದಲ್ಲಿ ಬಿಜೆಪಿ ಸರ ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಂಟ್ವಾಳ ತಾಲೂಕಿ ನಾದ್ಯಂತ ಅನೇಕ ಅಭಿ ವೃದ್ಧಿ ಕಾಮ ಗಾರಿ ಗಳು ನಡೆ ದಿವೆ ಎಂದು ಮುಖ್ಯ ಅತಿಥಿ ದ.ಕ.ಜಿಲ್ಲಾ ಉಸ್ತು ವಾರಿ ಸಚಿವ ಕೃಷ್ಣ ಜೆ. ಪಾಲೆ ಮಾರ್ ಅಭಿ ಪ್ರಾಯ ಪಟ್ಟರು. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ದಕ್ಷತೆಗೆ ಹೆಸರಾಗಿರುವರೆಂದರು.
ಸಮಾ ರಂಭಗಳಲ್ಲಿ ಪ್ಲಾಸ್ಟಿಕ್ ಬೇಡ:ಇಲಾಖೆಗಳ ಸಮಾ ರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ಯಾಗುತ್ತಿದೆ. ಹೂ ಗುಚ್ಛ ಗಳಲ್ಲಿ ಯಥೇಚ್ಛ ಪ್ಲಾಸ್ಟಿಕ್ ಉಪ ಯೋಗಿಸು ತ್ತಿದ್ದಾರೆ. ಇಂದಿನ ಸಮಾ ರಂಭವೂ ಅದಕ್ಕೆ ಹೊರತಾಗಿಲ್ಲ. ಪರಿಸರ ಸಚಿವನಾಗಿ ಎಚ್ಚರಿಸುವುದು ನನ್ನ ಜವಾಬ್ದಾರಿ. ಸರಕಾರಿ ಕಾರ್ಯಕ್ರಮಗಳು, ವಿವಿಧ ಇಲಾಖೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ಪಾಲೆಮಾರ್ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುತ್ತೂರಿನ ಶಾಸಕರಾದ ಮಲ್ಲಿಕಾಪ್ರಸಾದ್, ಪೊಲೀಸ್ ಇಲಾಖೆ ಜನಸ್ನೇಹಿ ವರ್ತನೆಯನ್ನು ಇನ್ನೂ ಹೆಚ್ಚಾಗಿ ರೂಢಿಸಿಕೊಳ್ಳಬೇಕೆಂದರು.
ಬಂಟ್ವಾಳ ಶಾಸಕರಾದ ಬಿ. ರಮಾನಾಥ ರೈ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.ದ.ಕ. ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ , ಜಿ.ಪಂ. ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಎಂ.ಎಸ್. ಮಹಮ್ಮದ್, ವಿಟ್ಲ ಗ್ರಾ.ಪಂ. ಅಧ್ಯಕ್ಷ ರಮಾನಾಥ ವಿಟ್ಲ , ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಲೋಕ್ ಮೋಹನ್, ಕೆಎಸ್ಆರ್ ಪಿ ಕಮಾಂಡೆಂಟ್ ರಾಮದಾಸ್ ಗೌಡ, ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕಿ ಡಾ| ರೋಹಿಣಿ ಕಟೋಚ ಸಮಾರಂಭದಲ್ಲಿ ಪಾಲ್ಗೊಂಡರು.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಲಾಬೂರಾಮ್ ಸ್ವಾಗತಿಸಿದರು. ಹೆಚ್ಚುವರಿ ಎಸ್ಪಿ ಎಂ. ಪ್ರಭಾಕರ್ ವಂದಿಸಿದರು. ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರ್ವಹಿಸಿದರು.