Saturday, January 30, 2010

ಪೋಲಿಸ್ ಕಮಿಷನರೇಟ್ 2 ವರ್ಷಗಳಲ್ಲಿ ಪೂರ್ಣ: ಐಜಿಪಿ ಹೊಸೂರು

ಮಂಗಳೂರು, ಜನವರಿ 30: ಮಂಗಳೂರಿನಲ್ಲಿ ಪೂರ್ಣ ಪ್ರಮಾಣದ ಪೋಲಿಸ್ ಕಮಿಷನರೇಟ್ ವ್ಯವಸ್ಥೆ ಮುಂದಿನ 2 ವರ್ಷಗಳಲ್ಲಿ ಜಾರಿಗೆ ಬರಲಿದೆ ಎಂದು ಪ್ರಭಾರ ಪೋಲಿಸ್ ಆಯುಕ್ತರಾದ ಗೋಪಾಲ್ ಹೊಸೂರು ಹೇಳಿದ್ದಾರೆ. ಮಂಗಳೂರಿನಲ್ಲಿಂದು ಮಾಧ್ಯಮಾಗೋಷ್ಟಿಯಲ್ಲಿ ವಿವರಗಳನ್ನು ನೀಡಿದರು.ಪೂರ್ಣ ಪ್ರಮಾಣದ ಕಮೀಷನರೇಟ್ ಜಾರಿಗೆ ಬರಲು ಮೂಲಭೂತ ಸೌಕರ್ಯಗಳಾದ ಸ್ಥಳ, ಕಟ್ಟಡ, ಸಿಬಂದಿಗಳ ನೇಮಕಾತಿ, ತರಬೇತಿಗಳ ಅಗತ್ಯವಿದ್ದು,ಇದಕ್ಕಾಗಿ ಸುಮಾರು 26.60 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ,ಇದಲ್ಲದೇ ಅಗತ್ಯವಿರುವ ವಾಹನಗಳು ಮತ್ತು ಪೀಠೋಪಕರಣಗಳಿಗೆ ಹೆಚ್ಚುವರಿಯಾಗಿ 5.1 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ ಎಂದ ಅವರು 2 ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪೋಲಿಸ್ ಕಮೀಷನರೇಟ್ ಜಾರಿಗೆ ಬರಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇಕಡ 50 ರಷ್ಟು (9,37,255) ಮಂಗಳೂರು ಪೋಲಿಸ್ ಕಮಿಷನರೇಟ್ ಪೋಲಿಸ್ ಆಯುಕ್ತರ ವ್ಯಾಪ್ತಿಗೆ ಬರಲಿದ್ದು,ಆಯುಕ್ತರು ನ್ಯಾಯಿಕ ಅಧಿಕಾರವನ್ನು ಹೊಂದಿರುವರು. ಇವರಿಗೆ ಆಡಳಿತಾತ್ಮಕವಾಗಿ ಸಹಾಯ ಮಾಡಲು ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರ, ನಗರ ಶಸ್ತ್ರಸ್ರ ಮೀಸಲು ಪಡೆಗೆ ಮೂವರು ಉಪ ಆಯುಕ್ತರು ಕಾರ್ಯ ನಿರ್ವಹಿಸಲಿದ್ದಾರೆ.ಅನೇಕ ಹೆಚ್ಚುವರಿ ಪೋಲಿಸ್ ಠಾಣಾಗಳು ನಿರ್ಮಾಣ ಆಗಬೇಕಾಗಿದ್ದು,ಪ್ರತೀ ಠಾಣೆಗೆ ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿಳ ನೇಮಕ ಆಗಬೇಕಿದೆ. ಪ್ರಸ್ತುತ ಪೋಲಿಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸೇರಿ 753 ಸಿಬಂದಿಗಳಿದ್ದು, ಇನ್ನೂ ಹೆಚ್ಚುವರಿಯಾಗಿ 805 ಸಿಬಂದಿಗಳ ಸೇರ್ಪಡೆಯಾಗಬೇಕಿದೆ.ಅದೇ ರೀತಿ ಪ್ರತ್ಯೇಕವಾಗಿ ಅಸ್ಥಿತ್ವಕ್ಕೆ ಬರುವ ನಗರ ಶಸಸ್ತ್ರ ಮೀಸಲು ಪಡೆಗೆ 748 ಸಿಬಂದಿಗಳ ನೇಮಕ ಪ್ರಕ್ರೀಯೇ ಆಗಬೇಕಾಗಿದೆ.ಪ್ರಸ್ತುತ ಕಮಿಷನರೇಟ್ ವರ್ಗೀಕರಣ ಸಂದರ್ಭ ಹಿರಿಯ ಅಧಿಕಾರಿ ಮತ್ತು ಸಿಬಂದಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.ಜಿಲ್ಲಾ ಎಸ್ಪಿ ಡಾ, ಸುಬ್ರಹ್ಮಣ್ಯೇಶ್ವರ ರಾವ್,ಎಡಿಷನಲ್ ಎಸ್ಪಿ ಆರ್. ರಮೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಕಿಂದರಿಜೋಗಿ ಹಬ್ಬ

ಮಂಗಳೂರು,ಜ.30:ದೇಶದ ಆರ್ಥಿಕ,ಸಾಮಾಜಿಕ ಬೆಳವಣಿಗೆಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಪಾತ್ರ ಪ್ರಮುಖ ಎಂದು ಐಜಿಪಿ ಗೋಪಾಲ್ ಹೊಸೂರ್ ಹೇಳಿದರು.ಉತ್ತರ ಕರ್ನಾಟಕದಲ್ಲಿ ಪತ್ರಿಕೆಯ ಪ್ರಭಾವ,ಪತ್ರಿಕೆಯ ಸಾಮಾಜಿಕ ಬದ್ಧತೆಯ ಬಗ್ಗೆ ಹೊಸೂರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಅವರಿಂದು ಕೊಡಿಯಾಲ್ ಬೈಲ್ ನ ಕರ್ಣಾಟಕ ಬ್ಯಾಂಕ್ ನ ಆಡಿಟೋರಿಯಂ ನಲ್ಲಿ ದಕ್ಷಿಣ ಕನ್ನಡ -ಉಡುಪಿ-ಕಾಸರಗೋಡು ಜಿಲ್ಲೆಗಳ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ದಿ. ಹಾರನಹಳ್ಳಿ ರಾಮಸ್ವಾಮಿಯವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಸಹಬಾಳ್ವೆ ಸಾಮಾಜಿಕ ಬಾಳ್ವೆಗೆ ಆರೋಗ್ಯಕರ ಚರ್ಚಾ ಸ್ಪರ್ಧೆಗಳ ಅಗತ್ಯವನ್ನು ಪ್ರತಿಪಾದಿಸಿದ ಹೊಸೂರ್, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚರ್ಚೆಯ ಪಾತ್ರವನ್ನು ವಿವರಿಸಿದರು.ಹರಿಕೃಷ್ಣ ಪುನರೂರು ಅವರು ಉದ್ಘಾಟನಾ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಲೋಕಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಅಶೋಕ ಹಾರನಹಳ್ಳಿ ವಹಿಸಿದ್ದರು. ಸಹಸಂಪಾದಕ ಅನಿಲ್ ಕುಮಾರ್ ಸ್ಘಾಗತಿಸಿದರು. ಸಂಪಾದಕ ಹುಣಸವಾಡಿ ರಾಜನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ಣಾಟಕ ಬ್ಯಾಂಕಿನ ನಾನ್ ಎಕ್ಸಿಕ್ಯೂಟಿವ್ ಛೇರ್ ಮನ್ ಅನಂತಕೃಷ್ಣ, ಬಾರ್ ಕೌನ್ಸಿಲ್ ನ ಸೀತಾರಾಂ ಶೆಟ್ಟಿ,ಕಾರ್ಯದರ್ಶಿ ನಾರಾಯಣ ಉಪಸ್ಥಿತರಿದ್ದರು.

Tuesday, January 26, 2010

ಮಂಗಳೂರಿಗೆ ಪೋಲಿಸ್ ಕಮಿಷನರೇಟ್

ಮಂಗಳೂರು,ಜ.26:ರಾಜ್ಯದಲ್ಲಿ 4ನೇ ಪೋಲಿಸ್ ಕಮಿಷನರೇಟ ಮಂಗಳೂರಿನಲ್ಲಿ ಗಣರಾಜ್ಯೋತ್ಸವದಂದು ಉದ್ಘಾಟಿಸಲಾಯಿತು.ರಾಜ್ಯ ಗೃಹ ಮತ್ತು ಮುಜರಾಯಿ ಸಚಿವರಾದ ಡಾ.ವಿ.ಎಸ್.ಆಚಾರ್ಯ ಅವರು ಮಂಗಳೂರು ನಗರ ಪೋಲಿಸ್ ಕಮಿಷನರೇಟನ್ನು ಉದ್ಘಾಟಿಸಿದರು.ಜಿಲ್ಲೆಯ ಅಭಿವೃದ್ಧಿಗೆ ಶಾಂತಿ ಮತ್ತು ಸುವ್ಯವಸ್ಥೆ ಅನಿವಾರ್ಯ ಎಂದ ಗೃಹ ಸಚಿವರು, ಇದಕ್ಕಾಗಿಯೇ ಮಂಗಳೂರಿಗೆ ಬಹು ವರ್ಷಗಳ ಬೇಡಿಕೆಯಾದ ಕಮಿಷನರೇಟನ್ನು ನೀಡಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿ ಕರ್ತವ್ಯ ನಿರ್ವಹಿಸಲಿ ಎಂದು ಹಾರೈಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖೆಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿ ಪೊಲೀಸ್ ಬಲ ಸಂವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಗೃಹಸಚಿವರ ಗಮನಕ್ಕೆ ತಂದರು. ಪೊಲೀಸ್ ಮಹಾನಿರೀಕ್ಷಕ ಡಾ. ಅಜಯ ಕುಮಾರ್ ಸಿಂಹ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತ ನಾಡಿದರು. ಶಾಸಕ ರಾದ ಯೋಗೀಶ್ ಭಟ್, ಯು.ಟಿ. ಖಾದರ್, ಅಭಯಚಂದ್ರ ಜೈನ್, ಮಹಾಪೌರ ಎಂ. ಶಂಕರ್ ಭಟ್, ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಮನಾಪ ಅಧ್ಯಕ್ಷ ಮಾಧವ ಭಂಡಾರಿ, ಜಿಲ್ಲಾಧಿಕಾರಿ ಪೊನ್ನುರಾಜ್ ಭಾಗವಹಿಸಿದ್ದರು. ಪಶ್ಚಿಮ ವಲಯ ಮಹಾನಿರೀಕ್ಷಕ ಗೋಪಾಲ್ ಹೊಸೂರ್ ಸ್ವಾಗತಿಸಿದರು. ಪೊಲೀಸ್ ಅಧೀಕ್ಷಕ ಡಾ.ಸುಬ್ರಮಣ್ಯೇಶ್ವರ ರಾವ್ ವಂದಿಸಿದರು.

