ಮಂಗಳೂರು, ಜುಲೈ 30 :ಉಳಿದೆಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿ ವಿಭಿನ್ನವಾಗಿದ್ದು, ಆರೋಗ್ಯ ಸೇವೆ ನೀಡುವವರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಹಾಗೂ ಸೇವೆಯಲ್ಲಿ ವಿಶಿಷ್ಟತೆಯನ್ನು ಕಾಯ್ದು ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಸಭಾಂಗ ಣದಲ್ಲಿ ಏರ್ಪಡಿಸ ಲಾಗಿದ್ದ ಆರೋಗ್ಯಾ ಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾ ಡುತ್ತಿದ್ದರು. ಇಂದು ಜಿಲ್ಲೆಯ 63 ಪ್ರಾಥಮಿಕ ಆರೋಗ್ಯ ಕೇಂದ್ರಗಳ, 7 ಸಮುದಾಯ ಆರೋಗ್ಯ ಕೇಂದ್ರಗಳ, ನಗರ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವೆನ್ ಲಾಕ್ ವೈದ್ಯಾಧಿ ಕಾರಿಗಳ ಪಾಲ್ಗೊಂಡ ಸಭೆಯಲ್ಲಿ ಆರೋಗ್ಯ ಸೇವೆಯ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸದ್ಬಳಕೆ, ಜನರಿಗೆ ಆರೋಗ್ಯ ಇಲಾಖೆ ನೀಡುತ್ತಿರುವ ಸೇವೆ, ಸೇವೆ ನೀಡುತ್ತಿರುವ ಡಾಕ್ಟರ್ ಗಳ ಸ್ಥಿತಿ-ಗತಿ, ಸಮಸ್ಯೆ, ಅವರ ದೂರದೃಷ್ಟಿ, ಮಾದರಿ ಆಲೋಚನೆ ಗಳ ಬಗ್ಗೆ ಸವಿವರ ಸಮಾ ಲೋಚನೆ ಜಿಲ್ಲಾಧಿ ಕಾರಿಗಳ ನೇತೃತ್ವದಲ್ಲಿ ನಡೆಯಿತು. ಪ್ರಸಕ್ತ ಪರಿಸ್ಥಿತಿಯಲ್ಲಿ ಸೇವೆ ಗಳನ್ನು ಇನ್ನಷ್ಟು ಉತ್ತಮವಾಗಿ ನೀಡುವ ಬಗ್ಗೆ, ಇದ್ದ ಸಂಪನ್ಮೂಲ ಗಳನ್ನು ಸದ್ಬಳಕೆ ಮಾಡಿ ಅಗತ್ಯ ಜನರಿಗೆ ಸೌಲಭ್ಯ ತಲುಪಿಸುವ ಬಗ್ಗೆ ಉಪಸ್ಥಿತರಿದ್ದ ಅನುಭವಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ಅಭಿಪ್ರಾಯ ಪಡೆದರು. ಮಾದರಿ ಆರೋಗ್ಯ ಕೇಂದ್ರಗಳನ್ನು ಅದೇ ಮಾದರಿ ರೂಪಿಸಲು ದೊರೆತ ಸ್ಪೂರ್ತಿ ಮತ್ತು ನೆರವಿನ ಬಗ್ಗೆ ಸಹೋದ್ಯೋಗಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಎಲ್ಲರಿಂದಲೂ ಪಡೆಯಲು ಮಾದರಿ ಪ್ರಶ್ನೆಗಳನ್ನು ತಯಾರಿಸಿ ಫೀಡ್ ಬ್ಯಾಕ್ ಪಡೆಯಲು ನಿರ್ಧರಿಸಲಾಯಿತು. ತಾಲೂಕು ವೈದ್ಯಾಧಿಕಾರಿಗಳು ವೈದ್ಯಕೀಯ ಸೇವೆಗಿಂತ ಮಿಗಿಲಾಗಿ ಡಾಟಾ ಎಂಟ್ರಿ ಆಪರೇಟರ್ ಕೆಲಸ ಮಾಡಲು ಹೆಚ್ಚಿನ ಸಮಯ ಮೀಸಲಿಡಬೇಕಾದ ಕುರಿತು ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಇದ್ದ ವ್ಯವಸ್ಥೆಯಲ್ಲೇ ಅದಕ್ಕೆ ಪರಿಹಾರ ಕಂಡುಹಿಡಿಯಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.ಈ ಕುರಿತು ಸ್ಪಷ್ಟ ಮಾಹಿತಿ ಹಾಗೂ ಪ್ರಾಜೆಕ್ಟ್ ತಯಾರಿಸಲು ಶ್ರೀನಿವಾಸ ಕಾಲೇಜಿನ ಸಿಬ್ಬಂದಿಗಳು ಮುಂದಾಗಿದ್ದು, ದೂರುಗಳನ್ನು ಮಾತ್ರ ದಾಖಲಿಸದೆ ಸೇವಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ವರದಿ ತಯಾರಿಸಲು ಮುಂದೆ ಬಂದಿದ್ದಾರೆ ಎಂದರು. ಈ ಸಂಬಂಧ ಮುಂದಿನ ತಿಂಗಳು ಇನ್ನೊಂದು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಇಂದಿನ ಸಭೆಯಿಂದ ಬಹಳಷ್ಟು ಅನುಕೂಲವಾಗಿದೆ. ಆತ್ಮಾವಲೋಕನ, ಗುರಿ, ಸಾಧನೆ, ಕೊರತೆಗಳ ಬಗ್ಗೆ ಮಾಹಿತಿ ವಿನಿಮಯ, ಸಮಸ್ಯೆಗಳು, ಅದಕ್ಕೆ ಪರಿಹಾರದ ಬಗ್ಗೆಯೂ ಹಾಗೂ ಗುಣಮಟ್ಟದ ಸೇವೆಯಲ್ಲಿ ಪರಿಪೂರ್ಣತೆ ಸಾಧಿಸುವ ಕುರಿತು ಐದು ಹಂತಗಳಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ ಉಪಸ್ಥಿತರಿದ್ದರು.