ಮಂಗಳೂರು, ಮೇ 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ರಾಕ್ ಪಾಸ್ಫೇಟ್ ಮತ್ತು ಎಂಒಪಿ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ರೈತರು ಸಂಯುಕ್ತ ಗೊಬ್ಬರಗಳ ಮೇಲೆ ಅವಲಂಬಿತರಾಗದೆ ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಯೂರಿಯಾ, ಡಿಎಪಿ, ರಾಕ್ ಪಾಸ್ಫೇಟ್ ಮತ್ತು ಎಂ ಓ ಪಿ ರಸಗೊಬ್ಬರಗಳಿಂದ ಸ್ವತ: ನಾನಾ ತರಹದ ಮಿಶ್ರಣಗಳನ್ನು ತಯಾರಿಸಬಹುದು.
ಈ ಬಗ್ಗೆ ಮಾಹಿತಿಯನ್ನು ರೈತರು ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆಯಬಹುದಾಗಿದ್ದು, ಮಿಶ್ರಣ ಗೊಬ್ಬರದಿಂದ ಲಭ್ಯವಾಗುವ ಪೋಷಕಾಂಶಗಳ ಪ್ರಮಾಣದ ಬಗ್ಗೆಯೂ ಇಲಾಖೆಯಲ್ಲಿ ಹಸ್ತಪ್ರತಿಗಳು ಲಭ್ಯವಿದ್ದು, ರೈತರು ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.