'ನಮ್ಮ ಪಡಸಾಲೆ' ಉದ್ಘಾಟನೆ

ಮಂಗಳೂರು,ಜ.26: ವಿಶೇಷವಾಗಿ ಅಂಗವಿಕಲರು ಮತ್ತು ಹಿರಿಯ ನಾಗರೀಕರು ಸರತಿಯ ಸಾಲಿನಲ್ಲಿ ನಿಲ್ಲುವ ಬವಣೆ ನಿವಾರಿಸಲು ಹಾಗೂ ನಾಗರೀಕರ ಅನುಕೂಲಕ್ಕಾಗಿ ರಾಜ್ಯದಲ್ಲೇ ಪ್ರಥಮ ಎಂಬಂತೆ 'ನಮ್ಮ ಪಡಸಾಲೆ' ಸೌಕರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೆಮಾರ್ ಅವರು ಇಂದು ಮಂಗಳೂರು ತಾಲೂಕು ಕಚೇರಿ ಆವರಣದಲ್ಲಿ ಉದ್ಘಾಟಿಸಿದರು.

ಶಾಸಕ ಯೋಗಿಶ್ ಭಟ್,ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಅಬೂಬಕ್ಕರ್,ನಗರ ಪಾಲಿಕೆ ಆಯುಕ್ತ ಡಾ. ವಿಜಯ ಪ್ರಕಾಶ್, ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತಾಲೂಕು ಕಚೇರಿಯಲ್ಲಿ ನೀಡಲ್ಪಡುವ ಎಲ್ಲ ದಾಖಲೆ ಗಳನ್ನು ಮತ್ತು ಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಒಂದೇ ಸೂರಿನಡಿಯಲ್ಲಿ ಅವಕಾಶವನ್ನು ನಮ್ಮ ಪಡಸಾಲೆಯಲ್ಲಿ ಕಲ್ಪಿಸಲಾಗಿದೆ.ಈ ವಿನೂತನ ವ್ಯವಸ್ಥೆಯಿಂದಾಗಿ ಅರ್ಜಿದಾರರು ದಾಖಲೆಗಳೊಂದಿಗೆ ಅರ್ಜಿ ನೀಡಿದ ತಕ್ಷಣ ಆದಾಯ ಮತ್ತು ಜಾತಿ ದೃಢೀಕರಣ ಪತ್ರ ನೀಡುವ ಹೊಸ ಶಕೆ ಆರಂಭಗೊಂಡಿದೆ. ಮಂಗಳೂರಿನ 3 ಗ್ರಾಮಗಳಲ್ಲಿ ಮತ್ತು ಬಂಟ್ವಾಳ ತಾಲೂಕಿನ 11 ಗ್ರಾಮಗಳಲ್ಲಿ ಒಟಿಸಿಎಸ್ (over the counter service)ವ್ಯವಸ್ಥೆ ಜಾರಿಗೆ ಬಂದಿದೆ.

ಜಿಲ್ಲೆಯ ಉಳಿದ ಭಾಗಗಳಲ್ಲಿ ಇವತ್ತಿನಿಂದ ಒಂದು ದಿವಸದಲ್ಲಿ ಆದಾಯ ಮತ್ತು ಜಾತಿ ಪತ್ರಗಳನ್ನು ನೀಡುವಂತೆ ವ್ಯವಸ್ಥೆ ಜಾರಿಗೆ ತಂದಿದೆ. ಅರ್ಜಿ ನೀಡಿದ ತಕ್ಷಣ ಲಭ್ಯವಾಗುವ ಆದಾಯ ಮತ್ತು ಜಾತಿ ದೃಢೀಕರಣ ಪತ್ರದ ಈ ಯೋಜನೆ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಮುಂದಿನ ಒಂದು ತಿಂಗಳಲ್ಲಿ ಲಭ್ಯವಾಗಲಿದೆ ಎಂದು ಈ ಸಮಾರಂಭದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ವಿವರಿಸಿದರು.

ಮಂಗಳೂರಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ, ಮುಖ್ಯಮಂತ್ರಿ ನಿಧಿಗೆ ರೂ. 2,63,22,839 ದೇಣಿಗೆ

ಮಂಗಳೂರು,ಜ.26:ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ರಾಜ್ಯದ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿದ್ದು,ಎಲ್ಲಾ ಸ್ತರಗಳಲ್ಲಿ, ಎಲ್ಲರ ಅಭಿವೃದ್ಧಿಗೆ ಕೈಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಆಡಳಿತ ಯಂತ್ರವನ್ನು ಸರಳಗೊಳಿಸಲು ಹಲವಾರು ವಿನೂತನ ಕ್ರಮಗಳನ್ನು ಜಿಲ್ಲಾಡಳಿತ ಜಾರಿಗೆ ತಂದಿದೆ ಎಂದು ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದರು.

ಅವರಿಂದು 60 ನೇ ಗಣ ರಾಜ್ಯೋ ತ್ಸವದಲ್ಲಿ ನಗರದ ನೆಹರು ಮೈದಾನದಲ್ಲಿ ಧ್ವಜಾ ರೋಹಣ ಮತ್ತು ಗಣ ರಾಜ್ಯೋತ್ಸವ ಸಂದೇಶ ನೀಡಿ ಮಾತ ನಾಡುತ್ತಿದ್ದರು.ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸವಿವರ ಚಿತ್ರಣ ನೀಡಿದ ಅವರು ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ವಿವಿಧ ಯೋಜನೆಗಳಿಗೆ 950 ಕೋಟಿ ರೂ.ಗಳನ್ನು ವ್ಯಯಿಸಿ ಪ್ರಗತಿ ಸಾಧಿಸಿರುವುದು ದಾಖಲೆ ಎಂದರು.

ಭೂ ಸುಧಾರಣಾ ಕಾಯ್ದೆ ಮೇರೆಗೆ ಮಂಜೂ ರಾಗಿರುವ ಜಮೀನು ಗಳನ್ನು ಕೃಷಿ ಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡುವ ಬಗ್ಗೆ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ಕಂದಾಯ ನಿರೀಕ್ಷಕರಿಂದ ವರದಿಯನ್ನು ನೇರವಾಗಿ ಜಿಲ್ಲಾಧಿಕಾರಿಗಳೇ ಪಡೆಯುವ ಸರಳೀಕೃತ ವ್ಯವಸ್ಥೆಯನ್ನು ರಾಜ್ಯದಲ್ಲೇ ಪ್ರಥಮವಾಗಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳಲ್ಲಿ ಪ್ರಯೋಗಿಕವಾಗಿ ಜಾರಿಗೆ ತರಲಾಗುತ್ತದೆ,ಸಾರ್ವಜನಿಕರು ಭೂಪರಿವರ್ತನಾ ಅರ್ಜಿಗಳನ್ನು ಗ್ರಾಮ ಪಂಚಾಯತ್ ಅಥವಾ ನೆಮ್ಮದಿ ಕೇಂದ್ರಗಳ ಮೂಲಕ ಸಲ್ಲಿಸಬಹುದು ಎಂದರು.

ಸಮಾ ರಂಭದಲ್ಲಿ ಮುಖ್ಯ ಮಂತ್ರಿ ಸಂತ್ರಸ್ತರ ನಿಧಿಗೆ ಜಿಲ್ಲೆಯಿಂದ ಸಂಗ್ರಹಿ ಸಲಾದ 2,63,22,839 ರೂ.ಗಳನ್ನು ಜಿಲ್ಲಾ ಧಿಕಾರಿಗಳು ಸಚಿವರ ಮೂಲಕ ಸರ್ಕಾರಕ್ಕೆ ಹಸ್ಥಾಂತರಿಸಿದರು. 16 ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ಕೃಷಿ ಪ್ರಶಸ್ತಿ ವಿಜೇತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಕೆ.ಸಂತೋಷ್ ಕುಮಾರ್ ಭಂಡಾರಿ,ಶಾಸಕರಾದ ಎನ್. ಯೋಗೀಶ್ ಭಟ್, ಯು.ಟಿ.ಖಾದರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಮಹಾಪೌರ ಎಂ.ಶಂಕರ್ ಭಟ್,ಜಿಲ್ಲಾಧಿಕಾರಿ, ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಗೃಹ ರಕ್ಷಕದಳದ ಹಿರಿಯ ಅಧಿಕಾರಿಗಳು ಸೇರಿದಂತೆ ಆನೇಕ ಗಣ್ಯರು ಉಪಸ್ಥಿತರಿದ್ದರು.

Monday, January 25, 2010

ಗ್ರಾಮೀಣ ಗುಡಿಕೈಗಾರಿಕೆಗಳಿಂದ ಗಾಂಧೀಜಿ ಕನಸು ನನಸು


ಮಂಗಳೂರು, ಜ.25: ಗ್ರಾಮೀಣ ಗುಡಿ ಕೈಗಾರಿಕೆ ಗಳಿಂದ ಗ್ರಾಮಾಂತ ರದ ಜನರಿಗೆ ಉದ್ಯೋಗ ಹಾಗೂ ರಾಷ್ಟ್ರಪಿತ ಗಾಂಧೀಜಿ ಕನಸನ್ನು ನನಸು ಮಾಡಿದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು ಹೇಳಿದರು. ಮಹಿಳಾ ಸಂಘಟನೆಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು; ಸರ್ಕಾರ ಸರ್ವ ರೀತಿಯಲ್ಲಿ ಪ್ರತಿಯೊಬ್ಬರಿಗೂ ಕೆಲಸ ನೀಡುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಅಭಿವೃದ್ಧಿಗೆ ಪ್ರೋತ್ಸಾಹ ಕೊಡುವ ಕೆಲಸಗಳನ್ನು ಮಾಡುತ್ತಿದೆ ಎಂದರು. ಸಮಾರಂಭದಲ್ಲಿ ಶಾಸಕ ಯೋಗೀಶ್ ಭಟ್, ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.

