ಮಂಗಳೂರು,ಜೂನ್.24:ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಸಂಸದರ ನಿಧಿಯಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಪರಿಶೀಲನೆಯನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲಿ ಪ್ರತೀ ತಿಂಗಳು ನಡೆಸುವುದಾಗಿ ತಿಳಿಸಿದ್ದಾರೆ.ಅವರಿಂದು ತಮ್ಮ ಮಂಗಳೂರಿನ ಕಚೇರಿಯಲ್ಲಿ ನಡೆದ ಸಂಸದರ ಅನುದಾನದಿಂದ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಪರಿಶೀಲನೆಯನ್ನು ಮಾಡಿ ಮಾತನಾಡುತ್ತಿದ್ದರು.
ತಮ್ಮ ಈ ತನ ಕದ ಅಧಿಕಾ ರಾವಧಿ ಯಲ್ಲಿ ಸಂಸ ದರ ನಿಧಿ ಯಿಂದ ಬಂದಿ ರುವ ರೂ. 3 ಕೋಟಿ ಗಳ ಜೊತೆಗೆ 2 ಕೋಟಿ ರೂ. ಮಳೆ ಹಾನಿ ಪರಿ ಹಾರ ಕ್ಕಾಗಿ ಹಾಗೂ ಮುಖ್ಯ ಮಂತ್ರಿ ಗಳ ವಿಶೇಷ ಅನು ದಾನ ರೂ. 6 ಕೋಟಿ ಗಳನ್ನು ಕ್ಷೇತ್ರಕ್ಕೆ ತರು ವಲ್ಲಿ ಯಶಸ್ವಿ ಯಾಗಿ ದ್ದೇನೆ ಎಂದು ತಿಳಿಸಿದ ಸಂಸದರು, ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿದ ಹಾಗೂ 3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸುತ್ತಿರುವ ರಾಜ್ಯದ ಏಕೈಕ ಸಂಸದ ಎಂದು ಹೆಮ್ಮೆಯಿಂದ ತಿಳಿಸಿದರು.
ಅಧಿಕಾರಿಗಳಲ್ಲಿ ಚುರುಕು ಮೂಡಿಸುವುದು ಅಭಿವೃದ್ಧಿ ಕಾರ್ಯಗಳ ಶೀಘ್ರ ಅನುಷ್ಠಾನಕ್ಕೆ ತಾವು ಕೈಗೊಳ್ಳುತ್ತಿರುವ ಪ್ರಗತಿಪರಿಶೀಲನಾ ಸಭೆಗಳು ನೆರವಾಗುತ್ತಿವೆ ಎಂದ ಸಂಸದರು, ಇನ್ನು ಒಂದು ವಾರದೊಳಗೆ ಸಂಸದರ ಕ್ಷೇತ್ರಾಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸುವಂತೆ ಈಗಾಗಲೇ ಅಂದಾಜು ಪಟ್ಟಿ ಸಿದ್ಧವಿರುವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅವರು ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಸಂಸದರ ನಿಧಿ ಬಳಕೆಯಲ್ಲಿ ಪ್ರಗತಿ ಆಗಿದೆ ಆದರೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಂಪ್ಯೂಟರ್ ಮೂಲಕ ಲೋಕಸಭೆ ಕಚೇರಿಗೆ ಕಳುಹಿಸುವಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಅಲ್ಲಿಗೆ ಶೂನ್ಯ ವರದಿ ತಲುಪಿಸುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ ಇನ್ನು ಮುಂದೆ ಕ್ರಮಬದ್ಧ ವರದಿಗಳನ್ನು ಕಳುಹಿಸುವಂತೆ ತಾಕೀತು ಮಾಡಿದರು.
ಕಿಲ್ಪಾಡಿ ಬಳಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿ ಕಾಮಗಾರಿ ಬಿಲ್ಲು ರೂ. 75,000 ಗಳು ಕಂಟ್ರಾಕ್ಟುದಾರರಿಗೆ ಶೀಘ್ರ ಪಾವತಿಸುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸತ್ಯನಾರಾಯಣ ಅವರಿಗೆ ಸೂಚಿಸಿದರು.