ಇಂದು ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಕೆ ಟಿ ಶೈಲಜಾ ಅವರ ಅಧ್ಯಕ್ಷ ತೆಯಲ್ಲಿ ನಡೆದ ಕೆಡಿಪಿ ಸಭೆ ಯಲ್ಲಿ ಕನ್ನಡ ಶಾಲೆ ಗಳ ಸ್ಥಿತಿ ಗತಿ, ಆಡಳಿತ ದಲ್ಲಿ ಕನ್ನಡ ಮತ್ತು ಸಾರ್ವ ಜನಿಕ ಸ್ಥಳ ಗಳಲ್ಲಿ ಕನ್ನಡ ಬಳಕೆಯ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾ ಪಿಸಿದರು.
ಕನ್ನಡ ಶಾಲೆಗಳು ಅಧ್ಯಾಪಕರಿಲ್ಲದೆ ನಿತ್ರಾಣಗೊಂಡಿದ್ದು, ಸರ್ಕಾರ ಈ ಸಂಬಂಧ ನೀತಿ ರೂಪಿಸುವಾಗ ನಮ್ಮ ಜಿಲ್ಲಾ ಪಂಚಾಯತ್ ನಿರ್ಣಯವೂ ಅದಕ್ಕೆ ಪೂರಕವಾಗಿರಲಿ ಎಂದು ಕಸಾಪ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ಇಲಾಖೆಗಳಲ್ಲೂ ಕನ್ನಡ ಬಳಕೆಯಾಗುತ್ತಿದ್ದು, ವೆನ್ ಲಾಕ್ ನಲ್ಲಿ ಮಾತ್ರ ಆಡಳಿತಾತ್ಮಕ ಕಾರಣದಿಂದ ಶೇ. 80 ರಷ್ಟು ಕನ್ನಡ ಬಳಸ ಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದಲ್ಲಿ ಪ್ರದರ್ಶನ ಫಲಕಗಳನ್ನು ಅಳವಡಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು; ದಂಡ ವಿಧಿಸಬೇಕು ಎಂಬ ಪ್ರಸ್ತಾಪಕ್ಕೆ ಉತ್ತರಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು , ಈ ಬಗ್ಗೆ ಕಾಯಿದೆಯಲ್ಲಿ ಅವಕಾಶವಿಲ್ಲ. ಈ ಕಾರ್ಯವನ್ನು ಮಹಾನಗರಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂಬ ಉತ್ತರ ಸಭೆಯಲ್ಲಿ ದೊರೆಯಿತು.
ಕೃಷಿ ಇಲಾಖೆಯಲ್ಲಿ 2010-11 ನೇ ಸಾಲಿನಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಭತ್ತದ ಬೆಳೆ ವಿಸ್ತೀರ್ಣ ಕ್ರಮವಾಗಿ 32,408 ಹೆ., 20982 ಹೆ. ಮತ್ತು 1558 ಹೆಕ್ಟೇರ್ ಆಗಿದ್ದು, ಒಟ್ಟು 54 948 ಹೆಕ್ಟೇರಿನಲ್ಲಿ ಬೆಳೆ ಬೆಳೆಯಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 220 ಹೆಕ್ಟೇರ್ ಕಡಿಮೆಯಾಗಿರುತ್ತದೆ. ಭತ್ತದ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಚ್ಚರಿಕೆ ನೀಡಿದರು. ಇಂದಿರಾ ಆವಾಸ್ ಮತ್ತು ಬಸವ ಇಂದಿನಾ ಆವಾಸ್ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ನಿಗದಿತ ಸಮಯದಲ್ಲಿ ಗುರಿ ಸಾಧಿಸುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮೋನಾಲ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಪಾಲ್ಗೊಂಡರು. ಮುಖ್ಯ ಯೋಜನಾಧಿಕಾರಿ ಟಿ ಜೆ ತಾಕತ್ ರಾವ್, ಮುಖ್ಯ ಲೆಕ್ಕಾಧಿಕಾರಿ ರಾಮದಾಸ್ ಉಪಸ್ಥಿತರಿದ್ದರು.