Saturday, January 23, 2010

ಕಾನೂನು ಸುವ್ಯವಸ್ಥೆಯಲ್ಲಿ ದ.ಕ.ಜಿಲ್ಲೆ ಪ್ರಥಮ


ಅತ್ಯುತ್ತಮ ಕಾನೂನು ಸುವ್ಯವಸ್ಥೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ದಕ್ಷಿಣ ಕನ್ನಡ ಪೋಲಿಸ್ ಇಲಾಖೆ ಪಡೆದಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಮಾದ್ಯಮಾ ಗೋಷ್ಟಿಯಲ್ಲಿ ತಿಳಿಸಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಪೋಲಿಸ್ ಅಧಿಕಾರಿಗಳ ಸಮಾವೇಶದಲ್ಲಿ ಈ ಪ್ರಶಸ್ತಿ ಮತ್ತು ಪ್ರಶಸ್ತಿ ಪತ್ರವನ್ನು ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಅವರು ಪ್ರದಾನ ಮಾಡಿದರು ಎಂದ ಆವರು ಈ ಪ್ರಶಸ್ತಿ ಜಿಲ್ಲಾ ಪೋಲಿಸ್ ಸಿಬಂದಿ ಮತ್ತು ಸಹಕಾರ ನೀಡಿದ ಸಾರ್ವಜನಿಕರಿಗೆ ಸಲ್ಲುತ್ತದೆ ಎಂದರು.ಜಿಲ್ಲಾ ಎಡಿಷನಲ್ ಎಸ್ಪಿ ಆರ್. ರಮೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ವಾಹನಗಳ ಕೆಂಪು ದೀಪ ಪ್ರದರ್ಶನಕ್ಕೆ ಸರ್ಕಾರದ ಮಾರ್ಗಸೂಚಿ

ಮಂಗಳೂರು,ಜ.23: ಸರ್ಕಾರದ ನಿಯಮಾವಳಿಯ ಪ್ರಕಾರ 32 ಮಂದಿ ನಿರ್ದಿಷ್ಟ ಅತಿ ಗಣ್ಯ ಹಾಗೂ ಗಣ್ಯ ವ್ಯಕ್ತಿಗಳು ತಮ್ಮ ವಾಹನದಲ್ಲಿ ಕೆಂಪು ದೀಪ ಬಳಸಬಹುದು. ಕೆಂಪು ದೀಪ ಅಳವಡಿಸಲು ಅರ್ಹರಲ್ಲದ ಕೆಲವು ಅಧಿಕಾರಿಗಳು,ನಿಗಮ ಮಂಡಳಿಯ ಮುಖ್ಯಸ್ಥರು ತಮ್ಮ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸುವುದರಿಂದ ರಸ್ತೆ ಸಂಚಾರ ನಿರ್ವಹಣೆಗೆ ತೊಂದರೆಯಾಗುವುದಲ್ಲದೆ, ಸಮರ್ಥವಾಗಿ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಾದ ಕ್ರಮಕೈಗೊಂಡಿದ್ದು,ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.

ಅನಧಿ ಕೃತವಾಗಿ ಯಾವು ದಾದರೂ ನಿಗಮ ಮಂಡಳಿಯ ವಾಹನಗಳಿಗೆ ಅಥವಾ ಬಾಡಿಗೆ ನೆಲೆಯ ವಾಹನಗಳಿಗೆ ಇಲಾಖಾ ಅಧಿಕಾರಿಗಳು ಕೆಂಪು ದೀಪ ಅಳವಡಿಸಿಕೊಂಡಿದ್ದರೆ ಅವುಗಳನ್ನು ಕಳಚಿಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಅನಧಿಕೃತ ವ್ಯಕ್ತಿಗಳು ಕೆಂಪು ದೀಪಗಳನ್ನು ವಾಹನಗಳ ಮೇಲೆ ಅಳವಡಿಸುವುದರಿಂದ ಭದ್ರತೆ ಒದಗಿಸಲು ಪೊಲೀಸರಿಗೆ ಹಾಗೂ ಸಾರಿಗೆ ಇಲಾಖೆಗೆ ಕಷ್ಟವಾಗುತ್ತಿದೆ.

ಆದ್ದರಿಂದ ಕ್ಯಾಬಿನೆಟ್ ಸಚಿವರು, ವಿಪಕ್ಷ ನಾಯಕರು, ರಾಜ್ಯಸಚಿವರು, ಸಂಸದರು, ಸಾರಿಗೆ ಕಮಿಷನರ್, ಸಹಾಯಕ ಕಮಿಷನರ್, ಸಹಾಯಕ ಪೊಲೀಸ್ ಅಧೀಕ್ಷಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ, ಕಸ್ಟಮ್ಸ್ ಕಮಿಷನರ್ ಇವರೆಲ್ಲ ಕೆಂಪು ದೀಪ ಅಳವಡಿಸಿದ ಕಾರಿನಲ್ಲಿ ಸಂಚರಿಸಬಹುದು. ಪೊಲೀಸ್ ಇಲಾಖೆ ಅಧಿಕೃತವಾಗಿ ಕೆಂಪು ದೀಪ ಬಳಸುವ ಕಾರುಗಳ ಪಟ್ಟಿ ಮಾಡಿದ್ದು, ಅನಧಿಕೃತ ಬಳಕೆ ಕಂಡುಬಂದರೆ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಚಾಲಕನೊಬ್ಬನೇ ಗಾಡಿಯಲ್ಲಿ ಹೋಗುವಾಗ ಕಾರಿನ ಮೇಲೆ ಕೆಂಪು ದೀಪ ಉರಿಯಬಾರದು. ಅದನ್ನು ಕಪ್ಪು ಬಟ್ಟೆಯಿಂದ ಮರೆಮಾಚಬೇಕು ಎಂದು ನಿಯಮದಲ್ಲಿ ಸ್ಪಷ್ಟ ಪಡಿಸಲಾಗಿದೆ.ನಿಯಮ ಮೀರಿದ ಚಾಲಕನಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಡಳಿತ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

Thursday, January 21, 2010

ಆಡಳಿತದಲ್ಲಿ ಕನ್ನಡ ಕಡ್ಡಾಯ;ಔದಾರ್ಯಕ್ಕೆ ಅವಕಾಶವಿಲ್ಲ:ಸಿ.ಎಂ.ಯಡಿಯೂರಪ್ಪ

ಮಂಗಳೂರು,ಜ.21:ರಾಜ್ಯ ಸರ್ಕಾರ ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡ ಬಳಕೆ ಕಡ್ಡಾಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.

ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆಡಳಿತ ತರಬೇತಿ ಸಂಸ್ಥೆ ಮೈಸೂರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ವಿವಿ ಹಂಪಿಯ ಸಹ ಯೋಗದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಏಕ ಕಾಲದಲ್ಲಿ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ 3 ದಿನಗಳ ತರಬೇತಿ ಕಾರ್ಯ ಕ್ರಮವನ್ನು ವಿಡಿಯೋ ಸಂವಾದದ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾಷಾವಾರು ಪ್ರಾಂತ್ಯ ರಚನೆಯಾಗಿ 5 ದಶಕಗಳೇ ಕಳೆದಿದ್ದು, ಕನ್ನಡವೇ ಆಡಳಿತ ಭಾಷೆ ಎಂದು ಆದೇಶ ಹೊರಡಿಸಿದ್ದರೂ ಸಂಪೂರ್ಣ ಕನ್ನಡ ಅನುಷ್ಠಾನ ವಾಗದಿರುವುದಕ್ಕೆ ಖೇದ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಇನ್ನು ಮುಂದೆ ಜೌದಾರ್ಯ, ರಿಯಾಯಿತಿಗಳಿಲ್ಲ; ಆಡಳಿತದಲ್ಲಿ, ನಾಮಫಲಕಗಳಲ್ಲಿ, ವ್ಯವಹಾರಗಳಲ್ಲಿ ಕನ್ನಡ ಬಳಕೆ ಕಡ್ಡಾಯ. ಆದೇಶ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದರು.
ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತ್ರಿಭಾಷಾ ಸೂತ್ರ ಒಪ್ಪಿರುವ ನಾವು, ಕನ್ನಡೀಕರಣಕ್ಕೆ ಸಂಪೂರ್ಣ ಸಹಕಾರ ನೀಡಬೇಕು.ಎಲ್ಲ ಜಿಲ್ಲಾಧಿಕಾರಿಗಳು ಕನ್ನಡಪ್ರೇಮಿಗಳಾಗಬೇಕೆಂದರು. ಮುಖ್ಯಮಂತ್ರಿಗಳು ದಾವಣಗೆರೆ,ಬೀದರ್, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಕನ್ನಡ ಅನುಷ್ಠಾನದ ಬಗ್ಗೆ ಸಂವಾದ ನಡೆಸಿದರು.
ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾರ್ಗದರ್ಶನ ನೀಡಿದರು. ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅವರು ವಂದಿಸಿದರು.

