ಮಂಗಳೂರು,ಜು.15: ಮಂಗಳೂರು ವಿಮಾನ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಹಾಗೂ ಬದುಕುಳಿದವರಿಗೆ ಕೌನ್ಸಿಲಿಂಗ್ ನಡೆಸಲು ಮನೋ ವಿಜ್ಞಾನ ವಿಭಾಗದ ನಾಲ್ವರು ವಿದ್ಯಾರ್ಥಿಗಳಿಗೆ ರೋಶನಿ ನಿಲಯದಲ್ಲಿ ಇಂದಿನಿಂದ ತರಬೇತಿ ಆರಂಭಿಸಲಾಗಿದೆ.
ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ತಜ್ಞ ಡಾ.ಜಯಕುಮಾರ್ ಕೆ. ಹಾಗೂ ನಿಮ್ಹಾನ್ಸಿನ ತಜ್ಞ ವೈದ್ಯ ಡಾ. ಕೆ. ಸೇಕರ್ ಅವರು ರೋಶನಿ ನಿಲಯದಲ್ಲಿ ಇಬ್ಬರು ಕೇರಳದ ಹಾಗೂ ಇಬ್ಬರು ಕರ್ನಾಟಕದ ವಿದ್ಯಾರ್ಥಿಗಳಿಗೆ ಇಂದಿನಿಂದ 3 ದಿನಗಳ ವಿಶೇಷ ತರಬೇತಿ ನೀಡುತ್ತಿದ್ದಾರೆ.ತರಬೇತಿ ಬಳಿಕ ಇವರು ಸಂತ್ರಸ್ಥರ ಮನೆಗಳಿಗೆ ಭೇಟಿ ನೀಡಿ ಕೌನ್ಸಿಲಿಂಗ್ ನಡೆಸುವರಲ್ಲದೆ,ದುರಂತದಲ್ಲಿ ಬದುಕುಳಿದವರಿಗೆ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೂ ಕೌನ್ಸಿಲಿಂಗ್ ನೀಡಲಿರುವರು ಎಂದು ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.