ಮಂಗಳೂರು,ಜ.26:ರಾಜ್ಯದಲ್ಲಿ 4ನೇ ಪೋಲಿಸ್ ಕಮಿಷನರೇಟ ಮಂಗಳೂರಿನಲ್ಲಿ ಗಣರಾಜ್ಯೋತ್ಸವದಂದು ಉದ್ಘಾಟಿಸಲಾಯಿತು.ರಾಜ್ಯ ಗೃಹ ಮತ್ತು ಮುಜರಾಯಿ ಸಚಿವರಾದ ಡಾ.ವಿ.ಎಸ್.ಆಚಾರ್ಯ ಅವರು ಮಂಗಳೂರು ನಗರ ಪೋಲಿಸ್ ಕಮಿಷನರೇಟನ್ನು ಉದ್ಘಾಟಿಸಿದರು.ಜಿಲ್ಲೆಯ ಅಭಿವೃದ್ಧಿಗೆ ಶಾಂತಿ ಮತ್ತು ಸುವ್ಯವಸ್ಥೆ ಅನಿವಾರ್ಯ ಎಂದ ಗೃಹ ಸಚಿವರು, ಇದಕ್ಕಾಗಿಯೇ ಮಂಗಳೂರಿಗೆ ಬಹು ವರ್ಷಗಳ ಬೇಡಿಕೆಯಾದ ಕಮಿಷನರೇಟನ್ನು ನೀಡಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿ ಕರ್ತವ್ಯ ನಿರ್ವಹಿಸಲಿ ಎಂದು ಹಾರೈಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖೆಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿ ಪೊಲೀಸ್ ಬಲ ಸಂವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಗೃಹಸಚಿವರ ಗಮನಕ್ಕೆ ತಂದರು. ಪೊಲೀಸ್ ಮಹಾನಿರೀಕ್ಷಕ ಡಾ. ಅಜಯ ಕುಮಾರ್ ಸಿಂಹ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತ ನಾಡಿದರು. ಶಾಸಕ ರಾದ ಯೋಗೀಶ್ ಭಟ್, ಯು.ಟಿ. ಖಾದರ್, ಅಭಯಚಂದ್ರ ಜೈನ್, ಮಹಾಪೌರ ಎಂ. ಶಂಕರ್ ಭಟ್, ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಮನಾಪ ಅಧ್ಯಕ್ಷ ಮಾಧವ ಭಂಡಾರಿ, ಜಿಲ್ಲಾಧಿಕಾರಿ ಪೊನ್ನುರಾಜ್ ಭಾಗವಹಿಸಿದ್ದರು. ಪಶ್ಚಿಮ ವಲಯ ಮಹಾನಿರೀಕ್ಷಕ ಗೋಪಾಲ್ ಹೊಸೂರ್ ಸ್ವಾಗತಿಸಿದರು. ಪೊಲೀಸ್ ಅಧೀಕ್ಷಕ ಡಾ.ಸುಬ್ರಮಣ್ಯೇಶ್ವರ ರಾವ್ ವಂದಿಸಿದರು.