Wednesday, January 20, 2010

ಅನುದಾನ ಸದ್ಬಳಕೆ ಮಾಡಿ ಕ್ರಿಯಾವರ್ಧಕಗಳಂತೆ ಕರ್ತವ್ಯನಿರ್ವಹಿಸಿ: ಸಂಸದ ನಳಿನ್ ಕುಮಾರ್

ಮಂಗಳೂರು,ಜ.20:ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ ಜನಪರ ಯೋಜನೆಗಳನ್ನು ಕೇಂದ್ರ ಸ್ಥಾನದಲ್ಲಿ ಕುಳಿತ ಅನುಷ್ಠಾನಕ್ಕೆ ತರಲು ಯತ್ನಿಸದೆ ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಕಾರ್ಯೋನ್ಮುಖರಾಗಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರಿಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಕೇಂದ್ರ ಸರ್ಕಾರದ ಯೋಜನೆಯಡಿ ರೂಪಿಸಲ್ಪಟ್ಟ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ, ಇಂದಿರಾ ಆವಾಸ್ ಯೋಜನೆ,ಸ್ವರ್ಣಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆ,ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ,ಗ್ರಾಮೀಣ ನೀರು ಸರಬರಾಜು ಯೋಜನೆ,ಸಂಪೂರ್ಣ ಸ್ವಚ್ಛತೆಯಲ್ಲಾದ ಪ್ರಗತಿ ಪರಿಶೀಲನೆ ನಡೆಸಿ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲವು ತಾಲೂಕು ಮುಂಚೂಣಿಯಲ್ಲಿರುವುದಕ್ಕೆ ಮತ್ತೆ ಕೆಲವು ಹಿಂದುಳಿದಿರುವುದರ ಕುರಿತು ವಿವರವಾದ ಮಾಹಿತಿಯನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಂದ ಪಡೆದ ಅವರು, ಈ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವಂತೆ ಹೇಳಿದರು. ಜಿಲ್ಲೆಯಲ್ಲಿ ಮನೆ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದ್ದು, ನಿಗದಿತ ಗುರಿ ಮತ್ತು ಸಾಧನೆಗಳ ಅವಲೋಕನ ಮಾಡಿ ಗುರಿ ತಲುಪುವಲ್ಲಿ ವಿಫಲರಾದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು. ಮಾಹಿತಿಗಳನ್ನು ಸ್ಪಷ್ಟವಾಗಿ ಮತ್ತು ಸತ್ಯ ಮಾಹಿತಿ ನೀಡಬೇಕೆಂದೂ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ತಾಲೂಕುಗಳಿಗೂ ಸಮಾನವಾಗಿ ಅಭಿವೃದ್ಧಿ ಯೋಜನೆಗಳನ್ನು ಹಂಚಿ ಅನುಷ್ಠಾನಕ್ಕೆ ತರುವಂತೆ ಸೂಚಿಸಿದ ಅವರು, ರಸ್ತೆ ಕಾಮಗಾರಿಗಳ ಸಂಪೂರ್ಣ ವಿವರ ಪಡೆದರಲ್ಲದೆ, ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಅನುಷ್ಠಾನಕ್ಕೆ ತರಲು ಸೂಚನೆ ನೀಡಿದರು.ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಯೋಜನಾ ನಿರ್ದೇಶಕರಾದ ಸೀತಮ್ಮ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಅಧಿಕಾರಿಗಳು, ತಾ.ಪಂ. ಇ.ಒ ಗಳು, ತಾಲೂಕು ಪಂಚಾಯತ್ ಅಧ್ಯಕ್ಷರು, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Tuesday, January 19, 2010

ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ

ಮಂಗಳೂರು,ಜ.19:ಅಪಘಾತಗಳಿಗೆ ಯಾರು ಕಾರಣ ಎಂಬುದರ ಕುರಿತು ಚರ್ಚಿಸದೆ ಹೇಗೆ ಅಪಘಾತಗಳನ್ನು ತಪ್ಪಿಸಬಹುದು ಎಂಬುದರ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ನಿಟ್ಟೆ ವಿ.ವಿ.ಯ ಡೀನ್ ಡಾ.ಶಾಂತರಾಮ ಶೆಟ್ಟಿ ಹೇಳಿದರು.

ಅವರಿಂದು 21 ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ 2010ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇಂತಹ ಆಚರಣೆಗಳಿಂದ ಸಾಮೂಹಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳು ಹೆಚ್ಚಬೇಕು; ಅಪಘಾತಗಳ ಸಂಖ್ಯೆ ಕಡಿಮೆಯಾಗಬೇಕು ಹಾಗಾದಾಗ ಮಾತ್ರ ಆಚರಣೆಗಳು ಸಾರ್ಥಕ ಎಂದು ಹೇಳಿದರು.ಅಪಘಾತಗಳ ತೀವ್ರತೆಯ ಬಗ್ಗೆ ವೈಯಕ್ತಿಕ ಅನುಭವಗಳನ್ನು ಅವರು ಹಂಚಿಕೊಂಡರು.

ಆರ್ ಟಿ ಒ ಪುರುಷೋತ್ತಮ ಜೆ. ಸ್ವಾಗತಿಸಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್ .ರಮೇಶ್,ಬಸ್ಸುಮಾಲಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಲ್ಲಾಳ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ಸಂಬಂಧ ಏರ್ಪಡಿಸಲಾಗಿದ್ದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಅಪಘಾತ ರಹಿತ ಚಾಲಕರನ್ನು ಸನ್ಮಾನಿಸಲಾಯಿತು.

Monday, January 18, 2010

ಸಹಕಾರಿ ತತ್ವದಿಂದ ಶೋಷಣೆಮುಕ್ತ ಸಮಾಜ:ಸಿ ಎಂ. ಯಡಿಯೂರಪ್ಪ

ಮಂಗಳೂರು,ಜ.18: ರಾಜ್ಯದಲ್ಲಿ ಸಹಕಾರಿಗಳಿಂದ ಸಾಕಷ್ಟು ಅಭಿವೃದ್ಧಿ ಕಾರ್ಯವಾಗಿದೆ; ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಸಂಘಸಂಸ್ಥೆಗಳು ಕಾರ್ಯನಿರ್ವಹಿಸಿವೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಅವರಿಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಲಿ.ನ ಶತ ಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪರಿಶ್ರಮ,ಪ್ರಾಮಾಣಿಕತೆ ,ಗುರಿತಲುಪುವ ಛಲ ಇದ್ದರೆ ಯಶಸ್ಸು ಸಾದ್ಯ ಎಂಬುದಕ್ಕೆ ಈ ಸಹಕಾರಿ ಬ್ಯಾಂಕ್ ಉತ್ತಮ ಉದಾಹರಣೆ ಎಂದ ಅವರು,ಕ್ರಿಯಾಶೀಲವಾಗಿ ಒಂದು ಶತಮಾನ ಪೂರೈಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಹಕಾರಿ ಆಂದೋಲನದ ಇತಿಹಾಸ,ಸಾಮಾಜಿಕ ಬದ್ಧತೆಯ ಬಗ್ಗೆ ಮಾತನಾಡಿದ ಅವರು,ಸಮಾನತೆ ಮತ್ತು ಸದೃಢ,ಸುವ್ಯವಸ್ಥಿತ ವ್ಯವಸ್ಥೆಗೆ ಸಹಕಾರಿಗಳ ಕೊಡುಗೆಯನ್ನು ಪ್ರಶಂಸಿಸಿದರು.ರಾಜ್ಯ ಸರ್ಕಾರ ರೈತರ,ವಿದ್ಯಾರ್ಥಿಗಳಿಗೆ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ರೂಪಿಸಿದ ಯೋಜನೆಗಳು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಸರ್ಕಾರದ ಖಜಾನೆಯಲ್ಲಿ ಆಭಿವೃದ್ಧಿ ಯೋಜನೆ ಗಳಿಗೆ ಹಣದ ಕೊರತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಸೋರಿಕೆ ತಡೆಗಟ್ಟಿ ಹಣ ಕಾಸಿನ ಸುವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದರು. ಹಿರಿಯ ಸಹಕಾರಿಗಳಾದ ಪೆರಾಜೆ ಶ್ರೀನಿವಾಸ ರಾವ್, ನರಸಿಂಹನಾಯಕ್ ರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿ ಅಭಿನಂದಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯರಾದ ಡಿ.ವಿ.ಸದಾನಂದಗೌಡ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೇಮಾರ್ ಅವರು ಮೊಳಹಳ್ಳಿ ಶಿವರಾಯರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಮಾಡಿದರು.
ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯೋಗೀಶ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪುತ್ತೂರು ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು,ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Sunday, January 17, 2010

ಜ್ಯೋತಿ ಬಸು ನಿಧನಕ್ಕೆ ಮುಖ್ಯಮಂತ್ರಿ ಸಂತಾಪ



ಮಂಗಳೂರು, ಜ.17: ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿ ಜ್ಯೋತಿ ಬಸು ನಿಧನಕ್ಕೆ ಕರ್ನಾಟಕ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಜ್ಯೋತಿ ಬಸು ನಿಧನ ಕೇವಲ ಪಶ್ಷಿಮ ಬಂಗಾಳಕ್ಕೆ ಆದ ನಷ್ಟವಲ್ಲ, ಇಡೀಯ ದೇಶಕ್ಕೇ ನಷ್ಟವಾಗಿದೆ; ಒಬ್ಬ ಹಿರಿಯ ರಾಜಕೀಯ ಮುತ್ಸದ್ದಿ ಯಾಗಿದ್ದ ಅವರು ಅನೇಕ ಆಭಿವೃದ್ದಿ ಕಾರ್ಯಗಳಿಗೆ ಕಾರಣರಾಗಿದ್ದರು.ದೇಶದ ಅಭಿವೃದ್ಧಿಯಲ್ಲಿ ಅವರ ಹಿರಿತನ,ಅನುಭವದ ಕೊರತೆ ನಮಗಾದ ನಷ್ಟ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮತ್ತು ಶ್ರೀಕೃಷ್ನ ಮಠದ ಪರ್ಯಾಯದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಬಜಪೆ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.ಇಂದು ಉಡುಪಿಯಲ್ಲಿ ತಂಗುವ ಅವರು,18ರಂದು ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ದಕ್ಷಿಣ ಕನ್ನಡದ ಪುತ್ತೂರಿಗೆ ಆಗಮಿಸಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವರು.

