ಮಂಗಳೂರು,ಜುಲೈ 21: ಅಂತರ್ ಜಿಲ್ಲಾ ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯಕ್ಕಾಗಿ ಮಾರ್ಗದರ್ಶಕ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಅಧಿಕಾರಿಗಳು ನೆರೆ ಜಿಲ್ಲೆಗಳಲ್ಲಿ ಸಂಭವಿಸಿದ ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹ ಮತ್ತು ತನಿಖೆಯ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಗೋಪಾಲ ಬಿ.ಹೊಸೂರು ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಗಡಿ ಅಪರಾಧ ಸಭೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತ ನಾಡಿದ ಅವರು, ಈ ಮಾಹಿತಿ ಹಂಚಿಕೆ ಮತ್ತು ಪರಸ್ಪರ ಚರ್ಚಿಸುವ ಪ್ರಕ್ರಿಯೆಗಳು ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ಸಹಕಾರಿ ಯಾಗಲಿವೆ ಎಂದರು. ಗಡಿ ಜಿಲ್ಲೆ ಕಾಸರ ಗೋಡು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮಂಗಳೂರು ನಗರ ಪೊಲೀಸ್ ಕಮಿಷ ನರೇಟ್ ಅಧಿಕಾರಿಗಳು ಮತ್ತು ಅಪರಾಧ ವಿಭಾಗದಲ್ಲಿ ಕೆಲಸ ಮಾಡುವ ಸಿಬಂದಿಗಳು ಸಭೆಯಲ್ಲಿ ಪಾಲ್ಗೊಂ ಡಿದ್ದರು ಎಂದು ಐಜಿಪಿ ವಿವರಿಸಿದರು. ಅಂತರ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಳ್ಳುವ ಕ್ರಮ ಹಿಂದಿ ನಿಂದಲೂ ಇದೆ. ಆದರೆ ಇತ್ತೀಚೆಗೆ ಅದು ನಿರ್ದಿಷ್ಡ ರೂಪು ಪಡೆದಿದೆ. ಅದಕ್ಕೆಂದೇ ಅಧಿಕಾರಿಯನ್ನು ನೇಮಿಸುವ ಹಂತಕ್ಕೆ ಬೆಳೆದಿದೆ ಎಂದರು. ನೋಡಲ್ ಅಧಿಕಾರಿಯ ನೇಮಕದಿಂದ ಪರಸ್ಪರ ಮಾಹಿತಿ ಕೊಡು -ಕೊಳ್ಳುವಿಕೆಯ ವೇಗ ಹೆಚ್ಚುವುದು ಮತ್ತು ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಪೂರಕವಾಗಲಿದೆ ಎಂದು ಐಜಿಪಿ ಅವರು ನುಡಿದರು.
ಜನವರಿ 11 ರಂದು ಕಣ್ಣೂರಿನಲ್ಲಿ ಕೇರಳ -ಕರ್ನಾಟಕ ಹಿರಿಯ ಪೊಲೀಸ್ ಅಧಿಕಾರಿ ಗಳ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಫಲಪ್ರದವಾಗಿ ಈ ಸಭೆ ನಡೆದಿದೆ ಮತ್ತು ಆಗಾಗ ಇಂತಹ ಸಭೆಗಳನ್ನು ನಡೆಸಿ ಮಾಹಿತಿ ವಿನಿಮಯ, ಫಲಾಫಲಗಳ ವಿಶ್ಲೇಷಣೆ ನಡೆಸ ಲಾಗುವುದು ಎಂದರು.
ಕಾನೂನು ಸುವ್ಯವಸ್ಥೆ , ಭಯೋತ್ಪಾದನೆ, ಸಂಘಟಿತ ಅಪರಾಧ, ಸಾಂಪ್ರದಾಯಿಕ ಅಪರಾಧ ಮತ್ತು ಆರೋಪಿಗಳ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು ಎಂದು ಪೊಲೀಸ್ ಮಹಾ ನಿರೀಕ್ಷಕರು ತಿಳಿಸಿದರು.ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲಾ ಉಪಾ ಧೀಕ್ಷಕರನ್ನು ನೋಡಲ್ ಅಧಿಕಾರಿ ಗಳಾಗಿ ನಿಯೋಜಿಸ ಲಾಗುವುದು. ಅಂತರ್ಜಿಲ್ಲಾ ಅಪರಾಧ ಪ್ರಕರಣಗಳ ಸುಲಲಿತ ತನಿಖೆ, ಮಾಹಿತಿ ವಿನಿಮಯ ಮತ್ತು ನಿಯಂತ್ರಣಕ್ಕಾಗಿ ಸಹಾಯ ವಾಣಿಯನ್ನು ಆರಂಭಿಸ ಲಾಗುವುದು. ಈ ಕುರಿತು ಶೀಘ್ರ ನಿರ್ಧಾರಕ್ಕೆ ಬರಲಾಗುವುದು ಎಂದು ಐಜಿಪಿ ಹೇಳಿದರು.ಮಹಿಳೆಯರ ಕಾಣೆ, ಗುರುತು ಪತ್ತೆಯಾಗದ ಶವಗಳು ಮತ್ತು ಕಳ್ಳನೋಟು ಕುರಿತು ಸುಧೀರ್ಘ ಚರ್ಚೆ ನಡೆದಿದೆ. ಅಪರಾಧ ವಿಭಾಗದ ಕಾನ್ಸ್ ಟೇಬಲ್ ಮಟ್ಟದ ಸಿಬಂದಿಗಳು ಕೂಡಾ ಸಭೆಯಲ್ಲಿ ಭಾಗವಹಿಸಿರುವುದು ಮತ್ತು ಗುಂಪು ಚರ್ಚೆಯಲ್ಲಿ ಪಾಲ್ಗೊಂಡಿರುವುದು ಇಂದಿನ ವಿಶೇಷ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ| ಸುಬ್ರಹ್ಮಣ್ಯೇಶ್ವರ ರಾವ್, ಮಂಗಳೂರು ನಗರ ಪೊಲಿಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಉಪ ಆಯುಕ್ತ ಎಂ.ಮುತ್ತುರಾಯ (ಅಪರಾಧ ಮತ್ತು ಸಂಚಾರ), ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿ ಕೆ. ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನೋಡಲ್ ಅಧಿಕಾರಿಗಳು:ದ.ಕ., ಕಾಸರಗೋಡು ಜಿಲ್ಲೆಗಳ ಡಿಸಿಆರ್ಬಿ ಪೊಲೀಸ್ ಉಪಾಧೀಕ್ಷಕರು, ದ.ಕ.ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ ಪೆಕ್ಟರ್, ಕಮಿಷರೇಟ್ ನ ಸಿ ಸಿ ಆರ್ ಬಿ ಎಸಿಪಿ, ಸಿಸಿಐಬಿ ಇನ್ಸ್ ಪೆಕ್ಟರ್ ನೋಡಲ್ ಅಧಿಕಾರಿಗಳಾಗಿರುತ್ತಾರೆ.