ಮಂಗಳೂರು,ಜೂನ್.04: ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಸಾಮಾಜಿಕ ನ್ಯಾಯಕ್ಕೆ ಅರ್ಥ ಒದಗಿಸಿಕೊಡಲು ಸಾಧ್ಯ. ಸಮಾಜದ ಸರ್ವಂಗೀಣ ಅಭಿವೃದ್ಧಿಗೆ ಹಾಗೂ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಲು ಇಲಾಖೆಯಲ್ಲಿ ಅವಕಾಶವಿದ್ದು ಇಲಾಖೆ ಇತರ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಸಾಮಾಜಿಕ ಹಿತಕ್ಕಾಗಿ ದುಡಿಯಲೇ ಬೇಕಾದ. ಆ ಬಗ್ಗೆ ಶ್ರದ್ಧೆ ವಹಿಸದ ಅಧಿಕಾರಿಗಳು ತಮ್ಮ ಇಲಾಖೆಗೆ ಬೇಡ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಎಚ್ಚರಿಸಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಪಂಚಾ ಯತ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಇಲಾಖಾ ಕಾರ್ಯ ಕ್ರಮಗಳ ಪರಿ ಶೀಲನೆ ನಡೆಸಿದರು. ಇಲಾಖೆ ಯಲ್ಲಿ ಅನು ದಾನ ಸಾಕ ಷ್ಟಿದ್ದು, ಅರ್ಹರ ಅಭಿ ವೃದ್ದಿಗೆ ಉಪ ಯೋಗ ವಾಗದೆ ಪ್ರತೀ ವರ್ಷ ಕ್ಯಾರಿ ಓವರ್ ಆಗು ತ್ತಿರುವುದು, ಶೇ. 50 ರಷ್ಟು ಸಾಧನೆ ಯಾಗದಿರುವುದು, ಹಣದ ದುರುಪಯೋಗವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ನಾಗರೀಕರ ಹಕ್ಕು ಜಾರಿ ನಿರ್ದೇಶನಾಲಯದ 16 ಕರ್ತವ್ಯಗಳನ್ನು ಸಭೆಯಲ್ಲಿ ಓದಿಸಿದರು. ಪೊಲೀಸ್ ಇಲಾಖೆಯು ತಮ್ಮ ಸಮಾಜಕ್ಕೆ ನೀಡಬೇಕಾದ ನ್ಯಾಯದ ಬಗ್ಗೆ ಇಲಾಖಾಧಿಕಾರಿಗಳಿಗೆ ಮನವರಿಕೆ ಮಾಡಿದರು.
ಇಲಾಖೆಯಲ್ಲಿ ಅನುದಾನದ ದುರುಪಯೋಗದ ಬಗ್ಗೆ ಸಾಕಷ್ಟು ಪ್ರಕರಣಗಳು ವರದಿಯಾಗಿದ್ದು, ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ ತಡೆಯಲು ಜಿಲ್ಲಾ ಅಧಿಕಾರಿಗಳು ಒಂದು ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಲ್ಲಿ ಅಂತಹ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದರು. ತಾಲೂಕು ಸಮಾಜ ಕಲ್ಯಾಣಾ ಧಿಕಾರಿ ಗಳು ಯಾವುದೇ ಬ್ಯಾಂಕ್ ಖಾತೆ ಯನ್ನು ಹೊಂದು ವಂತಿಲ್ಲ. ಹೊಂದಿ ದ್ದರೆ ಆ ಖಾತೆ ಗಳನ್ನು ಜಿ.ಪಂ. ಮುಖ್ಯ ಕಾರ್ಯ ನಿರ್ವ ಹಕ ಅಧಿ ಕಾರಿ ಮತ್ತು ಜಿಲ್ಲಾಧಿ ಕಾರಿ ಗಳು ತಕ್ಷಣ ದಿಂದ ಜಪ್ತಿ ಮಾಡತಕ್ಕದ್ದು ಎಂದು ಸಚಿವರು ಸೂಚನೆ ನೀಡಿದರು.