Saturday, January 16, 2010

ಸಮುದ್ರೋತ್ಪನ್ನ ರಫ್ತಿಗೆ ಕ್ಯಾಚ್ ಸರ್ಟಿಫಿಕೆಟ್

ಮಂಗಳೂರು ಜನವರಿ 12: ಕಾನೂನು ಬಾಹಿರ, ಬೇನಾಮಿ ಮತ್ತು ಅನಿರ್ಬಂಧಿತ ಮೀನುಗಾರಿಕೆ ತಡೆಗೆ ಮತ್ತು ಹಿಡಿದ ಮೀನಿಗೆ ನ್ಯಾಯಯುತ ಬೆಲೆ ದೊರಕಿಸಲು ಯರೋಪಿಯನ್ ಯೂನಿಯನ್ ಕ್ಯಾಚ್ ಸರ್ಟಿಫಿಕೆಟ್ ಸ್ಥಿರೀಕರಣ ವ್ಯವಸ್ಥೆಯ ಜಾರಿಗೆ ನಿರ್ಧರಿಸಿದೆ.
ಈ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲಾ ಮೀನುಗಾರಿಕೆ ಬೋಟ್ ಗಳ ಮಾಲೀಕರ ಮತ್ತು ಸಾಗರೋತ್ಪನ್ನ ರಫ್ತುದಾರರ ಸಹಕಾರವನ್ನು ಕೋರಿರುವ ಎಫ್ ಎ ಒ ಮತ್ತು ಇಂಡಿಯನ್ ಒಸಿಯನ್ ಟ್ಯೂನಾ ಕಮಿಷನ್ ನಂತಹ ಪ್ರಾಂತೀಯ ಮೀನುಗಾರಿಕಾ ನಿರ್ವಹಣಾ ಸಂಘಟನೆಗಳು ಈ ವ್ಯವಸ್ಥೆಗೆ ಮುಂದಾಗಿದೆ.

ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುವ ಮೀನು,ಸಿಗಡಿ,ಕಟಲ್ ಫಿಶ್ ಮುಂತಾದವುಗಳು ನ್ಯಾಯ ಸಮ್ಮತ (ಸ್ಥಿರೀಕರಿಸಿದ)ಕ್ಯಾಚ್ ಸರ್ಟಿಫಿಕೆಟ್ ಗಳನ್ನು ಹೊಂದಿರುವ ಅವಶ್ಯಕತೆ ಬಗ್ಗೆ ಯುರೋಪಿಯನ್ ಕಮಿಷನ್ ಹೊಸ ನಿಯಮ ಹೊರತಂದಿದೆ. ಮೀನುಗಾರಿಕೆ ನಡೆಸಿದ ಪ್ರದೇಶ ಮತ್ತು ಬಂದರಿಗೆ ತಲುಪಿದ ಬಗ್ಗೆ ತಿಳಿದುಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಿದೆ.

2010ನೇ ಇಸವಿಯ ಜನವರಿ 1 ಮತ್ತು ನಂತರ ಸಮುದ್ರದಿಂದ ಹಿಡಿದು ರಫ್ತು ಮಾಡುವ ಸರಕುಗಳಿಗೆ ಅನ್ವಯವಾಗುತ್ತದೆ. ನೇರವಾಗಿ ಅಥವಾ ಅನ್ಯದೇಶದ ಮೂಲಕ ರಫ್ತು ಮಾಡುವ ಸರಕುಗಳೀಗೆ ಈ ನಿಯಮ ಲಾಗು ಆಗುತ್ತದೆ. ಸಮುದ್ರೋತ್ಪನ್ನವನ್ನು ರಫ್ತು ಮಾಡುವ ಎಲ್ಲ ದೇಶಗಳು ಈ ಅಗತ್ಯತೆಯನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡಿರುತ್ತವೆ ಮತ್ತು ಈ ಬಗ್ಗೆ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ತಿಳಿಸಿರುತ್ತವೆ.
ಉದ್ದಿಮೆಯಿಂದ (ಬೋಟ್ ಮಾಲಿಕರು ಅಥವಾ ರಫ್ತುದಾರರು) ನೀಡಲ್ಪಡುವ ಕ್ಯಾಚ್ ಸಟರ್ಿಫಿಕೇಟ್ ಗಳು ಸರಕಾರಿ ಪ್ರಾಧಿಕಾರದಿಂದ ಸ್ಥಿರೀಕರಿಸಿ ಮೇಲು ರುಜು ಹೊಂದಿರಬೇಕು. ರಫ್ತು ಮಾಡುವ ರಾಷ್ಟ್ರಗಳು,ಕೆಲವು ವಿಷಯಗಳ ಬಗ್ಗೆ ಆಳವಾಗಿ ಎಚ್ಚರಿಕೆ ವಹಿಸುವ ಬಗ್ಗೆ ಅಗತ್ಯ ಇರುತ್ತದೆ.
ಪ್ರತಿ ವರ್ಷ 2800 ಕೋಟಿ ರೂ. ಬೆಲೆಯ ಸಾಗರೋತ್ಪನ್ನಗಳು ಭಾರತದಿಂದ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಯುರೋಪ್ ಒಕ್ಕೂಟ ರಾಷ್ಟ್ರಗಳ ಮಾರುಕಟ್ಟೆ ಪ್ರಾಮ್ಯುಖತೆಯನ್ನು ಪರಿಗಣಿಸಿ ಕ್ಯಾಚ್ ಸರ್ಟಿಫಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಭಾರತ ಸಕರ್ಾರ, ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಿದೆ.
ಎಂಪಿಡಾ (ಮೆರೈನ್ ಪ್ರೊಡಕ್ಟ್ ಎಕ್ಸಪೋಟರ್್ ಡೆವಲಪಮೆಂಟ್ ಅಥಾರಿಟಿ) ಈಗಾಗಲೇ ಬೋಟ್ ಗಳ ಮೂಲಕ ನೇರವಾಗಿ ಅಥವಾ ಮಧ್ಯವರ್ತಿ ಗಳ ಮೂಲಕ ರಫ್ತುದಾರರಿಗೆ ತಲುಪುವ ಹಿಡುವಳಿಯ ನಿಗಾ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ಸ್ಥಿರೀಕರಣ ಕಾರ್ಯ ಆರಂಭಿಸಿದೆ. ಮೊದಲ ಹಂತವಾಗಿ ಬೋಟ್ ಗಳಿಗೆ ಲಾಗ್ ಬುಕ್ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ನಮೂನೆಯನ್ನು ಪುಕ್ಕಟೆಯಾಗಿ ಒದಗಿಸಲು ನಿಶ್ಚಯಿಸಿದೆ. ಹಿಡುವಳಿಯನ್ನು ನಮೂದಿಸುವ ಕ್ಯಾಚ್ ಸರ್ಟಿಫಿಕೆಟ್ ಗಳನ್ನು ವೇಗವಾಗಿ ಸ್ಥಿರೀಕರಿಸುವ ನಿಟ್ಟಿನಲ್ಲಿ ಗಣಕೀಕರಣದ ವ್ಯವಸ್ಥೆಯನ್ನು ಮಾಡಿವೆ.
ಮಂಗಳೂರು,ಜ.16: 21 ನೇ ರಾಷ್ಟೀಯ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಮಂಗಳೂರಿನಲ್ಲಿ ರಸ್ತೆ ಸುರಕ್ಷಾ ಜಾಥಾ ನಡೆಯಿತು.

ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೋಲಿಸ್ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿ ಸಲಾಗಿದ್ದ ಜಾಥಾಕ್ಕೆ ಜಿಲ್ಲಾ ಎಸ್ಪಿ ಡಾ.ಸುಬ್ರಹ್ಮಣ್ಯೇಶವರ ರಾವ್ ಅವರು ಚಾಲನೆ ನೀಡಿದರು.ನಗರ ಸಂಚಾರ ನಿರೀಕ್ಷಕ ಮಂಜುನಾಥ ಶೆಟ್ಟಿ, ಆರ್ ಟಿ ಓ ಪುರುಷೋತ್ತಮ್ ಜೆ. ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸುರಕ್ಷಿತ ಚಾಲನೆಯೇ ಜೀವ ರಕ್ಷೆ ಎಂಬ ಧ್ಯೇಯ ವಾಕ್ಯದೊಂದಿಗೆ ನಗರದ ಜ್ಯೋತಿ ವೃತ್ತದಿಂದ ಆರ್ ಟಿ ಓ ಕಛೇರಿ ವರೆಗೆ ಜಾಥಾ ನಡೆಯಿತು. ಜಿಲ್ಲಾ ಸ್ಕೌಟ್, ಗೈಡ್ಸ್,ಸೇರಿದಂತೆ ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳು ಬೀದಿ ನಾಟಕವನ್ನು ಪ್ರದರ್ಶಿಸಿದರು.

'ಗ್ರಾಹಕರ ಜಾಗೃತಿ ಪ್ರಸಕ್ತ ಅಗತ್ಯ'

ಮಂಗಳೂರು,ಜ.16:ಗ್ರಾಹಕ ರಕ್ಷಣೆ ಕಾಯಿದೆ ಕುರಿತು ಗ್ರಾಹಕರಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ರಾಮಣ್ಣ ಅವರು ಹೇಳಿದರು. ದ.ಕ.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಜಿಲ್ಲಾ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತಿತರ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದ ಗ್ರಾಹಕ ಜಾಗೃತಿ ಮತ್ತು ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಇತರೆಡೆಗಳಿಗೆ ಹೋಲಿಸಿದರೆ ದ.ಕ.ಜಿಲ್ಲೆಯಲ್ಲಿ ಪ್ರಕರಣ ದಾಖಲು ಕಡಿಮೆಯಾಗುತ್ತಿದ್ದು,1992ರಿಂದ ಡಿಸೆಂಬರ್ 2009ರವರೆಗೆ 9500 ಪ್ರಕರಣಗಳು ದಾಖಲಾಗಿದ್ದು, 9351 ಪ್ರಕರಣಗಳು ಇತ್ಯರ್ಥಗೊಂಡಿವೆ. 149 ದೂರುಗಳು ಮಾತ್ರ ಬಾಕಿ ಉಳಿದಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು ಮಾತನಾಡಿ, ಗ್ರಾಹಕ ಜಾಗೃತಿ ಅಗತ್ಯವನ್ನು ಪ್ರತಿಪಾದಿಸಿದರು.ವಂಚನೆಗೊಳಗಾದ ಗ್ರಾಹಕರು ದೂರು ನೀಡಿ ನ್ಯಾಯ ಪಡೆಯುವಂತೆ ಸಲಹೆ ಮಾಡಿದರು.ಜಿಲ್ಲಾ ಸತ್ರ ನ್ಯಾಯಾಧೀಶ ಎಚ್.ಆರ್.ದೇಶಪಾಂಡೆ,ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್ ಮುಖ್ಯ ಅತಿಥಿಗಳಾಗಿದ್ದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Friday, January 15, 2010

