Wednesday, May 4, 2011

18 ಕಾರ್ಮಿಕ ಫಲಾನುಭವಿಗಳಿಗೆ ಚೆಕ್ ವಿತರಣೆ

ಮಂಗಳೂರು,ಮೇ.04:ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗಿದ್ದು, ಅರ್ಹ ಕಾರ್ಮಿಕರು ಸರ್ಕಾರ ನೀಡುವ ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕೆಂದು ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಅವರು ಹೇಳಿದರು.

ಇಂದು ಕಾರ್ಮಿಕ ಇಲಾಖೆ ಯಲ್ಲಿ ಕಾರ್ಮಿಕ ದಿನಾ ಚರಣೆ ಅಂಗವಾಗಿ ಆಯೋಜಿ ಸಲಾದ ಕಾರ್ಮಿಕ ಸಪ್ತಾಹ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡು ತ್ತಿದ್ದರು. ಕಾರ್ಮಿ ಕರು ಹಕ್ಕು ಗಳೊಂ ದಿಗೆ ಕರ್ತವ್ಯ ಪ್ರಜ್ಞೆ ಯನ್ನು ಮೆರೆಯ ಬೇಕೆಂದ ಅಧಿಕಾರಿ ಗಳು, ಮೇ ಒಂದ ರಿಂದ 7ರವರೆಗೆ ಇಲಾಖೆ ಕಾರ್ಮಿಕ ಕಾನೂನು ಗಳ ಬಗ್ಗೆ ಕಾರ್ಮಿ ಕರಿಗೆ ಮಾಹಿತಿ ನೀಡು ತ್ತಿದೆಯಲ್ಲದೆ, ಧೂಮಪಾನ ನಿಷೇಧ, ಕುಡಿತದಿಂದಾಗುವ ಅನಾಹುತಗಳು, ತಲೆಹೊರೆ ಕಾರ್ಮಿಕರಿಗಾಗಿ ವಿಶೇಷ ಮಾಹಿತಿ ಶಿಬಿರ, ವಾಸನ್ ಐ ಕೇರ್ ನಲ್ಲಿ ಮಹಿಳಾ ಕಾರ್ಮಿಕರಿಗಾಗಿ ಲೈಂಗಿಕ ದೌರ್ಜನ್ಯ ಕುರಿತ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು ಎಂದರು.
ಇಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ನೋಂದಣಿಯ ಬಗ್ಗೆ ಸಂವಾದ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಲಯದಲ್ಲಿ ವಲಸೆ ಕಾರ್ಮಿಕರು ಗಣನೀಯ ಸಂಖ್ಯೆಯಲ್ಲಿರುವುದು ಹಾಗೂ ಇವರಿಗೆ ದೃಢೀಕರಣ ನೀಡಲು ಮಾಲೀಕರು ಹಿಂದೇಟು ಹಾಕುತ್ತಿರುವುದನ್ನು ಇಲಾಖೆ ಗಮನಿಸಿ, ಕಾರ್ಮಿಕ ಮುಖಂಡರು ದೃಢೀಕರಿಸ ಬಹುದು. ಹಾಗೂ ಕಾರ್ಮಿಕ ಸಂಘಕ್ಕೆ ಒಂದು ಗುರುತು ಚೀಟಿ ಮಾಡಿಸಿದರೆ 5 ರೂ. ನೀಡುವುದಾಗಿಯೂ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದರು.ಕಾರ್ಮಿಕ ಸಂಘ ಟನೆ ಗಳ ಮುಖಂ ಡರು ಹೇಳಿ ದಂತೆ ಹಲವು ಸಮಸ್ಯೆ ಗಳನ್ನು ನೀತಿ ನಿರೂಪ ಕರ ಗಮ ನಕ್ಕೆ ತರ ಲಾಗಿದ್ದು, ಕಾರ್ಮಿ ಕರ ಅನು ಕೂಲ ಕ್ಕಾಗಿ ವ್ಯವಸ್ಥೆ ಯನ್ನು ವಿಕೇಂ ದ್ರೀಕ ರಣ ಗೊಳಿಸ ಲಾಗಿದೆ. ಎಲ್ಲ ತಾಲೂಕು ಕೇಂದ್ರ ಗಳಲ್ಲಿ ಕಾರ್ಮಿಕ ನಿರೀಕ್ಷ ಕರಿದ್ದು, ಕಾರ್ಮಿ ಕರು ಸಮಸ್ಯೆ ಗಳ ಬಗ್ಗೆ, ಸೌಲಭ್ಯ ಗಳ ಬಗ್ಗೆ ಇವ ರನ್ನು ಸಂಪ ರ್ಕಿಸಿ ಪರಿಹಾರ ಕಂಡು ಕೊಳ್ಳ ಬಹು ದಾಗಿದೆ. ಕಾರ್ಮಿಕ ಮಕ್ಕಳಿಗಾಗಿರುವ ಶೈಕ್ಷಣಿಕ ಸ್ಕಾಲರ್ ಶಿಪ್ ನ್ನು ಹೆಚ್ಚಿಸಲಾಗಿದೆ ಎಂದರು. ಕಲ್ಯಾಣ ಮಂಡಳಿಯಲ್ಲಿ 778 ಕೋಟಿ ರೂ.