ಮಂಗಳೂರು,ಸೆಪ್ಟೆಂಬರ್ 13:ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ಬಿಡುಗಡೆಯಾಗಿದ್ದು, ಹಣ ಹಿಂದಿರುಗಿ ಹೋಗದಂತೆ ಮುತುವರ್ಜಿ ವಹಿಸಿ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸಾಧನೆಗಳನ್ನು ದಾಖಲಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.
ಅವರಿಂದು ಜಿ.ಪಂ. ಸಭಾಂಗ ಣದಲ್ಲಿ ಆಗಸ್ಟ್ ತಿಂಗಳ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾ ಡುತ್ತಿದ್ದರು. ವಿವಿಧ ಇಲಾಖೆಗಳ ಅಧಿಕಾರಿ ಗಳು ನಿಗದಿ ಪಡಿಸಿದ ಗುರಿ ಸಾಧನೆಗೆ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸ ಬೇಕಿದ್ದು, ಅದರಲ್ಲೂ ಪ್ರಮುಖ ವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡ ನಿಗಮ ಶೂನ್ಯ ಸಾಧನೆ ದಾಖಲಿಸಿ ರುವುದಕ್ಕೆ ಅಸಮಾ ಧಾನ ವ್ಯಕ್ತ ಪಡಿಸಿದ ಅಧ್ಯಕ್ಷರು ಮುಂದೆ ಹೀಗಾ ದಂತೆ ಎಚ್ಚರಿಕೆ ವಹಿಸ ಬೇಕೆಂದು ಸೂಚನೆ ನೀಡಿದರು. ಈ ಬಗ್ಗೆ ಕಳೆದ ತ್ರೈಮಾಸಿಕ ಕೆಡಿಪಿ ಯಲ್ಲೂ ಚರ್ಚೆ ಯಾಗಿತ್ತು ಎಂಬುದನ್ನು ಸಭೆಗೆ ನೆನಪಿಸಿದ ಅಧ್ಯಕ್ಷರು ಈ ಬಗ್ಗೆ ತೆಗೆದು ಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿ ಯಿಂದ ವಿವರಣೆ ಕೇಳಿದರು.ಕಳೆದ ಎರಡು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆ ಯಡಿ ಪರಿ ಶಿಷ್ಟ ಜಾತಿ ಮತ್ತು ವರ್ಗದ ವರಿಗೆ ವೈಯಕ್ತಿಕ ಮತ್ತು ಸಾಮೂಹಿಕ ಫಲಾನು ಭವಿಗಳಿಗೆ ಕೃಷಿಗೆ ನೀರಾವರಿ ಒದಗಿಸಲು ಬೋರ್ ವೆಲ್ ಕೊರೆಸ ಬೇಕಾಗಿದ್ದು, ವಿವಿಧ ಕಾರಣಗಳಿಂದ ಬಾಕಿ ಉಳಿದಿತ್ತು, ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳು ಕಳೆದ ಸಭೆಯಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನೂ ನೀಡಿದರು. ಪ್ರಸಕ್ತ ಸಾಲಿನಲ್ಲಿ ಸುಮಾರು 300 ಬೋರ್ ವೆಲ್ ಕೊರೆಯಲು ರಾಜ್ಯ ಮಟ್ಟದಲ್ಲಿ ಕರ್ನಾಟಕ ಏಜೆನ್ಸಿಗೆ ಟೆಂಡರ್ ನೀಡಲಾಗಿದ್ದು, ಈ ಸಾಲಿನಲ್ಲಿ ಗುರಿ ಸಾಧಿಸಲಾಗುವುದು ಎಂದು ಕೆಡಿಪಿ ಸಭೆಗೆ ಅಧಿಕಾರಿ ಮಾಹಿತಿ ನೀಡಿದರು.
