Saturday, May 16, 2009

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ

ಮಂಗಳೂರು,ಮೇ 16: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಳಿದಿದ್ದ 11 ಅಭ್ಯರ್ಥಿಗಳಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು 40,420 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.
ಇಂದು ನಗರದ ಕೆನರ ಕಾಲೇಜಿನಲ್ಲಿ ಅತ್ಯಂತ ಸುವ್ಯವಸ್ಥಿತವಾಗಿ ನಡೆದ ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಪ್ರತೀ ಬೂತ್ ವೈಸ್ ಮತ ಎಣಿಕೆ ಎಲಕ್ಟ್ರಾನಿಕೆ ಪರದೆಯ ಮೇಲೆ ಮೂಡಿಬಂತು. ಒಟ್ಟು 16 ಸುತ್ತುಗಳ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿ ಅಭ್ಯರ್ಥಿ 499385ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಜನಾರ್ಧನ ಪೂಜಾರಿ ಅವರು 458965 ಮತಗಳನ್ನು ಪಡೆದರು. ಭಾರತೀಯ ಕಮ್ಯುನಿಸ್ಟ್ ಪಕ್ಷದ ಬಿ. ಮಾಧವ ಅವರು 18328ಮತಗಳನ್ನು ಪಡೆದರು. ಬಹುಜನ ಸಮಾಜ ಪಕ್ಷದ ಅಲೆಕ್ಕಾಡಿ ಗಿರೀಶ್ ರೈ ಅವರಿಗೆ 10196, ಪಕ್ಷೇತರ ಕುಮಾರ ಕುಂಟಿಕಾನ್ ಅವರಿಗೆ 8932,ಕೆ. ಉರಿಮಜಲು ರಾಮಭಟ್ ಅವರಿಗೆ 5960, ಡಾ. ಯು ಪಿ ಶಿವಾನಂದ ಅವರು 4825,ವಾಸುದೇವ ಗೌಡ ಎಂ.ಪಿ ಅವರಿಗೆ 3180, ವಿಚಾರವಾದಿ ಆನಂದಗಟ್ಟಿ ಅವರಿಗೆ 2373, ಮಹಮದ್ ಸಾಲಿ ಅವರಿಗೆ 1977, ಡಾ. ತಿರುಮಲರಾಯ ಹಳೆಮನೆ ಅವರಿಗೆ 1801ಮತಗಳು ದೊರೆತಿವೆ.ಒಟ್ಟು 1015922 ಮತಗಳು ಚಲಾವಣೆಯಾಗಿದ್ದು, 635 ಅಂಚೆ ಮತಪತ್ರಗಳಲ್ಲಿ 211 ತಿರಸ್ಕೃತಗೊಂಡಿದೆ.ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಅವರು ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.