ರಾಜ್ಯ ಮತ್ತು ಕೇಂದ್ರ ಸರಕಾರದ ಕಾರ್ಯಕ್ರಮಗಳ ಅನುದಾನವನ್ನು ಒಂದೇ ಖಾತೆಗೆ ಜಮಾ ಮಾಡಲಾಗುವುದು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಬಿಸಿಎಂ ಅಧಿಕಾರಿ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಮತ್ತು ನಿಗಮಗಳ ಜಿಲ್ಲಾ ವ್ಯವಸ್ಥಾಪಕರು ಜಿ.ಪಂ. ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಅಥವಾ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯುವಂತೆ ಆದೇಶ ನೀಡಲಾಗಿದೆ ಎಂದು ನಾರಾಯಣ ಸ್ವಾಮಿ ನುಡಿದರು.
ಸಮಾಜ ಕಲ್ಯಾಣ ಇಲಾಖೆಯ ಅನುದಾನ ದುರುಪಯೋಗ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಶೀಘ್ರವೇ ಇಲಾಖೆ ಆನ್ಲೈನ್ ಪಾವತಿ ಪದ್ಧತಿಯನ್ನು ಜಾರಿಗೆ ತರಲಿದೆ ಎಂದು ನುಡಿದರು.
ಕ್ರಮಕ್ಕೆ ಸೂಚನೆ:ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಾದಿರಿಸಿದ ಅನುದಾನವನ್ನು ಸಮರ್ಥ ರೀತಿಯಲ್ಲಿ ವಿನಿಯೋಗಿಸಬೇಕು. ಈ ಅನುದಾನದ ಬಳಕೆಯಲ್ಲಿ ಮತ್ತು ಕಲ್ಯಾಣ ಕಾರ್ಯಕ್ರಮದ ಅನುಷ್ಠಾನದಲ್ಲಿ ಶೇ. 50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರ ಮೇಲೆ ಕ್ರಮ ಜರಗಿಸಬೇಕೆಂದು ಸಚಿವರು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯತ್ ಗಳು, ನಗರ ಪಂಚಾಯತುಗಳು, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ಪರಿಶಿಷ್ಟರಿಗಾಗಿ ಕಾದಿರಿಸಿದ ಶೇ. 25 ಮತ್ತು 22.75 ಅನುದಾನವನ್ನು ಹೆಚ್ಚು ಕಾಳಜಿಯಿಂದ ಮತ್ತು ಸಮರ್ಥವಾಗಿ ಬಳಸಬೇಕು ಎಂದು ನಾರಾಯಣ ಸ್ವಾಮಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು
ಕಾಟಾಚಾರದ ಸಭೆ ಬೇಡ:ಜಿಲ್ಲಾ ಜಾಗೃತಿ ಸಮಿತಿ ಸಭೆ ಮತ್ತು ಜಿಲ್ಲಾ ಉಸ್ತುವಾರಿ ಸಮಿತಿ ಸಭೆ ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಜರುಗಬೇಕು.ಸಭೆಯು ಕಾಟಾ ಚಾರಕ್ಕೆ ನಡೆ ಯದೆ ಅಲ್ಲಿ ದೌರ್ಜನ್ಯ ಪ್ರಕರ ಣಗಳು, ಪರಿಶಿ ಷ್ಟರ ಸೌಲಭ್ಯ ಗಳ ಚರ್ಚೆ ನಡೆ ಯ ಬೇಕು. ಪಬ್ಲಿಕ್ ಪ್ರಾಸಿ ಕ್ಯೂಟರ್ ಸೇರಿದಂತೆ ಎಲ್ಲಾ ಅಧಿ ಕಾರಿ ಗಳು ಸಭೆ ಯಲ್ಲಿ ಪಾಲ್ಗೊ ಳ್ಳಬೇಕಾ ದದ್ದು ಅಗತ್ಯ ಎಂದು ಸಚಿವರು ನುಡಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್, ಜಿಲ್ಲಾಧಿಕಾರಿ ಡಾ. ಎನ್.ಎಸ್. ಚನ್ನಪ್ಪ ಗೌಡ, ಜಿ.ಪಂ. ಉಭಯ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಶಿವರಾಮೇ ಗೌಡ, ಪ್ರಾಣೇಶ್ ರಾವ್, ಎಸ್ಪಿಗಳಾದ ಡಾ. ರವಿಕುಮಾರ್, ಲಾಬೂರಾಮ್, ಪೊಲೀಸ್ ಉಪಾಯುಕ್ತ ಎಂ. ಮುತ್ತೂರಾಯ ಉಪಸ್ಥಿತರಿದ್ದರು.
ಸಭೆಯಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಗಂಗಾಕಲ್ಯಾಣ ಯೋಜನೆ ಅನುಷ್ಠಾನ, ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮದಲ್ಲ ಹಿನ್ನಡೆ ಸಾಧಿಸಿದ ದಕ್ಷಿಣ ಕನ್ನಡ ಜಿಲ್ಲಾ ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿ -ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ಪ್ರಭಾರ ವ್ಯವಸ್ಥಾಪಕ ದಾಮೋದರ ನಾಯಕ್ ಅವರನ್ನು ತಕ್ಷಣದಿಂದ ಅಮಾನತುಪಡಿಸುವಂತೆ ರಾಜ್ಯದ ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಇಲಾಖೆಯ ನಿರ್ದೇಶಕರಿಗೆ ಆದೇಶ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರಿಶಿಷ್ಟರಿಗಾಗಿರುವ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ 18 ಜಿಲ್ಲೆಗಳ ಪ್ರಗತಿ ಪರಿಶೀಲನೆ ಮುಗಿದಿದೆ. ಪ್ರಗತಿ ಪರಿಶೀಲನೆಯಲ್ಲಿ ಚರ್ಚಿಸಲಾದ ನಡಾವಳಿಗಳ ಅನುಸರಣಿಕೆಗಾಗಿ ಮತ್ತು ತನಿಖೆಗಾಗಿ ಇಲಾಖೆ ನಿಗಾ ಘಟಕ (ಮಾನಿಟರಿಂಗ್ ಸೆಲ್)ವನ್ನು ಸ್ಥಾಪಿಸಲಿದೆ ಎಂದು ಸಚಿವರು ಪ್ರಕಟಿಸಿದರು.
ಸಭೆಯಲ್ಲಿ ಚರ್ಚಿಸಲಾದ ಮತ್ತು ಕೈಗೊಳ್ಳಲಾದ ನಿರ್ಣಯಗಳ ಆಧಾರದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸುವ ಪದ್ಧತಿಯನ್ನು ಜಾರಿಗೊಳಿಸಲಾಗುವುದು. ಇದರಿಂದ ಎಲ್ಲಾ ಇಲಾಖೆಗಳಲ್ಲಿ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳು ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಲಿದೆ ಎಂದು ನಾರಾಯಣ ಸ್ವಾಮಿ ನುಡಿದರು.
ದ.ಕ.ಜಿಲ್ಲಾ ಐಟಿಡಿಪಿ ಸಮನ್ವಯಾಧಿಕಾರಿ ಡಾ. ಎಸ್.ಆರ್.ಪಟಾಲಪ್ಪ ಅವರನ್ನು ತಕ್ಷಣ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಉರ್ವ ಮಾರುಕಟ್ಟೆಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಲಯದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿಯವರಿಗೆ ನಾರಾಯಣ ಸ್ವಾಮಿ ಸೂಚನೆ ನೀಡಿದರು.