ಕಳೆದ ಸಾಲುಗಳಲ್ಲಿ ಬೋರ್ ವೆಲ್ ಕೊರೆಸಿ ನೀರು ದೊರಕದಿದ್ದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದಿಲ್ಲ ಎಂಬ ಷರತ್ತಿನಿಂದಾಗಿ ಯಾವುದೇ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಮುಂದೆ ಬರುತ್ತಿರಲಿಲ್ಲ. ಈ ಬಗ್ಗೆ ಮರುಪರಿಶೀಲನೆ ನಡೆಸಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಮಟ್ಟದಲ್ಲೇ ನಿಧರ್ಾರ ಕೈಗೊಳ್ಳಲಾಗಿದೆ. ಹಾಗಾಗಿ ಫಲಾನುಭವಿಗಳಿಗೆ ಸುಮಾರು 300 ಬೋರ್ ವೆಲ್ ಸಿಗುವುದು ಖಚಿತವಾಗಿದೆ.ಡಾ ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಕಾಮಗಾರಿ ಕುಂಠಿತ ಗೊಂಡಿದ್ದು, ವಿದ್ಯುದ್ಧೀಕರಣಕ್ಕೆ ಬಾಕಿ ಇರುವ ಬಗ್ಗೆ ತಾಲೂಕು ಮಟ್ಟದಲ್ಲಿ ಅನುಷ್ಠಾನಾಧಿಕಾರಿಗಳನ್ನು ನೇಮಿಸುವ ಬಗ್ಗೆ ನಿಗಮದ ವ್ಯವಸ್ಥಾಪಕ ನಿದರ್ೇಶಕರನ್ನು ಕೋರಲಾಗಿದ್ದು, ಅವರು ಈ ಸಂಬಂಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಕಳೆದ ವರ್ಷಗಳಿಂದ ಪ್ರಗತಿ ಕುಂಠಿತವಾಗಿದ್ದು, 09-10ನೇ ಸಾಲಿನಲ್ಲಿ 12 ಬಾವಿಗಳು ಬಾಕಿ ಇದೆ. ಪರಿಶಿಷ್ಟ ವರ್ಗದಲ್ಲಿ 08-09ನೇ ಸಾಲಿನಲ್ಲಿ 6 ಮತ್ತು 09-10ನೇ ಸಾಲಿನಲ್ಲಿ ನಿರ್ಮಿಸಿದ ಒಟ್ಟು 22 ಬಾವಿಗಳು ಮತ್ತು ಒಟ್ಟು 40 ಬಾವಿಗಳ ವಿದ್ಯುತ್ ಸಂಪರ್ಕ ಕಾಮಗಾರಿ ಪ್ರಗತಿ ಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಣ್ಣ ನೀರಾವರಿ ಇಲಾಖೆ ಜಿಲ್ಲೆಯ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಯಡಿ ಹಲಗೆ ಹಾಕಲು 60,000 ರೂ.ಗಳನ್ನು ನಿಗದಿ ಪಡಿಸಿರುವುದು ಅವೈಜ್ಞಾನಿಕವಾಗಿದ್ದು ಈ ನಿರ್ಧಾರದ ಮರು ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು. ಮೂಲಭೂತ ಸೌಕರ್ಯಕ್ಕೆ, ಅಭಿವೃದ್ಧಿ ಕಾಮಗಾರಿಗೆ ಬಂದ ಹಣ ದುರುಪಯೋಗ ವಾಗಬಾರದು. ಈ ಬಗ್ಗೆ ಇಂಜಿನಿಯರ್ ಗಳಿಂದ ಮತ್ತೊಮ್ಮೆ ಅಂದಾಜುಪಟ್ಟಿ ಸಿದ್ಧಪಡಿಸಿ ಎಂದು ಭಂಡಾರಿಯವರು ಹೇಳಿದರು.
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನೇರವಾಗಿ ರಾಜೀವ್ ಗಾಂಧಿ ವಸತಿ ಯೋಜನೆ ವೆಬ್ ಸೈಟ್ ಮೂಲಕವೇ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಫಲಾನುಭವಿಗಳ ಆಯ್ಕೆಯನ್ನು ಸಂಪೂರ್ಣ ಪಾರದರ್ಶಕ ಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಸಭೆಗೆ ಮಾಹಿತಿ ನೀಡಿದರು. ಇನ್ನು ಭವಿಷ್ಯದಲ್ಲಿ ಈ ಯೋಜನೆಯಡಿ ಗ್ರಾಮ ಪಂಚಾಯತ್ ನಿಂದ ಫಲಾನುಭವಿಗಳಿಗೆ ಹಣ ಬಿಡುಗಡೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಕನ್ನಡ ಬಳಕೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ವೃತ್ತಿ ತೆರಿಗೆ ಇಲಾಖೆ ಕಡಿಮೆ ಸಾಧನೆಯನ್ನು ದಾಖಲಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಿಇಒ ಅವರು ಸೂಚಿಸಿದರು.
