ಮಂಗಳೂರು,ಜ.13:ಪ್ರಾಕೃತಿಕ ವಿಕೋಪದ ಜೊತೆಗೆ ಮನುಷ್ಯನ ತಪ್ಪುಗಳಿಂದಾಗುವ ವಿಪತ್ತು ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ಹೇಳಿದರು.
ಅವರಿಂದು ಹೋಮ್ ಗಾರ್ಡ್ಸ, ಸಿವಿಲ್ ಡಿಫೆನ್ಸ್, ಫೈರ್ ಅಂಡ್ ಎಮರ್ಜೆನ್ಸಿ ಸರ್ವಿಸ್, ನಿಟ್ಟೆ ಯುನಿವರ್ಸಿಟಿ,ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈಯನ್ಸ್ ನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಪ್ರಾಕೃತಿಕ ವಿಕೋಪ ಆಕಸ್ಮಿಕ ಆದರೆ ಮಾನವನ ದುರಾಸೆಯಿಂದ ಹಲವು ಬಾರಿ ಈ ವಿಪತ್ತುಗಳ ಪರಿಣಾಮ ಭೀಕರವಾಗಿರುತ್ತದೆ.ಯಾವುದೇ ಸಂದರ್ಭದಲ್ಲಿ ಇಂತಹ ಆಪತ್ತುಗಳ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗರೂಕತೆಯ ಬಗ್ಗೆ ಜಿಲ್ಲಾಧಿಕಾರಿಗಳು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ.ಶಾಂತರಾಮ ಶೆಟ್ಟಿಯವರು ಮಾತನಾಡಿದರು.
ಸಮಾ ರಂಭದಲ್ಲಿ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ನಿದರ್ಶ್ ಡಿ.ಹೆಗ್ಡೆ ಉಪಸ್ಥಿತರಿದ್ದರು. ಡಾ.ಬಿ.ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ಅಗ್ನಿಶಾಮಕಪಡೆಯ ಅಧಿಕಾರಿ ಬಸಪ್ಪ ನೇತೃತ್ವದಲ್ಲಿ ಅಣಕು ಪ್ರದರ್ಶನವನ್ನು ಏರ್ಪಡಿಸಲಾಯಿತು.