1990-91ರಲ್ಲಿ ಈ ಹಾಸ್ಟೆಲನ್ನು ಮಂಗಳೂರು ಮಹಾನಗರಪಾಲಿಕೆಯ ಶೇ.18ರ ನಿಧಿಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿತ್ತು. ಹಸ್ತಾಂತರಕ್ಕೆ ಮೊದಲೇ ಅದು ವಾಸ್ತವ್ಯ ಯೋಗ್ಯ ಅಲ್ಲ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿತ್ತು.
ಅಂದಿನ ಮಹಾನಗರ ಪಾಲಿಕೆಯ ಆಯುಕ್ತರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಹೀಗೆ ಸಂಬಂಧಪಟ್ಟ ಎಲ್ಲರನ್ನೂ ಜವಾಬ್ದಾರರನ್ನಾಗಿಸಿ ವರದಿ ನೀಡಬೇಕೆಂದು ಮಂತ್ರಿಗಳು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟರಿಗಾಗಿರುವ ಅನುದಾನ ಬಳಕೆ, ಯೋಜನೆಗಳ ಅನುಷ್ಠಾನ ಸಂಬಂಧಿಸಿ ಸಿಆರ್ಇ ಸೆಲ್ ನ ಅಧಿಕಾರಿಗಳು ಸ್ವ ಇಚ್ಛೆಯಿಂದ ತನಿಖೆ ನಡೆಸುವಂತೆ ಸಚಿವರು ಆದೇಶಿಸಿದರು.ರಾಜ್ಯ ದಾದ್ಯಂತ ಇರುವ ಮೊ ರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಗಳಲ್ಲಿ ಬಯೋ ಮೆಟ್ರಿಕ್ ವ್ಯವಸ್ಥೆ ಯನ್ನು ಜಾರಿ ಗೊಳಿ ಸಲಾ ಗುವುದು. ಜಿಲ್ಲಾ ಧಿಕಾರಿ, ಸಿಇಒ, ತಾ.ಪಂ. ಕಾರ್ಯ ನಿರ್ವಾ ಹಕ ಅಧಿ ಕಾರಿ ಗಳು ಈ ಶಾಲೆ ಗಳಿಗೆ ಭೇಟಿ ನೀಡ ಬೇಕು. ಈ ಅಧಿಕಾರಿಗಳನ್ನು ಒಳಗೊಂಡಂತೆ ಶಾಲೆಗಳ ಸಿಬಂದಿಗಳು ಬಯೋಮೆಟ್ರಿಕ್ ವ್ಯಾಪ್ತಿಗೆ ಒಳಪಡುತ್ತಾರೆ. ಇವರ ಚಲನವಲನಗಳು ಕೇಂದ್ರ ಕಚೇರಿಯಲ್ಲಿ ದಾಖಲಾಗುತ್ತದೆ ಎಂದು ಸಚಿವ ನಾರಾಯಣ ಸ್ವಾಮಿ ಸ್ಪಷ್ಟಪಡಿಸಿದರು.
ಪ್ರಗತಿ ಪರಿಶೀಲನೆ ಬಳಿಕ ನೇತ್ರಾವತಿ ಸಭಾಂಗಣದಲ್ಲಿ ಉಭಯ ಜಿಲ್ಲೆಗಳ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಫಲಾನುಭವಿಗಳಿಗೆ ಡಿ ದೇವರಾಜ ಅರಸು ನಿಗಮದಿಂದ ಹನ್ನೆರಡೂವರೆ ಲಕ್ಷ ರೂ.ಗಳ ಚೆಕ್ ವಿತರಣೆಯನ್ನು, ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ 5 ಲಕ್ಷ ರೂ. ಬೆಲೆಬಾಳುವ 10 ಪಂಪ್ ಸೆಟ್ ಗಳನ್ನು ವಿತರಿಸಿದರು.
ಸಭೆಯ ಬಳಿಕ ಸಚಿವರು.ರಾತ್ರಿ ನಿಧನರಾದ ಬಿಸಿಎಂ ಇಲಾಖೆಯ ಡಿ ಗ್ರೂಪ್ ನೌಕರರಾದ ಬಾಬು ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.