ಮಂಗಳೂರು, ಸೆ.21:ದಕ್ಷಿಣ ಕನ್ನಡ ಜಿಲ್ಲೆಯಿಂದ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಣಿಕೆ ತಡೆಯಲು ಹಾಗೂ ಈ ಎಲ್ಲ ಬೆಳವಣಿಗೆಗಳಿಂದ ಸ್ಥಳೀಯ ಜನಸಾಮಾನ್ಯರಿಗಾಗುತ್ತಿರುವ ಕಷ್ಟ ನಷ್ಟವನ್ನು ತಡೆಯಲು ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಿದ ಸುದೀರ್ಘ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿತು.
ಅಕ್ರಮ ಮರಳು ಸಾಗಾ ಣಿಕೆಯ ಬಗ್ಗೆ ಸಮಗ್ರ ಮಾಹಿತಿ ಜಿಲ್ಲಾಡ ಳಿತಕ್ಕೆ ಲಭ್ಯವಿದ್ದು, ಅಕ್ರಮ ತಡೆಗೆ ಕಠಿಣ ಹಾಗೂ ಸ್ಥಿರ ನಿರ್ಧಾ ರವನ್ನು ಜಿಲ್ಲಾ ಡಳಿತ ತೆಗೆದು ಕೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೇಮಾರ್ ತಿಳಿಸಿ ದರು.ಈ ಸಂಬಂಧ ಎಲ್ಲರ ಜೊತೆಗೆ ಸುದೀರ್ಘ ಚರ್ಚೆಯ ಬಳಿಕ ನಡೆದ ಅಧಿ ಕಾರಿಗಳ ಸಭೆಯನ್ನು ದ್ದೇಶಿಸಿ ಮಾತ ನಾಡಿದ ಸಚಿವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಜನಪರ ನಿರ್ಧಾರ ಗಳನ್ನು ಅನು ಷ್ಠಾನಕ್ಕೆ ತರಲಾ ಗದಿದ್ದರೇ ಸರ್ಕಾರದ ಮಟ್ಟದಲ್ಲೇ ಸೂಕ್ತ ನಿರ್ಣಯ ಜಾರಿಗೆ ತಂದು ಅನು ಷ್ಠಾನಕ್ಕೆ ತರಲು ನಿರ್ಧರಿಸಿ ರುವು ದಾಗಿಯೂ ಹೇಳಿದರು. ಗಣಿ ಮತ್ತು ಅದಿರು ಇಲಾಖೆ,ಪೊಲೀಸ್, ಸಾರಿಗೆ, ಅರಣ್ಯ ಹಾಗೂ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಗಳು ಸಂಯುಕ್ತವಾಗಿ ಸೂಕ್ರ ಕ್ರಮ ಕೈಗೊಳ್ಳುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಯಿತು. ತಲಪಾಡಿ, ಉಕ್ಕುಡ, ಸಂಪಾಜೆ, ಸಾರಡ್ಕ, ಜಾಲ್ಸೂರು ಸೇರಿದಂತೆ ಅಕ್ರಮ ಮರಳು ಸಾಗಾಣಿಕೆಯಾಗುವ ಕಡೆ ಪೊಲೀಸ್ ಇಲಾಖೆ ನೆರವಿನೊಂದಿಗೆ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಪಹರೆಯನ್ನು ಹಾಕಲಾಗುವುದು. ದಂಡ ವಿಧಿಸದೆ ಮರಳು ಸಾಗಾಣಿಕೆ ವಾಹನಗಳನ್ನು ಮುಟ್ಟುಗೋಲು ಹಾಕುವ ಬಗ್ಗೆಯೂ ಸಭೆ ನಿರ್ಧರಿಸಿತು.ಸುವ್ಯವಸ್ಥೆಗೆ ಪೂರಕವಾಗಿ ಹಾಗೂ ಜನ ಸಾಮಾನ್ಯರಿಗೆ ನೆರವಾಗಲು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ರೂಪಿಸಲಾಗಿರುವ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಗೆ ಸಮಗ್ರ ಮಾಹಿತಿಯನ್ನು ನೀಡಿದರು. ಜಂಟಿ ಕಾರ್ಯಪಡೆ ಗಳ ರಚನೆ ಸೇರಿದಂತೆ ಜಿಲ್ಲೆಯ ಪರಿಸರ ಹಾಗೂ ಮರಳನ್ನು ರಕ್ಷಿಸಲು ಅಗತ್ಯ ಕ್ರಮಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು. ಶಾಸಕರಾದ ಎನ್.ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಪೊಲೀಸ್ ಅಧೀಕ್ಷಕರಾದ ಡಾ. ಎ. ಸುಬ್ರಮಣ್ಯೇಶ್ವರ ರಾವ್,ಗಣಿ ಉಪನಿರ್ದೇಶಕ ಡಾ. ರವೀಂದ್ರ, ಡಿಸಿಎಫ್ ವಿಜಯಕುಮಾರ್ ಶೆಟ್ಟಿ, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ಹರೀಶ್ ಕುಮಾರ್, ಆರ್ ಟಿ ಒ ಸೇವಾ ನಾಯಕ್, ಬಂಟ್ವಾಳ, ಪುತ್ತೂರು ಸಬ್ ಇನ್ಸ್ ಪೆಕ್ಟರ್, ಬಂಟ್ವಾಳ ತಹಸೀಲ್ದಾರ್ ರವಿಚಂದ್ರ ನಾಯಕ್, ಮಂಗಳೂರು ತಹಸೀಲ್ದಾರ್ ಮಂಜುನಾಥ್, ಎಸಿಪಿಗಳಾದ ಮುತ್ತುರಾಯ,ಬಿ.ಜಿ.ಭಂಡಾರಿ, ಅವರು ಸಭೆಯಲ್ಲಿ ಪಾಲ್ಗೊಂಡರು.