ಮಂಗಳೂರು ಜುಲೈ 8 :- ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ಇರುವ ಆಸ್ಪತ್ರೆಗಳನ್ನೇ ಸುಸ್ಸಜ್ಜಿತಗೊಳಿಸಿ ಜನರಲ್ಲಿ ರೋಗ ರುಜಿನಗಳ ಬಗ್ಗೆ ಜಾಗೃತಿ ಹಾಗೂ ರೋಗ ಮುಕ್ತ ಪರಿಸರ ನಿರ್ಮಾಣ ಆರೋಗ್ಯ ಇಲಾಖೆಯ ಆದ್ಯತೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಹೇಳಿದರು.
ಅವರಿಂದು ಕುಡುಪುವಿನಲ್ಲಿ ಒಂದು ಕೋಟಿ ಎರಡು ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಟ್ಟಡಗಳನ್ನು ನಿರ್ಮಿಸಿ, ಅಗತ್ಯ ಶುಶ್ರೂಷಾ ಉಪಕರಣಗಳಿಲ್ಲದ, ನಿರ್ವಹಣೆಯಿಲ್ಲದ ಆಸ್ಪತ್ರೆಗಳ ನಿರ್ಮಾಣ ತನ್ನ ಆದ್ಯತೆಯಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಜನಸಾಮಾನ್ಯರಿಗೆ ಆರೋಗ್ಯ ವೇ ತಮ್ಮ ಇಲಾಖೆಯ ಧ್ಯೇಯವಾಗಲಿದೆ ಎಂದರು. ಸಕರ್ಾರಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಜನರ ನಂಬುಗೆಯನ್ನು ಹೆಚ್ಚಿಸುವ ಕೆಲಸ ಇಂದಿನ ಅಗತ್ಯವಾಗಿದ್ದು, ಇಲಾಖೆಯ ಎಲ್ಲರೂ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಧ್ಯೇಯದ ಸಾಕಾರಕ್ಕೆ ಸಜ್ಜಾಗಬೇಕಿದೆ ಎಂದರು.
ಇಂದೂ ಸಹ ಶೇ. 70ರಷ್ಟು ಜನರು ಸಕರ್ಾರ ನೀಡುತ್ತಿರುವ ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಲೋಪಗಳಾಗಬಾರದು. ಇಲಾಖೆಯಲ್ಲಿ ಸುಮಾರು 4,500 ಡಿ ಗ್ರೂಪ್ ನೌಕರರ ಕೊರತೆ ಇದ್ದು, 600 ಎ ಎನ್ ಎಂಗಳನ್ನು ಇವರಲ್ಲಿ %25 ಪುರುಷ ಎ ಎನ್ ಎಂಗಳನ್ನು ನೇಮಿಸುವ ಉದ್ದೇಶವಿದೆ ಎಂದರು.
ಸದೃಢ ಸಮಾಜ ನಿರ್ಮಾಣಕ್ಕೆ ಸದೃಢ ಮಕ್ಕಳಿರಬೇಕು. ಹಾಗಾಗಿ ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ಕಬ್ಬಿಣ ಅಂಶಗಳಿರುವ ಮಾತ್ರೆಯನ್ನು ನೀಡುವ ಯೋಜನೆಯಿದೆ. ಜಿಲ್ಲೆಗೊಂದು ಕ್ಯಾನ್ಸರ್ ಪತ್ತೆ ಯಂತ್ರ ಖರೀದಿಸಲಾಗುವುದು. ಹೊಟೆಲ್ ಗಳಲ್ಲಿ ಅಡುಗೆ ಕೆಲಸ ಮಾಡುವವರ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾರ್ಡ್ ನೀಡಲು ಯೋಜನೆ ರೂಪಿಸಲಾಗಿದೆ. ಈ ಎಲ್ಲ ಯೋಜನೆಗಳು ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿರಿಸಿ ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ರಮಾನಾಥ ರೈ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸಕರ್ಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ ಎಂದರು. ತಮ್ಮ ಸರ್ಕಾರವು ಜನಪರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಸಚಿವರು ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ ಎ ಮೊಯ್ದಿನ್ ಬಾವಾ ಅವರು ವಹಿಸಿದ್ದರು.
ಹನ್ನೊಂದು ವರ್ಷಗಳಿಂದ ಅಲ್ಲಿ ಸೇವೆ ಸಲ್ಲಿಸುತ್ತಿರುವ ಡಾ ಸುನಿಲ್ ಇವಾನ್ಸ್ ಜತ್ತಣ್ಣ ಅವರು ವಾಮಂಜೂರಿನಲ್ಲಿ ತಮ್ಮ ಸೇವಾನುಭವವನ್ನು ಹೇಳಿಕೊಂಡು, ಈ ಪ್ರಾಥಮಿಕ ಆರೋಗ್ಯ ಕೇಂದ್ರ ಅವರ ಮಗುವಿದ್ದಂತೆ ಎಂದರು. ಪೋಸ್ಟ್ ಗ್ರಾಜ್ಯುಯೇಷನ್ ಗೆ ಶೀಘ್ರದಲ್ಲೇ ತೆರಳಲಿರುವ ಇವರಿಗೆ ಇದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಿದವರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾ ಜತ್ತನ್ನ ಅವರು ಇದೇ ಸಂದರ್ಭದಲ್ಲಿ ಸಚಿವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ಬೇಡಿಕೆಗಳ ಮನವಿಯನ್ನು ನೀಡಿದರು. ಡಾ ಓ ಆರ್ ಶ್ರೀರಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾಧಿಕಾರಿ ಎನ್ ಪ್ರಕಾಶ್ ವೇದಿಕೆಯಲ್ಲಿದ್ದರು.
ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಹರೀಶ್ ಕೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಮೆಲ್ವಿನ್ ಡಿಸೋಜ, ನೀರು ಮಾರ್ಗ ಗ್ರಾಮಪಂಚಾಯತ್ ಅಧ್ಯಕ್ಷರಾದ ರಾಬಟ್ರ್ ಲ್ಯಾನ್ಸಿ ಪಾಯಸ್, ಉಳಾಯಿಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷರಾದ ಲಲಿತ ಕೊಟ್ಟಾರಿ, ತಾಲೂಕುಪಂಚಾಯತ್ ಸದಸ್ಯ ಯೂಸುಫ್ರ, ಶಶಿಪ್ರಭ ಕೋಟ್ಯಾನ್, ಮನಾಪ ಸದಸ್ಯ ಭಾಸ್ಕರ್ ಕೆ. ಶ್ರೀಮತಿ ಹೇಮಲತ ಆರ್ ಸಾಲಿಯಾನ್, ಕೃಷ್ನರಾಜ್ ತಂತ್ರಿ, ಅಬೂಬಕ್ಕರ್ ಮುಸ್ಲಿಯಾರ್, ರೆ. ಡಾ. ಜೆ ಎಸ್ ಸದಾನಂದ ಉಪಸ್ಥಿತರಿದ್ದರು.