ಕರಾವಳಿಯಲ್ಲಿ ಶೇಕಡ 80 ಸೂರ್ಯ ಗ್ರ ಹಣ



ಮಂಗಳೂರು ಜ.15. 2010 ರ ಮೊದಲ ಸೂರ್ಯ ಗ್ರಹಣ ಕರಾವಳಿ ನಗರ ಮಂಗ ಳೂರಿನಲ್ಲೂ ಗೋಚರಿಸಿದೆ. ಈ ಭಾಗದಲ್ಲಿ ಸುಮಾರು ಶೇಕಡ 80 ರಷ್ಟು ಪ್ರಮಾ ಣದಲ್ಲಿ ಗ್ರಹಣ ಗೋಚ ರಿಸಿತು. ಬೆಳಗ್ಗೆ ಸುಮಾರು 11 ಗಂಟೆ 07 ನಿಮಿಷಕ್ಕೆ ಆರಂಭ ವಾದ ಗ್ರಹಣ ಮದ್ಯಾಹ್ನ 3 ಗಂಟೆ 6 ನಿಮಿಷಕ್ಕೆ ಮುಕ್ತಾಯ ವಾಯಿತು. ಪೂರ್ಣ ಪ್ರಮಾಣದ ಗ್ರಹಣ ಈ ಭಾಗದಲ್ಲಿ ಕಂಡು ಬಂದಿಲ್ಲ.ಬರಿ ಕಣ್ಣಿನಿಂದ ವೀಕ್ಷಣೆ ಮಾಡಿದರೆ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಈ ಕಂಕಣ ಗ್ರಹಣವನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ವೀಕ್ಷಿಸಲು ಅನುಕೂಲವಾಗುವಂತೆ ಮಂಗಳೂರಿನ ಸಂತ ಆಗ್ನೆಸ್ ಕಾಲೇಜು ಸೇರಿದಂತೆ ಆನೇಕ ಕಡೆಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿತ್ತು.ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಟೆಲಿಸ್ಕೋಪ್,ಹಾಗೂ ವಿಶೇಷವಾಗಿ ವಿನ್ಯಾಸ ಮಾಡಿದ ಕನ್ನಡಕಗಳ ಮೂಲಕ ಗ್ರಹಣದ ವಿಕ್ಷಣೆ ಮಾಡಿದರು.

Wednesday, January 13, 2010

ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ

ಮಂಗಳೂರು,ಜ.13:ಪ್ರಾಕೃತಿಕ ವಿಕೋಪದ ಜೊತೆಗೆ ಮನುಷ್ಯನ ತಪ್ಪುಗಳಿಂದಾಗುವ ವಿಪತ್ತು ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ಹೇಳಿದರು.

ಅವರಿಂದು ಹೋಮ್ ಗಾರ್ಡ್ಸ, ಸಿವಿಲ್ ಡಿಫೆನ್ಸ್, ಫೈರ್ ಅಂಡ್ ಎಮರ್ಜೆನ್ಸಿ ಸರ್ವಿಸ್, ನಿಟ್ಟೆ ಯುನಿವರ್ಸಿಟಿ,ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈಯನ್ಸ್ ನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಪತ್ತು ಕಡಿತ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಪ್ರಾಕೃತಿಕ ವಿಕೋಪ ಆಕಸ್ಮಿಕ ಆದರೆ ಮಾನವನ ದುರಾಸೆಯಿಂದ ಹಲವು ಬಾರಿ ಈ ವಿಪತ್ತುಗಳ ಪರಿಣಾಮ ಭೀಕರವಾಗಿರುತ್ತದೆ.ಯಾವುದೇ ಸಂದರ್ಭದಲ್ಲಿ ಇಂತಹ ಆಪತ್ತುಗಳ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗರೂಕತೆಯ ಬಗ್ಗೆ ಜಿಲ್ಲಾಧಿಕಾರಿಗಳು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ.ಶಾಂತರಾಮ ಶೆಟ್ಟಿಯವರು ಮಾತನಾಡಿದರು.

ಸಮಾ ರಂಭದಲ್ಲಿ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ನಿದರ್ಶ್ ಡಿ.ಹೆಗ್ಡೆ ಉಪಸ್ಥಿತರಿದ್ದರು. ಡಾ.ಬಿ.ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ಅಗ್ನಿಶಾಮಕಪಡೆಯ ಅಧಿಕಾರಿ ಬಸಪ್ಪ ನೇತೃತ್ವದಲ್ಲಿ ಅಣಕು ಪ್ರದರ್ಶನವನ್ನು ಏರ್ಪಡಿಸಲಾಯಿತು.

21ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

ಮಂಗಳೂರು,ಜ.13:ನಗರದ ವಾಹನದಟ್ಟಣೆ ಮತ್ತು ಅಪಘಾತಗಳನ್ನು ಕಡಿಮೆ ಮಾಡಲು,ರಸ್ತೆ ನಿಯಮ ಪಾಲನೆಗೆ ಆದ್ಯತೆ ನೀಡಲು ಜಿಲ್ಲಾಡಳಿತ ಸಮಗ್ರ ಅಧ್ಯಯನ ನಡೆಸಿ ಸ್ಟೇಟ್ ಬ್ಯಾಂಕ್ ನ ಖಾಸಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಮತ್ತು ಜಿಪಿಎಸ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದ್ದು,ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದರು.

ಸುರಕ್ಷಿತ ಚಾಲನೆ ಜೀವನ ರಕ್ಷೆ ಎಂಬ ಧ್ಯೇಯದೊಂದಿಗೆ ಜಿಲ್ಲಾ ಪೊಲೀಸ್ ಅತಿಥಿಗೃಹದಲ್ಲಿ 21ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ, ಜಿಲ್ಲಾಧಿಕಾರಿ ಇಂತಹ ಆಚರಣೆಗಳಿಂದ ಆಗುವ ಅನುಭವಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು,ಕಾರ್ಯಕ್ರಮದ ಫೀಡ್ ಬ್ಯಾಕ್ ಪಡೆಯಲು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾಎ. ಸುಬ್ರಹ್ಮಣ್ಯೇಶ್ವರ ರಾವ್ ಮಾತನಾಡಿ, ಅಪಘಾತದ ಆಘಾತಗಳ ತೀವ್ರತೆಯ ಬಗ್ಗೆ ಹೇಳಿದರು. ಟ್ರಾಫಿಕ್ ವಿಭಾಗಕ್ಕೆ 50 ಲಕ್ಷ ರೂ.ಗಳು ಬಿಡುಗಡೆಯಾಗಿದ್ದು,ಇದರಿಂದ ಟ್ರಾಫಿಕ್ ಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸುವುದಾಗಿ ಹೇಳಿದರಲ್ಲದೆ,ರಸ್ತೆ ಸುರಕ್ಷೆ,ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರು 2424204 ನ್ನು ಸಂಪರ್ಕಿಸಿ ತಮ್ಮ ಸಲಹೆಗಳನ್ನು ದಾಖಲಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ವಲಯ ಐಜಿಪಿ ಗೋಪಾಲ್ ಬಿ.ಹೊಸೂರ್ ಅವರು,ಹೆಚ್ಚಿನ ಅಪಘಾತಗಳು ಚಾಲಕರ ನಿರ್ಲಕ್ಷ್ಯದಿಂದಾಗುತ್ತದೆ ಎಂದರು.ಟ್ರಾಫಿಕ್ ಕಾನ್ಸಟೇಬಲ್ ಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು,ನಮ್ಮಲ್ಲಿ ನಾಗರೀಕ ಪ್ರಜ್ಞೆ ಜಾಗೃತವಾಗಿರಬೇಕು ಎಂದರು.ಆರ್ ಟಿ ಒ ಪುರುಷೋತ್ತಮ ಜೆ ಉಪಸ್ಥಿತರಿದ್ದರು. ಮಂಜುನಾಥ್ ಶೆಟ್ಟಿ ವಂದಿಸಿದರು.

Monday, January 11, 2010

ಮುಚ್ಚೂರು: 2.78 ಕೋಟಿ ರೂ. ಗಳ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಮಂಗಳೂರು,ಜ.11:ಮುಂದಿನ 3ವರುಷಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದ್ದು,ಜನರು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ಅವರು ಹೇಳಿದರು.

ಅವರು ಇಂದು ಮುಚ್ಚೂರು ಗ್ರಾಮದ ಗುಂಡಾವು ಎಂಬಲ್ಲಿ 43.81 ಲಕ್ಷ ರೂ.ಗಳ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ನಂದಿನಿ ನದಿಗೆ ಕಟ್ಟಲಾಗಿರುವ 2.22ಮಿಲಿಯನ್ ಘನ ಅಡಿ ಸಂಗ್ರಹಣಾ ಸಾಮರ್ಥ್ಯದ 22.50 ಮೀಟರ್ ಎತ್ತರದ,10 ಕಿಂಡಿಗಳನ್ನು ಹೊಂದಿರುವ 116ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿರುವ ಅಣೆಕಟ್ಟಿನ ಪ್ರಯೋಜನ ಕೃಷಿಕರಿಗಾಗಲೀ ಎಂದು ಸಚಿವರು ಹೇಳಿದರು.
ಮುಚ್ಚೂರು ಕೀಳೆಯಲ್ಲಿ 8 ಲಕ್ಷ ರೂ.ಗಳ ಬೋರ್ ವೆಲ್ ಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಕೊಂಪ ದವಿನಲ್ಲಿ ಪರಿಶಿಷ್ಟ ವರ್ಗ ದವರಿಗೆ ನೀರಾವರಿ ಗಾಗಿ 15ಲಕ್ಷ ರೂ. ಮೀಸಲಿರಿಸಿದೆ. ನಬಾರ್ಡ್,ಸಂಸದರ ನಿಧಿ,ಮುಖ್ಯಮಂತ್ರಿ ಗ್ರಾಮಸಡಕ್ ಯೋಜನೆಯಡಿ ನೆರವು ದೊರೆತಿದ್ದು,ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯ ಕೊರಗರ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ ಯಾಗಿದ್ದು, ಕೊರಗ ಸಮುದಾಯದ ಅರ್ಹ ಫಲಾನುಭವಿಗಳು ಯೋಜನೆಯನ್ನು ಸದ್ಬಳಕೆ ಮಾಡಲು ಈ ಸಂದರ್ಭದಲ್ಲಿ ಸಚಿವರು ಸಲಹೆ ನೀಡಿದರು.ಅಕ್ರಮ ಮರಳು ಸಾಗಾಣಿಕೆ ತಡೆಗೆ ವಿಶೇಷ ತಂಡವೊಂದನ್ನು ರಚಿಸಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕಾಮಗಾರಿ ಶಂಕುಸ್ಥಾಪನೆ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಜಿ.ಪಂ.ಸದಸ್ಯರಾದ ಕೃಷ್ಣ ಅಮೀನ್, ಗ್ರಾಮಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಉಪಸ್ಥಿತರಿದ್ದರು.

