
ಅವರು ಇಂದು ಪುರ ಭವನದಲ್ಲಿ ಏರ್ಪಡಿಸಲಾದ ಜನಸ್ಪಂದನ ಸಭೆಯನ್ನು ಉದ್ದೇಶಿಸಿ ಮಾತನಾಡಿ,ರಸ್ತೆ ಅಗಲೀಕರಣಕ್ಕೆ ನೆರವು ನೀಡಿದವರಿಗೆ ಕೃತಜ್ಞತೆ ಸಲ್ಲಸಿದರಲ್ಲದೆ, ದಕ್ಷಿಣ ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಯೋಜನೆಗಳ ವಿವರ ನೀಡಿದರು.ಒಳರಸ್ತೆಗಳಿಗೆ ವಿಶೇಷ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ ಎಂದರು.ರಸ್ತೆ ಅವಘಡ, ಕಾನೂನು ಉಲ್ಲಂಘನೆ, ಬಸ್ ವ್ಯವಸ್ಥೆ,ಅಡುಗೆ ಅನಿಲ ಕೊರತೆ,ರೇಷನ್ ಕಾರ್ಡ್ ವಿತರಣೆಯಲ್ಲಾದ ಲೋಪಗಳ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಮುಖ್ಯವಾಗಿ ವಿಧವಾ ವೇತನ, ವೃದ್ಧಾಪ್ಯ ವೇತನದ ಬಗ್ಗೆ ಜನರು ಸಭೆಯಲ್ಲಿ ದೂರು ನೀಡಿದರು.
