ಮಂಗಳೂರು, ಜುಲೈ 21:ಸ್ವಚ್ಛತಾ ಆಂದೋಲನದಲ್ಲಿ ಜಿಲ್ಲೆಯ 203 ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ಲಭಿಸಿ, ಸಾಧನೆಯಲ್ಲಿ ಜಿಲ್ಲೆ ಮುಂದಿದ್ದರೂ ನಿರಂತರತೆಗೆ ಒತ್ತು ನೀಡಬೇಕಾಗಿದೆ ಎಂದು ದ.ಕ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯನ್ನು ದ್ದೇಶಿಸಿ ಮಾತನಾ ಡುತ್ತಿದ್ದರು. ಸ್ವಚ್ಛತೆ ಜಿಲ್ಲೆಯಲ್ಲಿ ಒಂದು ಆಂದೋಲ ನವಾಗಿ ಮಾರ್ಪಟ್ಟು ಎಲ್ಲರ ಸಕ್ರಿಯ ಪಾಲ್ಗೊಳ್ಳು ವಿಕೆಗೆ ಪ್ರೇರೇಪಿಸಿ ಸಾಧನೆ ಮಾಡಲಾ ಯಿತಾದರೂ ನಿರಂತರತೆ ಸಾಧಿಸುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪಟ್ಟಣಗಳಾಗಿ ರೂಪು ಗೊಳ್ಳುತ್ತಿರುವ ಪ್ರದೇಶ ಗಳಿಂದಾಗಿ ತ್ಯಾಜ್ಯ ವಿಲೇವಾರಿ ಸ್ಥಳೀಯಾ ಡಳಿತಕ್ಕೆ ಸವಾಲಾಗಿದೆ.ಈ ಸಂಬಂಧ ವಿವಿಧ ಅಧ್ಯಯ ನಗಳ ಬಳಿಕ ಸರಳ ತಂತ್ರಜ್ಞಾನ ಮತ್ತು ಅನುದಾನ ಲಭ್ಯತೆಯನ್ನು ಗಮನ ದಲ್ಲಿರಿಸಿ ಮೈಸೂರಿನ ಭಗೀರಥ ಸಂಸ್ಥೆಯ ನೆರವಿ ನೊಂದಿಗೆ ಬೆಳ್ತಂಗಡಿಯ ಲಾಯಿಲಾ, ಮಂಗಳೂರಿನ ಕಟೀಲು, ಮನ್ನಬೆಟ್ಟು, ಕಿನ್ನಿಗೋಳಿ, ಪುತ್ತೂರಿನ ಕಡಬ, ಸುಳ್ಯದ ಸುಬ್ರಹ್ಮಣ್ಯದಲ್ಲಿ ಘನಹಾಗೂ ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಪೈಲೆಟ್ ಪ್ರಾಜೆಕ್ಟ್ ಗಳನ್ನು ರೂಪಿಸಲು ನಿರ್ಧರಿ ಸಲಾಗಿದೆ. ಈ ಯೋಜನೆಗಳ ಯಶಸ್ಸಿಗೆ ಜನರ ಸಹಭಾಗಿತ್ವದ ಅಗತ್ಯವನ್ನು ಮನಗಾಣಲಾಗಿದ್ದು, ನೀರು ನೈರ್ಮಲ್ಯ ಸಮಿತಿಗಳು ತಿಂಗಳಲ್ಲಿ ಒಂದು ಬಾರಿ ತಾಲೂಕು ಮಟ್ಟದಲ್ಲಿ ಕನಿಷ್ಠ 2 ಗಂಟೆ ಈ ಸಂಬಂಧ ಸಭೆ ನಡೆಸಿ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಸಾಂಕ್ರಾಮಿಕ ಕಾಯಿಲೆಗಳು ಹರಡಿದಾಗ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಡಾಕ್ಟರ ಗಳ ಬಗ್ಗೆ ಮಾತ್ರ ಹೆಚ್ಚಿನ ಚರ್ಚೆಗಳು ನಡೆಯುತ್ತವೆ; ಆದರೆ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದಾಗ ಈ ಸಂಬಂಧ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ, ಈ ಬಗ್ಗೆ ನೀರು ನೈರ್ಮಲ್ಯ ಸಮಿತಿ ಹೆಚ್ಚಿನ ಗಮನ ಹರಿಸಬೇಕೆಂದು ಅವರು ನುಡಿದರು.
ವಿದೇಶಗಳಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಸಾಧ್ಯವಾಗಿದ್ದು, ನಮ್ಮಲ್ಲಿ ತ್ಯಾಜ್ಯದಲ್ಲಿ ತೇವಾಂಶ ಜಾಸ್ತಿ ಇರುವುದರಿಂದ ಈ ಬಗ್ಗೆಗಿನ ಉತ್ಪನ್ನದ ಬಗ್ಗೆ ಚಿಂತಿಸಲಾಗಿಲ್ಲ. ಇಲ್ಲಿ ಲಾಭಕ್ಕಿಂತ ತ್ಯಾಜ್ಯ ನಿರ್ವಹಣೆಗೆ ಮೊದಲಿಗೆ ಹೆಚ್ಚಿನ ಒತ್ತು ನೀಡಿ, ಭಗೀರಥ ಸಂಸ್ಥೆಯ ಮಾರ್ಗದರ್ಶನದಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಜಲಮೂಲಗಳು ಕಲುಷಿತಗೊಳ್ಳದಂತೆ, ಸುತ್ತ ಮುತ್ತಲ ಪ್ರದೇಶಗಳಲ್ಲಿ ವಾಸನೆ ಬಾರದಂತೆ ಕಸವಿಲೇ ಮಾಡಲು ಜನರೊಂದಿಗೆ ಚರ್ಚಿಸಲಾಗಿದೆ. ಜೆ ಎಂ ಎಸ್ ಟೆಕ್ನಾಲಜಿಯಿಂದ ಪರಿಸರ ಸ್ನೇಹಿ ತ್ಯಾಜ್ಯ ವಿಲೇವಾರಿ ಸಾಧ್ಯ ಎಂದರು. ಇಒ ಗಳು ಈ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿ ವಹಿಸಿ ಕರ್ತವ್ಯ ನಿರ್ವಹಿಸಬೇಕೆಂದರು. ವಾರ್ಡ ಸಮಿತಿಗಳನ್ನು ಸಕ್ರಿಯಗೊಳಿಸಿ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಬೇಕು. ಬಯಲು ಮಲವಿಸರ್ಜನೆ ಮುಕ್ತ ಹಾಗೂ ಸ್ವಚ್ಛತೆಯ ಬಗ್ಗೆ ನಿರಂತರತೆ ಕಾಯ್ದುಕೊಳ್ಳಲು ಮುಖ್ಯ ಯೋಜನಾಧಿಕಾರಿಗಳು ಯೋಜನೆಯನ್ನು ರೂಪಿಸಬೇಕು ಎಂದು ಸಿಇಒ ಸೂಚಿಸಿದರು.
203 ಗ್ರಾಮ ಪಂಚಾಯತ್ ವ್ಯಾಪ್ತಿಯ 360 ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯದ ಲಭ್ಯತೆ ಬಗ್ಗೆ ಸಮೀಕ್ಷೆ ಯನ್ನು ನಡೆಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಹಿ ಮಾಡಿ ಜಿಲ್ಲಾ ಪಂಚಾಯತ್ ಗೆ ಸಲ್ಲಿಸಲು ಸಿಇಒ ಅವರು ಇದೇ ಸಭೆಯಲ್ಲಿ ಸೂಚಿಸಿದರು. ಸಿಪಿಒ ಸ್ವಾಗತಿಸಿ ವಂದಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀ ರಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಾಮೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಕುಂತಳ, ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ, ಕೃಷ್ಣ ಮೂಲ್ಯರು ಸೇರಿದಂತೆ ಜಿಲ್ಲಾ ಪಂಚಾಯತ್ ನ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು. ಘನತ್ಯಾಜ್ಯ ವಿಲೇವಾರಿ ಬಗ್ಗೆ ಅಸಿಸ್ಟೆಂಟ್ ಸೆಕ್ರೆಟರಿ ಚಂದ್ರಶೇಖರ್ ಮಸಗುಪ್ಪಿ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ವಿವರಿಸಿದರು.