ಮಂಗಳೂರು,ಸೆ 05: ದಿಲ್ಲಿಯಲ್ಲಿ ಜರುಗಲಿರುವ ಕಾಮನ್ ವೆಲ್ತ್ ಕ್ರೀಡಾ ಕೂಟದ ಪೂರ್ವಭಾವಿಯಾಗಿ ದೇಶಾದ್ಯಂತ ನಡೆಯುತ್ತಿರುವ ಕ್ರೀಡ ಅಭಿಯಾನದ ಅಂಗವಾಗಿ ವಿಂಗ್ ಕಮಾಂಡರ್ ವಿ.ಎನ್.ಸಿಂಗ್ ನೇತೃತ್ವದಲ್ಲಿ ಮಂಗಳೂರು ನಗರ ಪ್ರವೇಶಿಸಿದ ಕ್ವೀನ್ಸ್ ಬೆಟನ್ ರಿಲೇ ತಂಡಕ್ಕೆ ಅದ್ದೂರಿ ಸ್ವಾಗತ ನೀಡಲಾಯಿತು.
ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ರಜನಿ ದುಗ್ಗಣ್ಣ ಅವರು ಕದ್ರಿ ಪಾರ್ಕ್ ಬಳಿ ರಿಲೇ ತಂಡವನ್ನು ಆತ್ಮೀ ಯವಾಗಿ ಬರ ಮಾಡಿ ಕೊಂಡರು.ಸಂಸದ ನಳಿನ್ ಕುಮಾರ್ ಕಟೀಲ್,ಶಾಸ ಕರಾದ ಎನ್.ಯೋಗಿಶ್ ಭಟ್, ಯು.ಟಿ. ಖಾದರ್, ನಗರ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾ ಪಟುಗ ಳಾದ ವಂದನಾ ಶಾನು ಭಾಗ್,ವಂದನಾ ರಾವ್, ಶೋಭಾ ನಾರಾ ಯಣ್,ಮಂಜರಿ ಭಾರ್ಗವಿ,ಪ್ರೊ.ಬಿ.ಎಂ.ಹೆಗ್ಡೆ,ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್,ಪಾಲಿಕೆಯ ಸದಸ್ಯರುಗಳು,ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಈ ಕಾರ್ಯ ಕ್ರಮದಲ್ಲಿ ಉತ್ಸಾಹ ದಿಂದ ಪಾಲ್ಗೊಂಡರು.ನಂತರ ರಿಲೇ ತಂಡ ನಗರದ ಬಿಜೈ, ಕೆಎಸ್ ಆರ್ ಟಿಸಿ ,ಮಹತ್ಮಾ ಗಾಂಧಿ ರಸ್ತೆ, ವಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್, ಜ್ಯೋತಿ ವೃತ್ತ, ಹಂಪನಕಟ್ಟೆ ಮೂಲಕ ಪುರ ಭವನಕ್ಕೆ ಆಗಮಿ ಸಿತು.ಪುರ ಭವನ ದಲ್ಲಿ ನಡೆದ ಪೌರ ಸತ್ಕಾರದ ಬಳಿಕ ಸುದ್ದಿ ಗಾರ ರೊಂದಿಗೆ ಮಾತ ನಾಡಿದ ರಿಲೇ ತಂಡದ ಮುಖ್ಯಸ್ಥ ವಿಂಗ್ ಕಮಾಂಡರ್ ವಿ.ಎನ್.ಸಿಂಗ್ ಅವರು ಮಂಗ ಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಯ ಸ್ವಾಗತ ಮತ್ತು ಅಥಿತಿ ಸತ್ಕಾರ ಹಾಗೂ ಅಚ್ಚು ಕಟ್ಟು ತನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ವಾಘಾ ಗಡಿ ಯಿಂದ ವಿಂಗ್ ಕಮಾಂಡರ್ ವಿ.ಎನ್.ಸಿಂಗ್ ನೇತ್ರತ್ವ ದಲ್ಲಿ 98 ಜನರ ಸದಸ್ಯ ರೊಂದಿಗೆ ಇಂ ಗ್ಲೆಂಡಿನ ರಾಣಿಯ ಸಂದೇಶ ವನ್ನು ಒಳ ಗೊಂಡ ಕ್ವೀನ್ಸ್ ಬ್ಯಾಟನ್ ಭಾರತ ದೇಶದ ವಿವಿಧ ರಾಜ್ಯ,ಪ್ರದೇಶ ಗಳನ್ನು ಸಂಚರಿಸಿ 72 ನೇ ದಿನ ವಾದ ಇಂದು ಕರಾವಳಿ ನಗರಿ ಮಂಗ ಳೂರು ತಲುಪಿದೆ.ನಾಳೆ ಸೋಮ ವಾರ 9 ಗಂಟೆಗೆ ಮಂಗಳೂರು ನಗರ ದಿಂದ ಉಡುಪಿ ಮೂಲಕ ಕಾರವಾರ ತಲುಪಲಿದೆ.