ಶಾಸಕರು ಮತ್ತು ಕೆ ಎಸ್ ಐ ಐ ಡಿ ಸಿಯ ಅಧ್ಯಕ್ಷರಾದ ಎನ್. ಯೋಗೀಶ್ ಭಟ್, ಕೆ ಎಸ್ ಐ ಐ ಡಿ ಸಿ ವ್ಯವಸ್ಥಾಪಕ ನಿರ್ದೇಶ ಕರಾದ ವಂದಿತಾ ಶರ್ಮಾ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಡಿಸೈನ್ ಪ್ಲಾನಿಂಗ್ ಕೌನ್ಸಿಲ್ ಅಹ್ಮದಾಬಾದ್, ಇನ್ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಫೌಂಡೇಷನ್ ಮಂಗಳೂರು ಇವರು ಯೋಜನೆಯ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಮಾಹಿತಿ ನೀಡಿದರು. ಸಾರ್ವಜನಿಕ ಮತ್ತುಇ ಖಾಸಾಗಿ ಸಹಭಾಗಿತ್ವದ ಯೋಜನೆಯಡಿ ಮಂಗಳೂರಿನಲ್ಲೂ ನಗರ ಯೋಜನೆ ರೂಪಿಸುವುದು ಶಾಸಕರ ಬಹಳ ವರ್ಷಗಳ ಕನಸಾಗಿದ್ದು, ಈ ಸಂಬಂಧ ಇಂದು ಮಂಗಳೂರಿನಲ್ಲಿ ಜರುಗಿದ ಸಭೆ ಎರಡನೆಯದು. ಈ ಸಂಬಂಧ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಜರುಗಿದ ಪ್ರಥಮ ಸಭೆಯ ಬಗ್ಗೆ ಶಾಸಕರಾದ ಎನ್ ಯೋಗೀಶ್ ಭಟ್ ಅವರು ಮಾಹಿತಿ ನೀಡಿದರು.

ಈ ಯೋಜನೆ ದೇಶದ ಪ್ರಮುಖ ನದಿ ಮುಖೀ ಯೋಜನೆ ಗಳಲ್ಲೊಂ ದಾಗು ವಂತೆ ರೂಪಿಸಲು ತಾಂತ್ರಿಕತೆ ಸೇರಿ ದಂತೆ ಎಲ್ಲ ಪರಿ ಶ್ರಮ ಗಳನ್ನು ಪರಿಣತ ರಿಂದ ಪಡೆದು ಯೋಜನೆ ಅನುಷ್ಠಾ ನಕ್ಕೆ ತರಲಾ ಗುವುದು ಎಂದು ಶಾಸಕರು ತಿಳಿಸಿದರು. ಮಂಗಳೂ ರಿನ ಉಳ್ಳಾಲ-ಕೂಳೂರು-ಮರವೂರು-ಗುರುಪುರ-ಕಣ್ಣೂರು, ಮತ್ತೆ ಉಳ್ಳಾಲ ದವರೆಗೆ ಕೆ ಎಸ್ ಐ ಐ ಡಿ ಸಿ ನೇತೃತ್ವ ದಲ್ಲಿ ಸಮಗ್ರ ಸಮೀಕ್ಷೆ ನಡೆಸಲು ಸಭೆಯಲ್ಲಿ ನಿರ್ಧರಿ ಸಲಾಯಿತು. 30 ಕಿ.ಮೀ ವರ್ತುಲ ರಸ್ತೆಗೆ ಗುರುಪುರ ದವರೆಗೆ ನೆಕ್ಲೆಸ್ ಮಾದರಿಯಲ್ಲಿ ಯೋಜನೆ ಜಾರಿಗೆ ಬರಲಿದ್ದು ಮೂರು ರಾಷ್ಟ್ರೀಯ ಹೆದ್ದಾರಿ ಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯ ವಾಗಲಿದೆ. ಈ ಬಗ್ಗೆ ಸಮಗ್ರ ಮಾಹಿತಿ ಹಾಗೂ ಇಲಾಖಾ ಸಮನ್ವಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಯೋಜನೆಯ ಜಾರಿಗೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಒಂದು ವಿಶೇಷ ಉದ್ದೇಶಿತ ಕೋಶವನ್ನು (ಸೆಲ್) ತೆರೆಯಲಾಗಿದ್ದು, ಮಂಗಳಾ ಕಾರ್ನಿಷ್ ಯೋಜನೆ ಅನುಷ್ಠಾನ ಸಮಿತಿಗೆ ಜಿಲ್ಲಾಧಿಕಾರಿಗಳು ಅನುಷ್ಠಾನಾಧಿಕಾರಿಗಳಾಗಿರುತ್ತಾರೆ. ಸಮಿತಿ ಸಂಬಂಧಪಟ್ಟ ಇಲಾಖಾ ಪ್ರಮುಖರನ್ನೊಳಗೊಂಡಿರುತ್ತದೆ.
