
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇಕಡ 50 ರಷ್ಟು (9,37,255) ಮಂಗಳೂರು ಪೋಲಿಸ್ ಕಮಿಷನರೇಟ್ ಪೋಲಿಸ್ ಆಯುಕ್ತರ ವ್ಯಾಪ್ತಿಗೆ ಬರಲಿದ್ದು,ಆಯುಕ್ತರು ನ್ಯಾಯಿಕ ಅಧಿಕಾರವನ್ನು ಹೊಂದಿರುವರು. ಇವರಿಗೆ ಆಡಳಿತಾತ್ಮಕವಾಗಿ ಸಹಾಯ ಮಾಡಲು ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರ, ನಗರ ಶಸ್ತ್ರಸ್ರ ಮೀಸಲು ಪಡೆಗೆ ಮೂವರು ಉಪ ಆಯುಕ್ತರು ಕಾರ್ಯ ನಿರ್ವಹಿಸಲಿದ್ದಾರೆ.ಅನೇಕ ಹೆಚ್ಚುವರಿ ಪೋಲಿಸ್ ಠಾಣಾಗಳು ನಿರ್ಮಾಣ ಆಗಬೇಕಾಗಿದ್ದು,ಪ್ರತೀ ಠಾಣೆಗೆ ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿಳ ನೇಮಕ ಆಗಬೇಕಿದೆ. ಪ್ರಸ್ತುತ ಪೋಲಿಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸೇರಿ 753 ಸಿಬಂದಿಗಳಿದ್ದು, ಇನ್ನೂ ಹೆಚ್ಚುವರಿಯಾಗಿ 805 ಸಿಬಂದಿಗಳ ಸೇರ್ಪಡೆಯಾಗಬೇಕಿದೆ.ಅದೇ ರೀತಿ ಪ್ರತ್ಯೇಕವಾಗಿ ಅಸ್ಥಿತ್ವಕ್ಕೆ ಬರುವ ನಗರ ಶಸಸ್ತ್ರ ಮೀಸಲು ಪಡೆಗೆ 748 ಸಿಬಂದಿಗಳ ನೇಮಕ ಪ್ರಕ್ರೀಯೇ ಆಗಬೇಕಾಗಿದೆ.ಪ್ರಸ್ತುತ ಕಮಿಷನರೇಟ್ ವರ್ಗೀಕರಣ ಸಂದರ್ಭ ಹಿರಿಯ ಅಧಿಕಾರಿ ಮತ್ತು ಸಿಬಂದಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.ಜಿಲ್ಲಾ ಎಸ್ಪಿ ಡಾ, ಸುಬ್ರಹ್ಮಣ್ಯೇಶ್ವರ ರಾವ್,ಎಡಿಷನಲ್ ಎಸ್ಪಿ ಆರ್. ರಮೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.