ಮಂಗಳೂರು,ಜೂನ್.17:ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಎಲ್ಲಾ ಇಲಾಖೆಗಳಲ್ಲಿ ಸೌಲಭ್ಯಗಳನ್ನು ಮೀಸಲಿರಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿ ಇಲಾಖಾಕಾರಿಗಳದ್ದಾಗಿದೆ. ಅಕಾರಿಗಳು ತಮಗೆ ನಿಗದಿಪಡಿಸಲಾದ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಉಪ ಪೊಲೀಸ್ ಮಹಾ ನಿರೀಕ್ಷಕ ಅರುಣ್ ಚಕ್ರವರ್ತಿ ಹೇಳಿದ್ದಾರೆ.
ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗವೆಂದು ಪರಿಗಣಿಸಲ್ಪಟ್ಟಿರುವ ಕೊರಗರ ಕಾಲೊನಿಗಳಿಗೆ ಭೇಟಿ ನೀಡಿದರು. ಕೊರಗ ಸಮುದಾಯದ ಮುಖಂಡರು ಮತ್ತು ಕೆಲವು ಇಲಾಖೆಗಳ ಅಕಾರಿಗಳೊಂದಿಗೆ ಚರ್ಚೆ ನಡೆಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎಲ್ಲಾ ಇಲಾಖೆಗಳು ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಿ ಸಕಾಲದಲ್ಲಿ ಸೌಲಭ್ಯಗಳನ್ನು ನೀಡುತ್ತಿವೆಯೇ ಎಂಬುದನ್ನು ಅರಿತುಕೊಳ್ಳುವ ಹೊಣೆಯನ್ನು ನಿರ್ದೇಶನಾಲಯಕ್ಕೆ ವಹಿಸಲಾಗಿದೆ. ಇಲಾಖೆಗಳು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ನಿರ್ದೇಶನಾಲಯದೊಂದಿಗೆ ಸಹಕರಿಸಬೇಕು ಎಂದು ಅರುಣ್ ಚಕ್ರವರ್ತಿ ವಿನಂತಿಸಿದರು.
ನಾಗರಿಕ ಹಕ್ಕು ಜಾರಿ ವಿಭಾಗವನ್ನು 1974ರಲ್ಲಿ ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಎಡಿಜಿಪಿ, ಡಿಐಜಿ, ಹಾಗೂ 7 ಎಸ್ಪಿಗಳನ್ನೊಳಗೊಂಡಂತೆ ನಿರ್ದೇಶನಾಲಯವು 200 ಸಿಬ್ಬಂದಿಗಳನ್ನು ಹೊಂದಿದೆ ಎಂದು ಡಿಐಜಿ ವಿವರಿಸಿದರು.ಸಂವಿಧಾನದಡಿ ದೌರ್ಜನ್ಯ ತಡೆ ಕಾಯಿದೆಯನ್ನು ರೂಪಿಸಿದ್ದು, ಡಿಸಿಆರ್ಇಗೆ ಈ ಕಾಯಿದೆಯ ಅನುಷ್ಠಾನದ ಹೊಣೆಯನ್ನು ನೀಡಲಾಗಿದೆ. ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವಿಭಜಿತ ಜಿಲ್ಲೆಗಳ ಅಕಾರಿಗಳ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದ್ದಾರೆ. ಸಚಿವರ ನಿರ್ದೇಶನಗಳನ್ನು ಇಲಾಖೆಗಳು ಪಾಲನೆ ಮಾಡುವ ನಿಟ್ಟಿನಲ್ಲಿ ನಿರ್ದೇಶನಾಲಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದರು.
ಮಂಗಳೂರು ವಲಯವು 4 ಜಿಲ್ಲೆಗಳು ಮತ್ತು ಒಂದು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊಂದಿದೆ. ಎಲ್ಲಾ ಇಲಾಖೆಗಳು ಸಮನ್ವಯ ಸಾಸಿ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವುದನ್ನು ಕಾಲ ಕಾಲಕ್ಕೆ ಖಚಿತಪಡಿಸಿಕೊಳ್ಳುವಂತೆ ಈ ವಲಯದ ಪೊಲೀಸ್ ಅಕ್ಷಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವುದಾಗಿ ಅರುಣ್ ಚಕ್ರವರ್ತಿ ತಿಳಿಸಿದರು.ಶೇ. 25 ಮತ್ತು ಶೇ 22.76 ಕಾದಿರಿಸಿದ ನಿಯ ದುರುಪಯೋಗ, ಉದ್ಯೋಗ ಮೀಸಲಾತಿ ನಿಯಮಾವಳಿ ಉಲ್ಲಂಘನೆ, ಜಮೀನು ಮಂಜೂರು ನಿಯಮಾವಳಿಗಳ ಉಲ್ಲಂಘನೆ , ಜಮೀನು ಅಕ್ರಮ ಪರಾಭಾರೆ, ಭೂಮಾಲಿಕರಿಂದ ಪರಿಶಿಷ್ಟ ಜಾತಿ/ ಪಂಗಡಗಳ ಅಕ್ರಮ ಎತ್ತಂಗಡಿ ಪ್ರಕರಣಗಳು, ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣಗಳು, ಪರಿಶಿಷ್ಟರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುವುದು, ಕರ್ನಾಟಕ ಋಣ ಪರಿಹಾರ ಆಧ್ಯಾದೇಶ 1975, ಪರಿಶಿಷ್ಟರ ಅಕ್ರಮ ಬಂಧನ ಪ್ರಕರಣಗಳ ತನಿಖೆಯನ್ನು ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ಕ್ರಮಗಳ ಕುರಿತಂತೆ ಶಿಫಾರಸು ಮಾಡುವ ಅಕಾರವನ್ನು ನಿರ್ದೇಶನಾಲಯ ಹೊಂದಿರುತ್ತದೆ.
ಈ ತನಕ ತೆರೆಯ ಮರೆಯಲ್ಲಿದ್ದ ನಿರ್ದೇಶನಾಲಯವನ್ನು ಈಗ ಕ್ರಿಯಾಶೀಲಗೊಳಿಸಲಾಗಿದೆ. ಎಲ್ಲಾ ಇಲಾಖೆಗಳ ಅಕಾರಿಗಳಿಗೂ ನಿರ್ದೇಶನಾಲಯದ ಮಹತ್ವ ಮನವರಿಕೆಯಾಗುತ್ತಿದೆ. ಅಕಾರಿಗಳು ಪರಿಶಿಷ್ಟರ ಯೋಜನೆಗಳನ್ನು ಸಕಾಲದಲ್ಲಿ ಮತ್ತು ಸಮರ್ಪಕವಾಗಿ ತಲುಪಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕೈಗೊಳ್ಳಲಾರಂಭಿಸಿದೆ ಎಂದು ಚಕ್ರವರ್ತಿ ನುಡಿದರು.