ಮಂಗಳೂರು,ಜೂನ್.18: ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಮಿಕ್ಕಿ ನಕಲಿ ಪಡಿತರ ಚೀಟಿಗಳಿರುವ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಚಿವರು ಶನಿ ವಾರ ನಗರ ದಲ್ಲಿ ಕಾರ್ಯ ಕ್ರಮ ಗಳಲ್ಲಿ ಪಾ ಲ್ಗೊಂಡ ಬಳಿಕ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡಿ, ರಾಜ್ಯದಲ್ಲಿ ಒಟ್ಟು 1.17ಕೋಟಿ ಕುಟುಂಬಗಳಿವೆ. ಇದೇ ವೇಳೆ 1.76ಕೋಟಿ ಪಡಿತರ ಚೀಟಿಗಳು ವಿತರಣೆಯಾಗಿವೆ. ಹೆಚ್ಚುವರಿ ಯಾಗಿ ವಿತರಣೆಯಾದ ಪಡಿತರ ಚೀಟಿಗಳು ನಕಲಿ ಎಂದು ಭಾವಿಸಲಾಗಿದೆ ಎಂದರು.ಕೆಲವೊಂದು ಮನೆಗಳಲ್ಲಿ 10 ರಿಂದ 13ರ ತನಕ ಪಡಿತರ ಚೀಟಿಗಳಿ ರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಪಡಿತರ ಅಂಗಡಿ ಹೊಂದಿರುವವರು ಕೂಡ ಒಂದಷ್ಟು ನಕಲಿ ಪಡಿತರ ಚೀಟಿಯನ್ನು ಹೊಂದಿರುವುದು ತಿಳಿದುಬಂದಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ರಾಜ್ಯದಲ್ಲಿ 72ಲಕ್ಷ ಅಡುಗೆ ಅನಿಲ ಸಂಪರ್ಕಗಳಿವೆ. ಸಮೀಕ್ಷೆಯಿಂದ 50ಲಕ್ಷ ಸಂಪರ್ಕಗಳಿಗೆ ಮಾತ್ರ ದಾಖಲೆಯಿದೆ. ಪ್ರಸ್ತುತ ಪಡಿತರ ಚೀಟಿ, ಮನೆ ತೆರಿಗೆ ಮತ್ತು ಅಡುಗೆ ಅನಿಲ ಸಂಪರ್ಕವನ್ನು ತಾಳೆ ನೋಡುವ ಕಾರ್ಯ ಪ್ರಗತಿಯಲ್ಲಿದೆ. ನಗರ ಪ್ರದೇಶದಲ್ಲಿ ಇದು ಮುಂದಿನ ಹತ್ತು ದಿನಗಳೊಳಗೆ ಅಂತಿಮಗೊಳ್ಳಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು ಒಂದೂವರೆ ತಿಂಗಳಲ್ಲಿ ಈ ಕಾರ್ಯ ಕೊನೆಗೊಳ್ಳಲಿದೆ ಎಂದು ಸಚಿವರು ನುಡಿದರು.
ಈ ಬಗ್ಗೆ ಸಮಗ್ರ ಮಾಹಿತಿ ಪಡೆದ ಬಳಿಕ ಅಪೇಕ್ಷಿತ ಅರ್ಹ ಕುಟುಂಬಗಳಿಗೆ ನೂತನ ಪಡಿತರ ಚೀಟಿ ನೀಡಲಾಗು ವುದು ಮಾತ್ರವಲ್ಲದೆ, ತಿದ್ದುಪಡಿಗಳನ್ನು ಕೂಡ ಕೈಗೊಳ್ಳಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು. ವಿದ್ಯುತ್ ದರ ಏರಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧರಿಸಲಿದೆ ಎಂದರು.ಕುಟುಂಬವೊಂದರಲ್ಲಿ ಪ್ರತ್ಯೇಕವಾಗಿ ಮೂರು ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೆ ತಲಾ 10 ಎಚ್ ಪಿ ಯಂತೆ 30 ಎಚ್ ಪಿ ಉಚಿತ ವಿದ್ಯುತ್ ಒದಗಿಸಲಾಗುವುದು ಕೇಂದ್ರ ಸರಕಾರ ಸೂಚಿಸಿದಂತೆ 2016ರವರೆಗೆ ಸೋಲಾರ್ ಪವರ್ ನಿಂದ 200 ಮೆಗಾ ವ್ಯಾಟ್ ವಿದ್ಯುತ್ ತಯಾರಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದ ಅವರು, ಸದ್ಯ 1300 ಮೆಗಾ ವ್ಯಾಟ್ ಪವನ ವಿದ್ಯುತ್ ತಯಾರಾಗುತ್ತಿದೆ ಎಂದರು.