ಮಂಗಳೂರು, ಜುಲೈ. 27:- ಮಳೆಯ
ಅಬ್ಬರದಿಂದಾಗಿ ರಾಜ್ಯದ ಕರಾವಳಿ ತೀರ ಪ್ರದೇಶಗಳಲ್ಲಿ ಕಡಲಿನ ಅಬ್ಬರ ದುಪ್ಪಟ್ಟಾಗಿದ್ದು,
ಉಳ್ಳಾಲ ಕಡಲಿನ ಬದಿಯಲ್ಲಿ ವಾಸಿಸುವವರಿಗೆ ತುಂಬಾ ತೊಂದರೆಯಾಗಿ ಮನೆ ಸೂರುಗಳು ನಾಶವಾಗಿ
ಬಾರೀ ನಷ್ಟ ಸಂಭವಿಸಿದ್ದು ಇಂದಿನಿಂದಲೇ ಇಲ್ಲಿ ನಷ್ಟಕ್ಕೊಳಗಾದ ಕುಟುಂಬಗಳಿಗೆ ಪರಿಹಾರ
ನೀಡುವುದು ಸೇರಿದಂತೆ ಕಡಲ ಕೊರೆತ ಹೆಚ್ಚಿರುವಂತಹ ಕಡೆಗಳಲ್ಲಿ ತುರ್ತು ಕಾಮಗಾರಿಗಳನ್ನು
ಕೈಗೊಂಡು ಕಡಲ ಕೊರೆತ ತಡೆಯಬೇಕೆಂದು ಆದೇಶಿಸುವುದಾಗಿ ಆರೋಗ್ಯ ಸಚಿವ
ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಅವರು ಇಂದು ಉಳ್ಳಾಲ,ಕೋಟೆಪುರ,ಮಕ್ಕಚೇರಿ,ಮೊಗವೀರಪಟ್ಟಣ,ಸುಭಾಷ್ನಗರ ಮುಂತಾದ ಕಡಲ್ಕೊರೆತ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಕಡಲ್ಕೊರೆತದಿಂದ ನಷ್ಟ ಉಂಟಾಗಿರುವ ಮನೆಗಳನ್ನು ಪರಿಶೀಲಿಸಿ ನಂತರ ಮಾಧ್ಯದವರೊಂದಿಗೆ ಮಾತನಾಡಿದರು.
ಪ್ರತೀ ವರ್ಷ ಉಳ್ಳಾಲ ಪರಿಸರದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ. ಆದರೆ ಈ ಬಾರಿಯ ಕಡಲ್ಕೊರೆತ ಕಳೆದ 17 ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ ಎಂದು ಸಚಿವರು ತಿಳಿಸಿದರು. ಸೆಪ್ಟೆಂಬರ್ನಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕ್ಯಗೊಳ್ಳುವುದಾಗಿ ಅವರು ತಿಳಿಸಿದರು.
ಮಾನ್ಯ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಸಚಿವರೊಂದಿಗೆ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.