ಮಂಗಳೂರು,ಜೂನ್.03:ದಕ್ಷಿಣ ಕನ್ನಡ ಜಿಲೆಯಲ್ಲಿ 2011ನೇ ವರ್ಷದ ಮುಂಗಾರು ಅವಧಿಯಲ್ಲಿ ಸಂಭವಿಸಬಹುದಾದ ನೆರೆ, ಸಮುದ್ರ ಕೊರೆತ ಹಾಗೂ ಇತರ ಪ್ರಾಕೃತಿಕ ವಿಕೋಪಗಳಿಂದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿ ನಷ್ಟ ಮತ್ತು ಜೀವ ಹಾನಿ ಇತ್ಯಾದಿಗಳನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಡಾ. ಎನ್. ಎಸ್. ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂಗಾರಿನ ಸಂದರ್ಭದಲ್ಲಿ ಕೇಂದ್ರ ಸ್ಥಾನ ಬಿಡದಂತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ತೆಗೆದು 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಹಾಗೂ ಸಾರ್ವಜನಿಕರು ಮಾಹಿತಿಗಾಗಿ ಟೋಲ್ ಫೀ ನಂಬರ್ 1077 ನ್ನು ಸಂಪರ್ಕಿಸಬಹುದು ಎಂದ ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆಯು ಈ ಸಂಬಂಧ ಅಗತ್ಯ ಕ್ರಮ ಹಾಗೂ ತೆಗೆದುಕೊಂಡಿದೆ ಎಂದರು. ಎಲ್ಲ ತಾಲೂಕು ಮಟ್ಟದಲ್ಲೂ ತಾಲೂಕು ದಂಡಾಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದರ ಮೂಲಕ ಪರಿಸ್ಥಿತಿ ನಿರ್ವಹಣೆಗೆ ಸಜ್ಜಾಗಿರುವಂತೆ ಜಿಲ್ಲಾಧಿಕಾರಿಗಳು ಹೇಳಿದರು. ರಕ್ಷಣಾ ವಾಹನಗಳು, ಬೋಟ್ ಗಳು, ಪರ್ಯಾಯ ವ್ಯವಸ್ಥೆಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದರು.
ತುರ್ತು ನೆರವಿಗೆ ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ ಗಳನ್ನೊಳಗೊಂಡ ತುರ್ತು ಸಹಾಯ ಕಾರ್ಯಪಡೆ ರಚನೆ, ದೋಣಿ ಮತ್ತು ಈಜುಗಾರರ ಮಾಹಿತಿ ಕಂಟ್ರೋಲ್ ರೂಂಗಳಲ್ಲಿ ಲಭ್ಯವಿರಬೇಕು. ಬೋಟ್ ಗಳನ್ನು ಬಾಡಿಗೆ ಪಡೆದು ಸಂದರ್ಭೋಚಿತವಾಗಿ ಬಳಸಲು ಅವಕಾಶವಿದ್ದು, ಜಿಲ್ಲಾಡಳಿತ ಪ್ರಕೃತಿ ವಿಕೋಪ ನಿಧಿಯಿಂದ ಬಾಡಿಗೆಯನ್ನು ಭರಿಸಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಎಲ್ಲ ಸಂದರ್ಭಗಳಲ್ಲೂ ಪೊಲೀಸ್ ವ್ಯವಸ್ಥೆಯ ಜೊತೆ ಸಮನ್ವಯ ಸಾಧಿಸಿ ಎಂಬುದನ್ನು ಜಿಲ್ಲಾಧಿಕಾರಿಗಳು ಹೇಳಿದರು. ಕ್ರೈನ್ ಗಳ ಲಭ್ಯತೆ, ವಾಹನ ಸಂಚಾ ರದ ಸುಗಮ ನಿರ್ವ ಹಣೆಗೆ 2 ತಂಡ ಗಳ ರಚಿಸಿ ಸರದಿ ಪ್ರಕಾರ ರಾತ್ರಿ ಹಗಲು ಕಾರ್ಯ ನಿರ್ವ ಹಿಸ ಬೇಕು; ಅರಣ್ಯ ಇಲಾಖೆ ಮತ್ತು ಲೋಕೋ ಪಯೋಗಿ ಇಲಾಖೆ ಗಳ ಸಕ್ರಿಯ ನೆರ ವಿನ ಅಗತ್ಯ ಈ ಸಂದರ್ಭ ದಲ್ಲಿದ್ದು ಜಿಲ್ಲಾಧಿ ಕಾರಿ ಗಳ ಕಚೇರಿ ಯಿಂದ ಸಂ ಬಂಧ ಪಟ್ಟ ಇಲಾಖೆ ಗಳಿಗೆ ಜ್ಞಾಪನಾ ಪತ್ರ ಕಳು ಹಿಸ ಲಾಗುವುದು ಎಂದರು. ಮೆಸ್ಕಾಂ ನವರು ಸಾರ್ವಜನಿಕರ ನೆರವಿಗೆ ದೂರವಾಣಿ ಸಂಖ್ಯೆಗಳನ್ನು ನೀಡಬೇಕೆಂದು ಸೂಚಿಸಿದ ಅವರು, ಮೆಸ್ಕಾಂ ಮತ್ತು ದೂರವಾಣಿ ಇಲಾಖಾ ಸಮಸ್ಯೆಗಳ ನಿರ್ವಹಣೆಗೆ ಎರಡೂ ಇಲಾಖೆಗಳ ಕಂಟ್ರೋಲ್ ರೂಮ ತೆರೆಯಲು ಸೂಚಿಸಿದರು. ಜನ-ಜಾನುವಾರುಗಳ ರಕ್ಷಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಸಂಗೋಪನಾ ಇಲಾಖೆ, ಮಹಾನಗರಪಾಲಿಕೆ, ವೆನ್ಲಾಕ್, ಪುರಸಭೆ ಮತ್ತು ನಗರ ಪಂಚಾಯತ್ ಮುನ್ನೆಚ್ಚರಿಕೆ ವಹಿಸಬೇಕೆಂದರು.
ಮಹಾನಗರಪಾಲಿಕೆ ಕಂಟ್ರೋಲ್ ರೂಂ ಸಹಾಯವಾಣಿ 0824 2220344. 2220306, ಟೋಲ್ ಫ್ರೀ 155913 ಇರುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡ ಮಹಾನಗರಪಾಲಿಕೆ ಆಯುಕ್ತರು ತಿಳಿಸಿದರಲ್ಲದೆ ಪಾಲಿಕೆ ವಿಕೋಪ ಎದುರಿಸಲು ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದೆ ಎಂದರು. ಪ್ರತೀ ತಾಲೂಕು ಗಳಲ್ಲಿ ಸಮ ನ್ವಯ ಸಮಿತಿ ಸಭೆ ನಡೆ ಸುವುದು, ಅತಿ ವೃಷ್ಟಿ ಪ್ರದೇಶ ಗಳನ್ನು ಮೊದಲೇ ಗುರುತಿಸಿ ದಾಖಲಿಸಿ ಎಲ್ಲ ಮಾಹಿತಿಗಳನ್ನು 7.6.11ರೊಳಗೆ ಜಿಲ್ಲಾ ಕೇಂದ್ರಕ್ಕೆ ತಹಸೀಲ್ದಾರರು ಸಲ್ಲಿಸಬೇಕೆಂದರು. ಮೀನುಗಾರರಿಗೆ ಮೀನುಗಾರಿಕಾ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ನೀಡುವುದು, ಸ್ವಾಭಾವಿಕ ನೀರು ಹರಿವಿಗೆ ತಡೆ ಮಾಡದಿರುವುದು ಹಾಗೂ ಜೀವಹಾನಿ ಸಂಭವಿಸಿದಾಗ 3 ದಿನಗಳೊಳಗೆ ತುರ್ತಾಗಿ ಪರಿಹಾರ ಧನ ವಿತರಣೆಗೂ ಆಡಳಿತ ಸನ್ನದ್ಧವಾಗಿರಬೇಕೆಂದ ಜಿಲ್ಲಾಧಿಕಾರಿಗಳು, ಬೆಳೆ ಹಾನಿ ಅಂದಾಜು ಪಟ್ಟಿ ತಯಾರಿಸಲು ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಆ ಕೆಲಸವೂ ತುರ್ತು ಆಗಬೇಕೆಂದರು. ಪುನರ್ವಸತಿ, ಗಂಜಿ ಕೇಂದ್ರ ವ್ಯವಸ್ಥೆ, ಅಂಬುಲೆನ್ಸ್, ಫಯರ್ ಬ್ರಿಗೆಡ್ ಸದಾ ಸನ್ನದ್ಧವಾಗಿರಬೇಕು ಎಂದರು.
ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಏನೇ ಮಾಹಿತಿ ಲಭಿಸಿದರೂ 1077ಕ್ಕೆ ತಕ್ಷಣ ನೀಡಬೇಕೆಂದ ಜಿಲ್ಲಾಧಿಕಾರಿಗಳು, ಜನರ ನೆರವಿಗೆ ಜಿಲ್ಲಾಡಳಿತ ಸಜ್ಜಾಗಿದೆ ಎಂದರು.ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.