ಗಳಿದ್ದು, ಸಹಾಯ ನೀಡಲು ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಹಾಯಕ ಕಾರ್ಮಿಕ ಆಯುಕ್ತರು, 9066 ಕಟ್ಟಡ ಕಾರ್ಮಿಕರು ತಮ್ಮ ಹೆಸರನ್ನು ದಾಖಲಿಸಿದ್ದು, ಆರು ಲಕ್ಷ ರೂ.ಗಳ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಉಡುಪಿಯಲ್ಲಿ ಫಲಾನುಭವಿಗಳ ಸಂಖ್ಯೆ ಜಾಸ್ತಿ ಇದೆ. ಇಲ್ಲೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು. ಕಟ್ಟಡ ಕಾರ್ಮಿಕರಲ್ಲಿ ಕೌಶಲ್ಯ ತರಬೇತಿಗಾಗಿ ಕೌಶಲ್ಯ ತರಬೇತಿ ಮಂಡಳಿಯಿಂದ ತರಬೇತಿ ನೀಡಲು ಸಿದ್ಧತೆ ನಡೆಸಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರು ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಶಾಶ್ವತವಾಗಿ ಅಂಗವಿಕಲರಾದ ಕಾರ್ಮಿಕನ ಪತ್ನಿ ನ್ಯಾನ್ಸಿ ಡಿ ಸೋಜಾ ಅವರಿಗೆ ಇಂದು ಒಂದು ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು. ಉಳಿದವರಿಗೆ 3000 ದಿಂದ 10,000 ರೂ.ಗಳ ಪರಿಹಾರದ ಚೆಕ್ ವಿತರಿಸಲಾಯಿತು.
ಸಮಾರಂಭದಲ್ಲಿ ಅನಿಸಿಕೆ ಹಂಚಿಕೊಂಡ ಕಾರ್ಮಿಕ ಸಂಘಟನೆಗಳ ಮುಖಂಡರಾದ ಮೊಹಮ್ಮದ್ ರಫಿ, ಬಿ ಎಸ್ ಚಂದ್ರು, ವಾಸುದೇವ, ವಸಂತ ಬೆಳ್ತಂಗಡಿ, ಶಶಿಧರ ಅವರು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದರು. ನಿವೃತ್ತಿಯ ನಂತರ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ, ಶೈಕ್ಷಣಿಕ ಧನ ಸಹಾಯ ನೀಡುವ ಬಗ್ಗೆ, ಆರೋಗ್ಯ ನೆರವಿಗೆ ಹೆಚ್ಚಿನ ಧನಸಹಾಯ ನೀಡುವ ಬಗ್ಗೆ, ಕಾರ್ಮಿಕ ಹೋರಾಟಗಳಿಂದ ಸಂಘಟಿತರಾದ ಬಗ್ಗೆ ಸಭೆಯ ಗಮನ ಸೆಳೆದರು.
ಕಾರ್ಮಿಕ ಅಧಿಕಾರಿ ಡಿ.ಜಿ. ನಾಗೇಶ್ ಸ್ವಾಗತಿಸಿದರು. ವಿಭಾಗ ಎರಡರ ಅಧಿಕಾರಿ ಗೋಪಾಲಗೌಡ ಉಪಸ್ಥಿತರಿದ್ದರು. ವಿಷ್ಣು ಪ್ರಸಾದ್ ಸ್ವಾಗತಿಸಿದರು. ಸತ್ಯನಾರಾಯಣ ವಂದಿಸಿದರು.