Sunday, January 10, 2010

ಜಿಲ್ಲಾ ಉಸ್ತುವಾರಿ ಸಚಿವರಿಂದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ

ªÀÄAUÀ¼ÀÆgÀÄ, d.10(PÀ£ÁðlPÀ ªÁvÉð)- f¯ÉèAiÀÄ 1,55,516(89.52%)ªÀÄPÀ̽UÉ EAzÀÄ ¥ÉÆðAiÉÆà ®¹PÉ ºÁPÀ¯Á¬ÄvÀÄ. £ÀUÀgÀzÀ ªÉ£ÁèPï D¸ÀàvÉæAiÀÄ°è f¯ÁèG¸ÀÄÛªÁj ¸ÀaªÀgÁzÀ ²æ PÀȵÀÚ eÉ.¥Á¯ÉªÀiÁgï CªÀgÀÄ ¥ÉÆðAiÉÆà ®¹PÉ ºÁPÀĪÀ ªÀÄÆ®PÀ PÁgÀåPÀæªÀĪÀ£ÀÄß GzÁÏn¹zÀgÀÄ.±Á¸ÀPÀ ²æà AiÉÆÃVÃ±ï ¨sÀmï,¹EM ¦.²ªÀ±ÀAPÀgï CªÀgÀÄ G¥À¹ÜvÀjzÀÝgÀÄ.

ªÀÄAUÀ¼ÀÆj£À°è 66,833(84.91%),¥ÀÄvÀÆÛj£À°è 23,462(94.02%), ¨É¼ÀÛAUÀrAiÀÄ°è 22,314(95.90%),§AmÁé¼ÀzÀ°è 31,849 (92.66%),¸ÀļÀå 11,058(89.06%) ªÀÄPÀ̽UÉ ¥ÉÆðAiÉÆà ºÀ¤ ºÁPÀ¯Á¬ÄvÀÄ JAzÀÄ Dgï ¹JZï qÁPÀÖgï gÀÄQät CªÀgÀÄ w½¹zÀgÀÄ. ªÀÄAUÀ¼ÀÆgÀÄ ªÀĺÁ£ÀUÀgÀ ¥Á°PÉ ªÁå¦ÛAiÀÄ°è 79.17% PÀrªÉÄ ¥ÀæªÀiÁtzÀ°è ®¹PÉ ºÁPÀ¯ÁVzÉ.

Saturday, January 9, 2010

ಪ್ರಚಾರಾಂದೋಲನಗಳಿಂದ ಗ್ರಾಮೀಣರಿಗೆ ಮಾಹಿತಿ: ಕೃಷ್ಣ ಅಮೀನ್

ªÀÄAUÀ¼ÀÆgÀÄ,d.9: (PÀ£ÁðlPÀ ªÁvÉð)- ¸ÀgÀPÁgÀzÀ AiÉÆÃd£ÉUÀ¼ÀÄ CºÀð ¥sÀ¯Á£ÀĨsÀ«UÀ½UÀ vÀ®Ä¥ÀĪÀAvÁUÀ¨ÉÃPÁzÀgÉ UÁæ«ÄÃtjUÉ ªÀiÁ»w ¤ÃqÀĪÀ PÁAiÀÄðPÀæªÀÄUÀ¼ÁUÀ¨ÉÃPÀÄ; ªÀiÁ»w ºÀQÌ£ÀAvÀºÀ, GzÉÆåÃUÀ SÁwæAiÀÄAvÀºÀ PÁ¬ÄzÉ §UÉÎ ºÉaÑ£À ¥ÀæZÁgÀ ¹UÀ° JAzÀÄ f¯Áè ¥ÀAZÁAiÀÄvï ¸ÀzÀ¸ÀågÁzÀ ²æà PÀȵÀÚ C«Äãï CªÀgÀÄ ºÉýzÀgÀÄ. CªÀgÀÄ EAzÀÄ JqÀ¥ÀzÀ«£À gÁªÀĪÀÄA¢gÀzÀ°è ªÁvÁð E¯ÁSÉ DAiÉÆÃf¹zÀÝ ªÀiÁ»w ºÀPÀÄÌ PÁ¬ÄzÉ ¥ÀæZÁgÁAzÉÆî£À ¸ÀªÀiÁgÉÆÃ¥À ¸ÀªÀiÁgÀA¨sÀ GzÁÏn¹ ªÀiÁvÀ£ÁqÀÄwÛzÀÝgÀÄ. ¸ÀªÀiÁgÀA¨sÀzÀ°è ºÉtÄÚªÀÄPÀ̼ÀÄ ºÉaÑ£À ¸ÀASÉåAiÀÄ°èzÀÄÝ, ¹Ûçà ±ÀQÛAiÀÄ ªÀÄÆ®PÀªÉà GvÀÛªÀÄ, C©üªÀÈ¢ÞUÉ ¥ÀÆgÀPÀªÁzÀ ºÉÆÃgÁlUÀ¼ÀÄ gÀÆ¥ÀÄUÉƼÀî° JAzÀÄ ºÁgÉʹzÀgÀÄ.



¥ÀæwAiÉÆAzÀÄ AiÉÆÃd£É ®¨sÀåªÁUÀ®Ä ºÉÆÃgÁl CUÀvÀåªÁVgÀĪÀ EA¢£À ¢£ÀUÀ¼À°è, d£ÀgÀ fêÀ£À ªÀÄlÖ GvÀÛªÀÄ¥Àr¸ÀĪÀ PÁ¬ÄzÉUÀ¼À ¸ÀzÀâ¼ÀPÉ ªÀiÁrPÉƽî JAzÀÄ CªÀgÀÄ £ÉgÉzÀªÀjUÉ ¸À®ºÉ ªÀiÁrzÀgÀÄ.

¸ÀªÀiÁgÀA¨sÀzÀ°è ¸ÀA¥À£ÀÆä® ªÀåQÛUÀ¼ÁV DUÀ«Ä¹zÀÝ d£À²PÀët læ¸ïÖ£À ¤zÉÃð±ÀPÀgÁzÀ ²æà ²Ã£À ±ÉnÖ CªÀgÀÄ ¸ÀA¥À£ÀÆä® ªÀåQÛAiÀiÁV ªÀiÁvÀ£ÁrzÀgÀÄ. ¸À©üPÀgÀ ¨ÉÃrPÉAiÀÄAvÉ GzÉÆåÃUÀSÁwæ AiÉÆÃd£ÉAiÀÄ §UÉÎ ºÉaÑ£À ªÀiÁ»w ¤ÃrzÀ CªÀgÀÄ, GzÉÆåÃUÀ aÃn ¥ÀqÉAiÀÄĪÀ «zsÁ£À «ªÀj¹zÀgÀÄ. ¸ÁéªÀ®A© §zÀÄQUÉ ªÀÄÄ£ÀÄßrAiÀiÁVgÀĪÀ GzÉÆåÃUÀ SÁwæ AiÉÆÃd£ÉAiÀÄ°è ªÀĺÁvÀä UÁA¢üAiÀĪÀgÀ DvÀä CqÀVzÀÄÝ, ¸ÁéªÀ®A© ¨sÁgÀvÀ ¤ªÀiÁðtPÉÌ F PÁ¬ÄzÉ ªÀgÀªÁUÀ°zÉ JAzÀÄ «ªÀj¹zÀgÀÄ.


²æêÀÄw PÀ¯Áåt G¥À¹ÜvÀjzÀÝgÀÄ. ªÁvÁð¢üPÁj gÉÆût ¸ÁéUÀw¹zÀgÀÄ. UÀuÉñÀ £ÁªÀqÀgÀÄ ªÀA¢¹zÀgÀÄ. ®Æ¬Ä¸ï PÁAiÀÄðPÀæªÀÄ ¤gÀƦ¹zÀgÀÄ. ¸À¨sÁ PÁAiÀÄðPÀæªÀÄzÀ §½PÀ ¸ÀAªÁzÀ, §½PÉ ªÀiÁ»w ºÀQÌ£À §UÉÎ ZÀ®£ÀavÀæ ¥ÀæzÀ±Àð£À K¥Àðr¸À¯Á¬ÄvÀÄ.




