ಮಂಗಳೂರು,ಜೂನ್.01:ವಿದ್ಯಾರ್ಥಿಗಳು ಅಪೌಷ್ಠಿಕತೆಯಿಂದ ತುಂಬಿದ ಆಹಾರಗಳನ್ನು ಸೇವಿಸುವ ಬದಲು ಪೌಷ್ಠಿಕವಾದ ಹಾಲು ಅಥವಾ ಹಾಲಿನಿಂದ ಮಾಡಿದ ಆಹಾರೋತ್ಪನ್ನಗಳನ್ನು ಸೇವಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯನಾರಾಯಣ್ ಹೇಳಿದರು.
ಇಂದು ವಿಶ್ವ ಕ್ಷೀರ ದಿನಾಚರಣೆಯ ಅಂಗವಾಗಿ ಕುಲಶೇಖರದ ಸಂತ ಜೋಸೆಫರ್ ಶಾಲೆ, ಕದ್ರಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆ ಹಾಗೂ ಮಂಗಳಜ್ಯೋತಿ ಶಾಲೆಯ ಸುಮಾರು 1400 ವಿದ್ಯಾರ್ಥಿಗಳಿಗೆ ಉಚಿತವಾಗಿ ನಂದಿನಿಯಿಂದ ಹಾಲು ವಿತರಿಸಲಾಯಿತಲ್ಲದೆ ಹಾಲಿನ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಜರುಗಿದವು.ರಜತ ವರ್ಷದ ಸವಿನೆನಪಿಗಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ಹಾಲಿನ ಕುರಿತು ಅರಿವಿನ ಆಂದೋಲನದಡಿ ಒಕ್ಕೂಟ ಇಂದು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸ್ಥಳೀಯ ಗಣ್ಯರು ಆಗಮಿಸಿ ಶುಭಕೋರಿದರು. ಹೈನುಗಾರಿಕೆ ಹಲವಾರು ಕಾರಣಗಳಿಂದ ಇಂದು ನೆಲಕಚ್ಚುತ್ತಿರುವ ಸಂದರ್ಭದಲ್ಲಿ ರೈತರ ಅನುಕೂಲಕ್ಕೆ ಸರ್ಕಾರ ನೀಡಿದ ಎರಡು ರೂ. ಪ್ರೋತ್ಸಾಹ ಧನ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಹೈನುಗಾರಿಕೆ ಉತ್ತೇಜನಕ್ಕೆ ಪೂರಕವಾಗಿದ್ದು ಹಾಲಿನಿಂದ ಆರೋಗ್ಯ ವೃದ್ಧಿಯ ಬಗ್ಗೆಯೂ ಹಾಲಿನಲ್ಲಡಗಿರುವ ಪೌಷ್ಠಿಕಾಂಶಗಳ ಬಗ್ಗೆಯೂ ಮಕ್ಕಳಿಗೆ ವಿವರಿಸಲಾಯಿತು.
ಹಾಲು ಒಕ್ಕೂ ಟದ ಮಾಜಿ ನಿರ್ದೇ ಶಕ ಚಂದ್ರ ಶೇಖರ ನಾಯಕ್, ವಿದ್ಯಾಂಗ ಇಲಾಖೆ ಯಿಂದ ಎಂ ಎನ್ ನರ ಸಿಂಹ ಭಟ್, ಸಂತ ಜೋಸೆಫ್ ರ ಶಾಲೆ ಯಲ್ಲಿ ಫಾದರ್ ವಲೇ ರಿಯನ್ ಪಿಂಟೊ, ಕದ್ರಿ ದ.ಕ.ಜಿ.ಪಂ ಶಾಲೆ ಯಲ್ಲಿ ಮುಖ್ಯೋ ಪಾಧ್ಯಾ ಯರಾದ ಪುರು ಷೋತ್ತಮ ಜೋಗಿ, ಪ್ರಾಥ ಮಿಕ ಶಾಲೆಯ ಪುಷ್ಪಾ ವತಿ,ಪಾಲಿಕೆ ಸದಸ್ಯೆ ರೂಪಾ ಡಿ ಬಂಗೇರ, ಮಂಗಳ ಜ್ಯೋತಿ ಯಲ್ಲಿ ಪ್ರೊ ರಾ ಜೇಂದ್ರ ಶೆಟ್ಟಿ, ಗಣೇಶ್ ಭಟ್ ಉಪ ಸ್ಥಿತ ರಿದ್ದರು. ಸಹಾ ಯಕ ವ್ಯವ ಸ್ಥಾಪಕ ಸ್ವಾಮಿ ಶೆಟ್ಟಿ ಅವರು ಕಾರ್ಯ ಕ್ರಮ ನಿರ್ವ ಹಿಸಿದರು.