ಮಂಗಳೂರು,ಸೆ.05: ಕ್ರೀಡಾ ಐಕ್ಯತೆಯ ಸಂದೇಶವನ್ನು ಹೊತ್ತ ಕಾಮನ್ ವೆಲ್ತ್ ಕ್ರೀಡಾ ಜ್ಯೋತಿ ಕ್ವೀನ್ಸ್ ಬ್ಯಾಟನ್ ನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯ ಗಡಿ ಪ್ರದೇಶ ಗುಂಡ್ಯದಲ್ಲಿ ಅತ್ಯಂತ ಸಂಭ್ರಮದ ಸ್ವಾಗತವನ್ನು ನೀಡಿತು.
ವಿಂಗ್ ಕಮಾಂಡರ್ ವಿ ಎನ್ ಸಿಂಗ್ ನೇತೃ ತ್ವದಲ್ಲಿ ಆಗಮಿಸಿದ ತಂಡ ಬ್ಯಾಟನ್ ನ್ನು ಅಪರ ಜಿಲ್ಲಾಧಿ ಕಾರಿ ಪ್ರಭಾಕರ ಶರ್ಮಾ ಅವರಿಗೆ ಹಸ್ತಾಂ ತರಿಸಿದರು. ಸ್ಥಳದಲ್ಲಿ ಉಪಸ್ಥಿ ತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೇ ಮಾರ್ ಅವರು ಬಳಿಕ ಬ್ಯಾಟನ್ ನ್ನು ಸ್ವೀಕ ರಿಸಿದರು. ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎ ಎಸ್ ರಾವ್ ಅವರಿಂದ ಡಾ. ದೀಪ್ತಿ, ಮಾಜಿ ಮೇಯರ್ ಶಂಕರ್ ಭಟ್, ಪುತ್ತೂರು ಎಸಿ ಡಾ. ಹರೀಶ್ ಕುಮಾರ್ ಅವರಿಗೆ ಹಸ್ತಾಂತ ರಿಸಲಾ ಯಿತು. ಅವರಿಂದ ಬ್ಯಾಟನ್ ಸ್ವೀಕರಿಸಿದ ಜಿಲ್ಲಾ ಪಂಚಾ ಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ವಿಂಗ್ ಕಮಾಂಡರ್ ಗೆ ನೀಡಿದರು. ಧರ್ಮಸ್ಥಳ ಗ್ರಾಮೋ ದ್ಯೋಗದ ಮಹಿಳೆ ಯರಿಂದ ತಂಡಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾ ಯಿತಲ್ಲದೆ, ಕಲ್ಲಡ್ಕ ಗೊಂಬೆ, ವಾದ್ಯ, ಚೆಂಡೆಗಳು ಸ್ವಾಗತವನ್ನು ಅವಿಸ್ಮರ ಣೀಯವಾ ಗಿಸಿದವು. ಪುತ್ತೂರಿನ ಶಾಲಾ ಮಕ್ಕಳು, ಸ್ಕೌಟ್ಸ್, ಗೈಡ್ಸ್ ತಂಡಗಳು ಹೆಚ್ಚಿನ ಉತ್ಸಾಹ ದಿಂದ ತಂಡವನ್ನು ಸ್ವಾಗತಿ ಸಿದರು. ಬಳಿಕ ನೆಲ್ಯಾಡಿಯ ಸಂತ ಜರೋಸ ಪಿಯುಸಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು. ಅಲ್ಲಿಂದ ಮಂಗಳೂರಿಗೆ ಹೊರಟ ತಂಡವನ್ನು ಕ್ರೀಡಾಭಿ ಮಾನಿಗಳು ರಸ್ತೆ ಯುದ್ದಕ್ಕೂ ಕೈಬೀಸಿ ಸ್ವಾಗತಿ ಸುತ್ತಿರುವ ದೃಶ್ಯ ಕಂಡು ಬಂತು.