Monday, May 9, 2011

ಯಶಸ್ಸು ನನ್ನದಲ್ಲ ಜಿಲ್ಲೆಯ ಜನರದ್ದು: ಸಿಇಒ ಶಿವಶಂಕರ್

ಮಂಗಳೂರು,ಮೇ.09:ಸದುದ್ದೇಶವನ್ನಿರಿಸಿಕೊಂಡು ಪ್ರಯೋಗಗಳನ್ನು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಉತ್ತಮ ಕರ್ಮಭೂಮಿ; ಉದ್ದೇಶ ಮಾತ್ರ ಉತ್ತಮವಿರಬೇಕು. ಇಲ್ಲಿನ ಜನರು ಉತ್ತಮ ಬದಲಾವಣೆಗಳನ್ನು ಸ್ವಾಗತಿಸುತ್ತಾರೆ ಹಾಗಾಗಿಯೇ ನಾನು ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಹೇಳಿದರು.

ಅವರಿಂದು ಜಿಲ್ಲಾ ಪಂಚಾ ಯತ್ ನಲ್ಲಿ ಆಯೋ ಜಿಸಿದ್ದ ಬೀಳ್ಕೊ ಡುಗೆ ಸಮಾ ರಂಭದಲ್ಲಿ ತಮ್ಮ ಕಾರ್ಯಾ ನುಭವ ಗಳನ್ನು ಮುಕ್ತ ವಾಗಿ ಹಂಚಿ ಕೊಂಡರು. ಜಿಲ್ಲೆ ಯಲ್ಲಿ 5 ವರ್ಷಗಳ ತಮ್ಮ ಸುದೀರ್ಘ ಸೇವಾ ವಧಿಯಲ್ಲಿ ಹಲವು ಯೋಜನೆ ಗಳ ಅನು ಷ್ಠಾನ ದಲ್ಲಿ ತೃಪ್ತಿ ಕಂಡು ಕೊಂಡಿದ್ ದೇನೆಂದ ರಲ್ಲದೆ, ಕುಡಿಯುವ ನೀರಿಗಾಗಿ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚು ಅನುದಾನ ಪಡೆಯಲು ಯಶಸ್ವಿಯಾಗಿದ್ದೇನೆಂದರು. ಜಿಲ್ಲೆಯಲ್ಲಿ ಭತ್ತದ ಬೆಳೆ ವಿಸ್ತೀರ್ಣ ಕಡಿಮೆಯಾಗಿರುವ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಲು ಅವರು ಈ ಸಂದರ್ಭದಲ್ಲಿ ಮರೆಯಲಿಲ್ಲ. ರಾಜ್ಯದ 13 ಎಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಚಿತ್ರದುರ್ಗದಿಂದ ಉಡುಪಿಗೆ ಬಂದ ಸಂದರ್ಭ ಹಾಗೂ ಕಾರಣವನ್ನು ವಿವರಿಸಿದರು. ಬರಗಾಲದ ಪ್ರದೇಶಗಳಲ್ಲಿ ಕೆಲಸ ಮಾಡಿ ಕರಾವಳಿಯಲ್ಲಿ ಕೆಲಸದ ಅನುಭವ ಬಯಸಿ ಕರಾವಳಿಯೆಡೆಗೆ ಬಂದುದಾಗಿ ಹೇಳಿದ ಅವರು, ಮತ್ತೆ ತಿಳಿಯಿತು ಬರಗಾಲವಿಲ್ಲದೆ ಅತಿವೃಷ್ಠಿ ಪ್ರದೇಶಗಳಲ್ಲೂ ಗಂಭೀರ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು. ಈ ಸಂಬಂಧ ಸುದೀರ್ಘ ಯೋಚನೆ, ಯೋಜನೆಯ ಬಳಿಕ ರೂಪುಗೊಂಡುದ್ದೇ ಮಳವೂರು ಮತ್ತು ಕಿನ್ನಿಗೋಳಿಯ ಕುಡಿಯುವ ನೀರಿನ ಯೋಜನೆಗಳು. ನಮ್ಮ ತಾಂತ್ರಿಕ ಇಂಜಿನಿಯರ್ ಗಳು ಸಾಮಾಜಿಕ ಇಂಜಿನಿಯರ್ ಗಳಾಗಿ ಬದಲಾಗಬೇಕಾದ ಅಗತ್ಯವನ್ನು ಇಂದು ಮತ್ತೆ ಒತ್ತಿ ಹೇಳಿದ ಅವರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮಪಂಚಾಯತ್ ಜನಸೇವೆಗಿರುವ ಅತ್ಯುತ್ತಮ ಅವಕಾಶಗಳು ಎಂದ ಅವರು, ದರೆಗುಡ್ಡೆ ಗ್ರಾಮಪಂಚಾಯತ್ ನ ಕೆಳಪುತ್ತಿಗೆಯಲ್ಲಿ ಸೌರಶಕ್ತಿ ಬಳಸಿಕೊಳ್ಳುವಲ್ಲಿ ಆದ ವೈಫಲ್ಯ ಅದರಿಂದ ಪಡೆದ ಅನುಭವಗಳು, ವೈಫಲ್ಯದ ಸಂಪೂರ್ಣ ಹೊಣೆ ಹೊತ್ತು ಮತ್ತೆ ಈಗ ಕಿನ್ನಿಗೋಳಿಯಲ್ಲಿ ಕಡಿಮೆ ವೆಚ್ಚದಲ್ಲಿ ಸೌರಶಕ್ತಿಯ ಬಳಕೆಗೆ ನಾಂದಿ ಹಾಡಲಾಗಿದೆ ಎಂದರು. ಜಿಲ್ಲೆಗೆ ಬಂದ ಸಂದರ್ಭದಲ್ಲಿ ಭಾಷೆ ಹಾಗೂ ಸಂಸ್ಕೃತಿಯ ಗೊಂದಲಗಳನ್ನು ನೆನಪಿಸಿಕೊಂಡ ಸಿಇಒ ಅವರು, ಇಲ್ಲಿನ ಅಧಿಕಾರಿಗಳು ಹಾಗೂ ಜನರು ಸಲಹೆಗಳನ್ನು ಸ್ವೀಕರಿಸಿದರು; ಪಾಲಿಸಿದರು ಹಾಗಾಗಿ ಕೈಗೊಂಡ ಕಾರ್ಯಗಳಿಗೆ ತಾತ್ವಿಕ ಅಂತಿಮ ರೂಪು ದೊರೆಯಿತೆಂದರು. ಇಲ್ಲಿನ ಸಂಸ್ಕೃತಿ, ಕಾಳಜಿ, ನಾಜೂಕುಗಳು ಜಿಲ್ಲೆಯ ಅಭಿವೃದ್ದಿಗೆ ಪೂರಕವಾಯಿತು. ಬಹಳಷ್ಟು ಕಲಿತಿದ್ದೇನೆ. ಸೇವಾವಧಿಯ ಅವಿಸ್ಮರಣೀಯ ಅನುಭವಗಳು ಈ ಜಿಲ್ಲೆಯಲ್ಲಾಗಿದೆ ಎಂದರು.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್ ವಹಿಸಿದ್ದರು. ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್, ಉಪಕಾರ್ಯದರ್ಶಿ ಕೆ. ಶಿವರಾಮೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಸದಸ್ಯರಾದ ದೇವರಾಜ್, ಮೊಹಮ್ಮದ್, ರೈತ ಮುಖಂಡ ಯಾದವ್ ಮಾತನಾಡಿದರು. ಪ್ರಭಾರ ಸಿಇಒ ಹಾಗೂ ಡಿಎಸ್ ಆಗಿರುವ ಶಿವರಾಮೇಗೌಡ ಸೇರಿದಂತೆ ಹಲವು ಅಧಿಕಾರಿಗಳು ಮಾತನಾಡಿದರು.ನಳಿನಿ ಶಿವಶಂಕರ್ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಎಎಸ್ ಚಂದ್ರಶೇಖರ್ ಮಸಗುಪ್ಪಿ ಸ್ವಾಗತಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅರುಣ್ ಫುರ್ಟಡೊ ವಂದಿಸಿದರು.