ತೋಟಗಾರಿಕಾ ಇಲಾಖೆಯಲ್ಲಿ 150 ಮಂಜೂರಾದ ಹುದ್ದೆಗಳಲ್ಲಿ 60 ಹುದ್ದೆ ತುಂಬಲಾಗಿದ್ದು, 90 ಹುದ್ದೆಗಳು ಖಾಲಿ ಇದೆ. ಮಂಗಳೂರಿನಲ್ಲಿ ತೋಟಗಾರಿಕ ಉಪ ನಿರ್ದೇಶಕರ ಕಚೇರಿಯಲ್ಲಿ ಕೇವಲ ಒಬ್ಬ ತೋಟಗಾರಿಕಾ ಸಹಾಯಕ ನಿರ್ದೇಶಕ ರಿದ್ದಾರೆ ಎಂದು ಪ್ರಭಾರ ಅಧಿಕಾರ ದಲ್ಲಿರುವ ಸದಾಶಿವ ರಾವ್ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸುಫಲ 2,600 ಟನ್ ಕೊರತೆ ಯಿದ್ದು, ಕಾಂಪ್ಲೆಕ್ಸ್ ಗೊಬ್ಬರ ಪರ್ಯಾಯ ವಾಗಿ ಬಳಸ ಬಹುದೆಂದು ಜಂಟಿ ಕೃಷಿ ನಿರ್ದೇಶ ಕರು ಹೇಳಿದರು. ಇಫ್ಕೊ ಕಂಪೆನಿ ಮತ್ತು ಐ ಪಿ ಎಲ್ ಸಂಸ್ಥೆಯ ಸಂಯುಕ್ತ ಗೊಬ್ಬರ ಗಳು ಸ್ಥಳೀಯ ಮಣ್ಣಿಗೆ ಉತ್ತಮ ಗೊಬ್ಬರ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು. ಕಳೆದ ಮುಂಗಾರಿ ನಲ್ಲಿ 32,583 ಹೆಕ್ಟೇರ್ ಸಾಧನೆ ಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 32,437 ಹೆಕ್ಟೇರ್ ಬಿತ್ತನೆ ಯಾಗಿದೆ. ಕಳೆದ ಸಾಲಿಗಿಂತ ಸುಮಾರು 100 ಹೆಕ್ಟೇರ್ ಕೃಷಿ ಬಿತ್ತನೆ ಕಡಿಮೆ ಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ಶಿವರಾಮೇಗೌಡ ಅವರು ಇಂದಿರಾ ಆವಾಸ್ ಯೋಜನೆ, ಗ್ರಾಮೀಣ ಆಶ್ರಯ, ಅಂಬೇಡ್ಕರ್ ಯೋಜನೆ ಅಭಿವೃದ್ಧಿಗಳ ಬಗ್ಗೆ ಎಲ್ಲ ತಾಲೂಕು ಇ ಒಗಳಿಂದ ಮಾಹಿತಿ ಪಡೆದು ನಿಗದಿತ ಗುರಿಸಾಧನೆಗೆ ಸಮಯಮಿತಿ ನಿಗದಿ ಪಡಿಸಿದರು.
ಜಿಲ್ಲೆಯಲ್ಲಿ ಎಲ್ಲ ಕೊರಗ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಶಾಲೆಯಿಂದ ಹೊರಗುಳಿದವರ ಸಂಖ್ಯೆ ಅಲ್ಪಪ್ರಮಾಣದ್ದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಾಮೇಗೌಡ ಅವರು ಸಭೆಗೆ ಮಾಹಿತಿ ನೀಡಿದರು. ಆರೋಗ್ಯ, ಮೀನುಗಾರಿಕೆ, ಜಲಾನಯನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗ್ಡೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಸದಾನಂದ ಮಲ್ಲಿ, ಮುಖ್ಯ ಲೆಕ್ಕಾಧಿಕಾರಿ ರಾಮದಾಸ್, ಉಪಸ್ಥಿತರಿದ್ದರು. ಸಿಇಒ ಸ್ವಾಗತಿಸಿದರು. ಮುಖ್ಯ ಯೋಜನಾಧಿಕಾರಿ ಟಿ.ಜೆ. ತಾಕತ್ ರಾವ್ ವಂದಿಸಿದರು.