ಮಂಗಳೂರು,ಸೆಪ್ಟೆಂಬರ್15:ನಮ್ಮ ಶಿಕ್ಷಣ, ಶೈಕ್ಷಣಿಕ ವ್ಯವಸ್ಥೆ, ಸಂಶೋಧನೆಗಳು ಸದುದ್ದೇಶದ ಗುರಿಯೊಂದಿಗೆ ಸಾಧನೆಯತ್ತ ಕ್ರಮಿಸುವಂತಾಗಲಿ; ಇದರಿಂದ ದೇಶ ಅಭಿವೃದ್ಧಿ ಹೊಂದಲಿ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ ಟಿ.ಸಿ ಶಿವಶಂಕರಮೂರ್ತಿ ಹೇಳಿದರು.
ಸುರತ್ಕಲ್ ನ ಎನ್ ಐ ಟಿ ಕೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಯುಕ್ತ ಸಹ ಯೋಗದಲ್ಲಿ ಪ್ರೌಢಶಾಲಾ ಮಕ್ಕಳು ಮತ್ತು ಪ್ರಾಧ್ಯಾ ಪಕರಿಗಾಗಿ ಏರ್ಪಡಿಸಿದ 'ಸೃಜನಿಕ' ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರಿಂದು ಮಾತನಾ ಡುತ್ತಿದ್ದರು.
ನಮ್ಮ ಶೈಕ್ಷಣಿಕ ಪರಿಸರ ವಿದ್ಯಾರ್ಥಿ ಗಳಲ್ಲಿ ವಿಜ್ಞಾನದ ಬಗ್ಗೆ, ಸಂಶೋ ಧನೆ ಬಗ್ಗೆ ಕುತೂಹಲ ಮೂಡಿಸು ವಂತಿ ರಬೇಕು; ಇಂದು ಮೂಲ ವಿಜ್ಞಾನದ ಬಗ್ಗೆ ವಿದ್ಯಾ ರ್ಥಿಗಳ ಆಸಕ್ತಿ ಕುಂದಿದ್ದು, ಶೇಕಡ 19ರಷ್ಟು ವಿದ್ಯಾರ್ಥಿ ಗಳು ಮಾತ್ರ ಮೂಲ ವಿಜ್ಞಾನ ವನ್ನು ಆಯ್ಕೆ ಮಾಡು ತ್ತಿರುವ ಬಗ್ಗೆ ಕುಲ ಪತಿಗಳು ಬೇಸರ ವ್ಯಕ್ತ ಪಡಿಸಿದರು. ನಾವಿಂದು ವೈಜ್ಞಾನಿಕ ಕ್ಷೇತ್ರದಲ್ಲಿ ಹಲವು ಸಾಧನೆ ಗಳನ್ನು ಮಾಡಿದ್ದೇ ವಾದರೂ ಕ್ರಮಿಸ ಬೇಕಾದ ಹಾದಿ ಬಹಳವಿದೆ; ಸವಾ ಲುಗಳು ಸಾಕ ಷ್ಟಿವೆ ಎಂದ ಕುಲ ಪತಿಗಳು, ವಿಜ್ಞಾನಿಗಳು, ಜ್ಞಾನಿಗಳು ಹಾಗೂ ತರಬೇತಿ ಹೊಂದಿದ ಕೌಶಲ್ಯ ಪಡೆದ ಮಾನವ ಸಂಪ ನ್ಮೂಲದ ಅಗತ್ಯ ವನ್ನು ಪ್ರತಿ ಪಾದಿ ಸಿದರು.ದೇಶ ಸ್ವಾತಂತ್ರ್ಯ ಪಡೆದು ಹಲವು ವರ್ಷ ಗಳಾದರೂ ಅನಕ್ಷರತೆ, ಜನ ಸಂಖ್ಯಾ ಸ್ಫೋಟ, ಪೌಷ್ಠಿ ಕಾಂಶ ಕೊರತೆ ನಮ್ಮ ಮುಂದಿನ ಪ್ರಮುಖ ಸವಾಲು ಗಳು, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಗಳಿಂದ ಭಾರತ ಸ್ವಾವ ಲಂಬಿ ಯಾಗಿದೆ. ಬಾಹ್ಯಾಕಾಶ, ಪರಮಾಣು ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರ ಗಳಲ್ಲೂ ದೇಶ ಇಂದು ದಾಖಲಿ ಸಿರುವ ಆರ್ಥಿಕ ಬೆಳವಣಿಗೆ ನಮ್ಮ ವಿಜ್ಞಾನಿಗಳು ಎಲ್ಲ ಕ್ಷೇತ್ರಕ್ಕೂ ನೀಡಿದ ಕೊಡುಗೆಯ ಫಲ ಎಂದರು. ಸೃಜನಿಕೆ ಕಾರ್ಯಾ ಗಾರ ಮಕ್ಕಳಲ್ಲಿ, ಶಿಕ್ಷಕರಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಕಲಿಯುವಿಕೆ ಯಲ್ಲಿ ಅಳವಡಿಸಲು ನೆರ ವಾಗಲಿ ಎಂದು ಅವರು ಹೇಳಿದರು.ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿದ ಎನ್ ಐ ಟಿಕೆ ನಿರ್ದೇಶ ಕರಾದ ಡಾ. ಸಂದೀಪ್ ಸಂಚೇತಿ ಅವರು, ನೋಡಿ ಕಲಿ ಮಾಡಿ ತಿಳಿ ಮೂಲಕ, ಸಂವಾದದ ಮೂಲಕ, ವಿಭಿನ್ನವಾಗಿ ಯೋಚಿಸುವ ಮೂಲಕ ಪ್ರಶ್ನಿಸುವ ಮೂಲಕ ಹಲವು ವಿನೂತ ಗಳನ್ನು ಕಲಿಯುವ ಮತ್ತು ಸಂಶೋಧಿಸಲು ಅನುಕೂಲ ವಾಗಲಿದೆ ಎಂದರು. ಶಾಲೆಗಳಲ್ಲಿ ಕಲಿಯುವಿಕೆ ರೀತಿಯಲ್ಲಿ ಬದಲಾವಣೆ ಇಂದಿನ ತುರ್ತು ಅಗತ್ಯ ಎಂದರು. ವಿಜ್ಞಾನ ಮತ್ತು ಇಂಜಿನಿಯರಿಂಗ್ ಪರಸ್ಪರ ಪೂರಕ ವಿಷಯ ಗಳಾಗಿದ್ದು, ಎರಡು ವಿಷಯವನ್ನು ಪ್ರತ್ಯೇಕಿ ಸುವುದು ಸಲ್ಲ ಎಂದರು. ಉದ್ಘಾಟನಾ ವೇದಿಕೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಡಾ. ವಿಜಯಕುಮಾರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜ್ಞಾನ ಪರಿವೀಕ್ಷಣಾಧಿಕಾರಿ ಸುಬ್ರಹ್ಮಣ್ಯೇಶ್ವರ ಶರ್ಮಾ ಅವರು ಉಪಸ್ಥಿತರಿದ್ದರು. ಡಾ. ಕೆ. ವಿ. ರಾವ್ ಸ್ವಾಗತ ಮತ್ತು ಪ್ರಾಸ್ತಾವನೆ ಗೈದರು.ಕಾರ್ಯಾ ಗಾರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ 180 ವಿದ್ಯಾರ್ಥಿಗಳು ಪಾಲ್ಗೊಳ್ಳ ಬೇಕಿದ್ದು, ಅಪರಾಹ್ನ ದವರೆಗೆ 140 ವಿದ್ಯಾರ್ಥಿಗಳು ಆಗಮಿಸಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಮನೋಭಾವ ಮತ್ತು ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಎರಡು ದಿನಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎನ್ ಎ ಮಧ್ಯಸ್ಥ ಅವರು ಡಾರ್ವಿನ್ ನ ಸಿದ್ದಾಂತದ ಬಗ್ಗೆ ವಿವರಿಸಿದರು. ಶ್ರೀ ಸರ್ವದೆ, ಡಾ. ನರೇಂದ್ರ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 16 ರಂದು ನಡೆಯುವ ಕಾರ್ಯಾಗಾರದಲ್ಲಿ ಡಾ. ಕೆ. ಬಿ. ರಮೇಶ್, ಡಾ. ಜಯಂತ್, ಡಾ. ಸತ್ಯನಾರಾಯಣ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.