
ಕೊಡಗಿನ ಕುಶಾಲ ನಗರದಿಂದ 12 ಕಿ.ಮೀ ದೂರದಲ್ಲಿರುವ ಚಿಕ್ಕಾಳ್ವದಲ್ಲಿರುವ ಸ್ನಾತಕೋತ್ತರ ಪದವಿಕೇಂದ್ರವನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ಸರಕಾರ 70.4 ಎಕರೆ ಭೂಮಿಯನ್ನು ನೀಡಿದೆ ಹಾಗೂ ಅದರ ಪಕ್ಕದಲ್ಲೇ ಇರುವ 30 ಎಕರೆ ಜಮೀನನ್ನು ನೀಡಲು ಒಪ್ಪಿದೆ ಎಂದ ಕುಲಪತಿಗಳು, ಪ್ರಸ್ತುತ ಇಲ್ಲಿ ಮೈಕ್ರೊ ಬಯಾಲಜಿ ಮತ್ತು ಬಯೋಕೆಮಿಸ್ಟ್ರಿ ಕೇಂದ್ರಗಳಿದ್ದು, ಮೂಲಭೂತ ಸೌಕರ್ಯಗಳ ನಿಮರ್ಾಣದ ಬಳಿಕ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳನ್ನು ಆರಂಭಿಸಲಾಗುವುದು ಎಂದರು. ವಿಶ್ವವಿದ್ಯಾನಿಲಯ ಇದಕ್ಕಾಗಿ 8 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು 2 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 27ರಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು ನೂತನ ಪಿಜಿ ಕೇಂದ್ರದ ಶಿಲಾನ್ಯಾಸವನ್ನು ಮಾಡಲಿರುವರು ಎಂದರು.
ವಿದ್ಯಾರ್ಥಿಗಳ ಹಿತರಕ್ಷಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ವಿಶ್ವ ವಿದ್ಯಾಲಯ ಬದ್ಧ ಎಂಬುದನ್ನು ಅವರು ಈ ಸಂದರ್ಭದಲ್ಲ ಪುನರುಚ್ಛರಿಸಿದರು.