ಮಂಗಳೂರು, ಮೇ. 1: ಶಾಂತಿಯುತವಾಗಿ ಯಾವುದೇ ತೊಡಕುಗಳಿಲ್ಲದೆ ಗುರುವಾರ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಯಶಸ್ವಿಯಾಗಿ ಮುಗಿದಿದ್ದು, ಮತಯಂತ್ರಗಳು ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ಬಿಗಿ ಭಧ್ರತೆಯಲ್ಲಿ ಇರಿಸಲಾಗಿದೆ.
ಭದ್ರತೆಗಾಗಿ ಸಂಪೂರ್ಣ ಕಾಲೇಜನ್ನು ಸೀಲ್ ಮಾಡಲಾಗಿದ್ದು, ಡಿವೈಎಸ್ ಪಿ ಧರ್ಮಯ್ಯ ಆವರ ಉಸ್ತುವಾರಿಯಲ್ಲಿ ಬಂದೋಬಸ್ತ್ ಏರ್ಪಡಿಸಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಗ್ನಿಶಾಮಕಗಳು ಸ್ಥಳದಲ್ಲಿದೆ. ಶಿಕ್ಷಣಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಬೇರೆ ಕಡೆ ಸ್ಥಳಾಂತರಿಸಿದ್ದು, ಸ್ಥಳಕ್ಕೆ ವಿದ್ಯಾರ್ಥಿಗಳಿಗೂ ಪ್ರವೇಶ ನಿಷೇಧಿಸಲಾಗಿದೆ.