Friday, January 8, 2010

ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆಗೆ ವಿಶೇಷ ನಿಗಾ: ಐಜಿಪಿ ಗೋಪಾಲ್ ಹೊಸೂರು

ಮಂಗಳೂರು ಜ.08: 315 ಕಿ.ಮೀ ಕರಾವಳಿ ಪ್ರದೇಶವಿರುವ 4 ಜಿಲ್ಲೆಗಳ 26 ತಾಲೂಕುಗಳನ್ನು ಒಳಗೊಂಡಿರುವ ಪಶ್ಚಿಮ ವಲಯದ ಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ವಿಶೇಷ ಆದ್ಯತೆಯನ್ನು ಪೋಲಿಸ್ ಇಲಾಖೆ ನೀಡುತ್ತಿದೆ. ಕಳೆದ ವರ್ಷ ಈ ಭಾಗದಲ್ಲಿ ಕಾನೂನು ಪರಿಪಾಲನೆಗಾಗಿ ಪೋಲಿಸರು ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಪಶ್ಚಿಮ ವಲಯ ಪೋಲಿಸ್ ಮಹಾ ನಿರೀಕ್ಷಕ ಗೋಪಾಲ್ ಹೊಸೂರು ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾದ್ಯಮಾ ಗೋಷ್ಟಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದ ಐಜಿಪಿ ಹೊಸೂರು ಅವರು ತಮ್ಮ ವ್ಯಾಪ್ತಿಗೆ ಒಳಪಡುವ ಪಶ್ಚಿಮ ವಲಯ ಪ್ರದೇಶ 25,837 ಚದರ ಕೀ.ಮೀ ವಿಸ್ತಾರ ಹೊಂದಿದ್ದು 55 ಲಕ್ಷ ಜನಸಂಖ್ಯೆ,14,785 ಚದರ ಅಡಿ ಅರಣ್ಯ ಪ್ರದೇಶ ಹೊಂದಿದೆ. ಕರ್ನಾಟಕದ 315 ಕೀ.ಮೀಟರ್ ಹಾಗೂ ನೆರೆಯ ಗಡಿ ರಾಜ್ಯಗಳಾದ ಕೇರಳ 108 ಮತ್ತು ಗೋವಾದ 20 ಕೀ.ಮೀ ಗಡಿ ಪ್ರದೇಶವು ಸೇರಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಪೋಲಿಸರ ಜವಾಬ್ದಾರಿ ಅತೀ ಹೆಚ್ಚಾಗಿದೆ. 3,590 ವಿವಿಧ ಧಾರ್ಮಿಕ ಕೇಂದ್ರಗಳು, 100 ವಿಶೇಷ ಸಂರಕ್ಷಿತ ಪ್ರದೇಶಗಳ ರಕ್ಷಣೆಯ ಜವಾಬ್ದಾರಿ ಕೂಡ ಇಲ್ಲಿನ ಪೋಲಿಸರ ಮೇಲಿದ್ದು ಒಟ್ಟಾರೆಯಾಗಿ ಇವೆಲ್ಲವನ್ನೂ ಕಳೆದ 2009- 2010 ರಲ್ಲಿ ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದರು.

ಭೂಗತ ಪಾತಕಿಗಳ ಬಂಧನಕ್ಕೆ ಕ್ರಮ: ದೇಶದ ಹೊರಗಿದ್ದು, ಕರಾವಳಿ ಭಾಗದಲ್ಲಿ ಭೂಗತ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಅಂಶಾತಿಯನ್ನು ಉಂಟುಮಾಡುತ್ತಿರುವ ಭೂಗತ ಪಾತಕಿಗಳನ್ನು ಮಟ್ಟಹಾಕಲು ಪೋಲಿಸ್ ಇಲಾಖೆ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಭೂಗತ ಪಾತಕಿಗಳಾದ ರವಿ ಪೂಜಾರಿ, ಬನ್ನಂಜೆ ರಾಜಾ,ಕೊರಗ ವಿಶ್ವನಾಥ ಶೆಟ್ಟಿ,ಮತ್ತು ಮಾಡೂರು ಯೂಸುಫ್ ಅವರುಗಳ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.ಕರಾವಳಿ ಭಾಗದಲ್ಲಿ 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾದ ಮತ್ತು ಈಗಾಗಲೇ ದುಬೈ ಪೋಲಿಸರಿಂದ ಬಂಧನಕ್ಕೆ ಒಳಪಟ್ಟ ಬನ್ನಂಜೆ ರಾಜಾ ಅವನ ಹಸ್ತಾಂತರಕ್ಕೆ ಅಲ್ಲಿನ ಅಧಿಕಾರಿಗಳೊಂದಿಗೆ ಯಶಸ್ವಿ ಮಾತುಕತೆ ನಡೆದಿದ್ದು, ಶೀಘ್ರದಲೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಕರಾವಳಿಯ ಜನರ ಸಾಮಾಜಿಕ ನೆಮ್ಮದಿ ಹಾಳು ಮಾಡುತ್ತಿದ್ದ 1827 ಜನರ ಮೇಲೆ ರೌಡಿ ಶೀಟ್ ಹಾಕಲಾಗಿದೆ. 1233 ಜನ ಕಮ್ಯುನಲ್ ಗೂಂಡಾಗಳನ್ನು ಗುರ್ತಿಸಲಾಗಿದ್ದು, ಪೋಲಿಸ್ ಇಲಾಖೆ ಇವರುಗಳ ಮೇಲೆ ಕ್ರಮಕ್ಕೆ ಮುಂದಾಗಿದೆ, ಅಲ್ಲದೇ ಈ ಭಾಗದಲ್ಲಿ ಮತೀಯ ಸೌಹಾರ್ದತೆಯನ್ನು ಕಾಯ್ದುಕೊಳ್ಳುವಲ್ಲಿ ಆನೇಕ ಕ್ರಮಗಳನ್ನು ಜಾರಿಗೆ ತಂದಿದೆ. ಯುವ ಸಮಾಜದಲ್ಲಿ ಕಂಟಕವಾಗಿದ್ದ ಮಾದಕ ದ್ರವ್ಯಗಳ ತಡೆಗೂ ಇಲಾಖೆ ವಿಶೇಷ ಗಮನ ನೀಡಿದ್ದು 3/4 ಟನ್ ಗಾಂಜಾವನ್ನು ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
ನಕ್ಸಲ್ ಸಮಸ್ಯೆಗೆ ಪರಿಹಾರ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೋಲಿಸರು ನಡೆಸಿದ ಕಾರ್ಯಾಚರಣೆಯಿಂದ ನಕ್ಸಲರ ಕಾರ್ಯ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದ ಐಜಿಪಿ ಅವರು ನಕ್ಸಲಿಸಂ ನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿ ಮೂಡಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಎಡಿಷನಲ್ ಎಸ್ಪಿ ಆರ್. ರಮೇಶ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಹೋಟೆಲ್ ತ್ಯಾಜ್ಯ ರಸ್ತೆಗೆ ಹಾಕಿದರೆ ಪರವಾನಿಗೆ ರದ್ದು:ಜಿಲ್ಲಾಧಿಕಾರಿ ಎಚ್ಚರಿಕೆ

ಮಂಗಳೂರು,ಜ.8:ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಹೋಟೆಲ್ ಗೋಲ್ಡ್ ಫಿಂಚ್ ಮತ್ತು ಮಹಾರಾಜ ಹೋಟೆಲ್ ನವರು ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲೇ ಎಸೆಯುತ್ತಿದ್ದು, ಮನಾಪ ಸಂಬಂಧಪಟ್ಟವರಿಗೆ ಈಗಾಗಲೇ ನೋಟೀಸು ನೀಡಿದ್ದರೂ ತ್ಯಾಜ್ಯ ಎಸೆಯುವ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿಲ್ಲ ಎಂಬುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು ಇದೇ ರೀತಿ ಕಾನೂನು ಉಲ್ಲಂಘಿಸಿದರೆ ಹೋಟೇಲುಗಳ ಪರವಾನಿಗೆಯನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ದ.ಕ.ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ಎಚ್ಚರಿಕೆ ನೀಡಿದ್ದಾರೆ.
ಬಂಟ್ವಾಳ ನಗರ ವ್ಯಾಪ್ತಿಯ ಬಿ.ಸಿ.ರೋಡಿನಲ್ಲಿರುವ ಹೋಟೆಲ್ ಶ್ರೀನಿವಾಸ ಮತ್ತು ರಂಗೋಲಿಯವರು ರಸ್ತೆ ಬದಿಗಳಲ್ಲಿ ಹೋಟೇಲಿನ ತ್ಯಾಜ್ಯವನ್ನು ಹಾಕುತ್ತಿದ್ದು, ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದಾರೆ;ಈ ಬಗ್ಗೆ ಬಂಟ್ವಾಳ ಮುಖ್ಯಾಧಿಕಾರಿಗೆ ನಿರ್ದೇಶನ ನೀಡಲಾಗಿದ್ದು,ಇದೇ ಕ್ರಮ ಮುಂದುವರಿದರೆ ಹೋಟೇಲು ಮತ್ತು ಮುಖ್ಯಾಧಿಕಾರಿಯವರ ಮೇಲೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಬೃಹತ್ ಹೋಟೆಲ್ ಗಳು, ಸಂಸ್ಥೆಗಳು ತ್ಯಾಜ್ಯ ವಸ್ತುಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ತಾವೇ ಡಂಪಿಂಗ್ ಯಾರ್ಡ್ ಗಳಿಗೆ ರವಾನಿಸಲು ಸೂಕ್ತ ಕ್ರಮಕೈಗೊಳ್ಳಲು ಹಾಗೂ ಶುಚಿತ್ವ ಕಾಪಾಡಲು ಸೂಚನೆ ನೀಡಲಾಗಿದೆ.
ಮಂಗಳೂರು ನಗರದಾದ್ಯಂತ ಜೀವವಿಮಾ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ವಿಮಾ ಏಜೆಂಟರು ತಮ್ಮ ಸಂಸ್ಥೆಯ ಪ್ರಚಾರಕ್ಕೆ ಭಿತ್ತಿ ಪತ್ರಗಳನ್ನು ಹಾಕಿದ್ದು,ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.ಸಾರ್ವಜನಿಕ ಗೋಡೆಗಳಲ್ಲಿ ಬೇಕಾಬಿಟ್ಟಿಯಾಗಿ ಅಂಟಿಸುವುದು ಮತ್ತು ಕೈಬರಹದಲ್ಲಿ ಬರೆಯುವುದನ್ನು ಕಂಡು ಬಂದರೆ ಅಂತಹವರ ವಿರುದ್ದ ಸಾರ್ವಜನಿಕ ಸೊತ್ತು ವಿರೂಪಗೊಳಿಸುವುದನ್ನು ತಡೆಗಟ್ಟುವ ಕಾಯ್ದೆಯ ಪ್ರಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಯಾವುದೇ ಭಿತ್ತಿ ಪತ್ರಗಳನ್ನು ಅಂಟಿಸಬೇಕಾದಲ್ಲಿ ಸಂಬಂಧಪಟ್ಟ ಪಾಲಿಕೆ ಹಾಗೂ ಪುರಸಭೆಗಳಿಂದ ಅನುಮತಿ ಪಡೆಯಲು ಸೂಚಿಸಲಾಗಿದ್ದು, ಜಾಹೀರಾತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಲಾಗಿದೆ. ನಗರದ ಶುಚಿತ್ವ ಹಾಗೂ ಸುಂದರೀಕರಣದ ಬಗ್ಗೆ ಎಲ್ಲ ನಾಗರೀಕರ ನೆರವನ್ನು ಜಿಲ್ಲಾಧಿಕಾರಿಗಳು ಕೋರಿದ್ದಾರೆ.