Thursday, July 11, 2013

ದೇಶದ ಅಭಿವೃದ್ಧಿಗೆ ಜನಸಂಖ್ಯಾ ಸ್ಪೋಟ ತಡೆ ಎಲ್ಲರ ಜವಾಬ್ದಾರಿಯಾಗಬೇಕು:ರಮಾನಾಥ ರೈ

ಮಂಗಳೂರು, ಜುಲೈ.11:-ಒಂದೇ ಸಮನೆ ಏರುತ್ತಿರುವ ಜನಸಂಖ್ಯೆ ದೇಶದ ಪ್ರಗತಿಗೆ ಮಾರಕವಾಗಿದ್ದು, ಜನಸಂಖ್ಯಾ ಸ್ಪೋಟವನ್ನು  ತಡೆಯುವುದು ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಎಂದು ಅರಿತು ಮುಂದಾಗಬೇಕೆಂದು ರಾಜ್ಯ ಅರಣ್ಯ ಖಾತೆ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ವೆನ್ಲಾಕ್ ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಇಂದು ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ 2013 ನ್ನು ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯಾ ಸ್ಪೋಟಕ್ಕೆ ನಮ್ಮಲ್ಲಿನ ಅಜ್ಞಾನ ,ಮೂಢನಂಬಿಕೆ, ನಿರುದ್ಯೋಗ ಸಮರ್ಪಕ ಮಾಹಿತಿ ಇವೇ ಮೊದಲಾದವುಗಳು ಮುಖ್ಯ ಕಾರಣವಾಗಿವೆ. ಆದ್ದರಿಂದ ನಾವು ಜನರಿಗೆ  ಜನಸಂಖ್ಯಾ ಸ್ಪೋಟದಿಂದ ಬಡತನ, ನಿರುದ್ಯೋಗ, ಸಮಾಜದಲ್ಲಿ ಅರಾಜಕತೆ, ಅಶಾಂತಿಗೆ ಎಡೆಮಾಡಿ, ಜನರಿಗೆ ನೆಮ್ಮದಿ ಇಲ್ಲದಂತಾಗುವುದು. ದೇಶದ ಪ್ರಗತಿಗೆ ಮಾರಕ ಎಂಬ ಬಗ್ಗೆ  ಜನರಲ್ಲಿ ಅರಿವು ಮೂಡಿಸಿ ಅವರು ``ಚಿಕ್ಕ ಸಂಸಾರ ಸುಖ ಸಂಸಾರ'' ಸೂತ್ರವನ್ನು ಪಾಲಿಸುವಂತೆ ಮನವೊಲಿಸಬೇಕು ಎಂದು ತಿಳಿಸಿದರು.
ಜನಸಂಖ್ಯಾ ಸ್ಪೋಟ ತಡೆಗೆ ಸರ್ವರಿಗೂ ಶಿಕ್ಷಣ ಮತ್ತು ಭೃಷ್ಠಾಚಾರ ನಿರ್ಮೂಲನೆಯಿಂದ ಮಾತ್ರ ಬಲಿಷ್ಠ ಭಾರತ ನಿಮರ್ಾಣ ಸಾಧ್ಯ ಎಂಬುದನ್ನು ಶಾಲಾ ಕಾಲೇಜು ಮಕ್ಕಳಿಗೆ ಮನನ ಮಾಡಲು ಸೂಚಿಸಿದರು.
ವಿಜ್ಞಾನ ತಂತ್ರಜ್ಞಾನಗಳ ಅವಿಷ್ಕಾರದಿಂದಾಗಿ ಇಂದು ನಮ್ಮ ದೇಶದಲ್ಲಿ ಶಿಶು ಮರಣ ಹಾಗೂ ತಾಯಂದಿರ ಮರಣ ಸಂಖ್ಯೆ ಇಳಿಮುಖವಾಗಿದೆ.ಇದೊಂದು ಸಮಾಧಾನಕರ ಸಂಗತಿಯಾದರೂ ಜನಸಂಖ್ಯಾ ಸ್ಪೋಟವನ್ನು ನಾವೆಲ್ಲರೂ ಸಾಮಾಜಿಕ ಬದ್ಧತೆಯಿಂದ ತಡೆಯಲು ಮುಂದಾಗುವಂತೆ ಕರೆಯಿತ್ತರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೋ ಅವರು ಮಾತನಾಡಿ ಜನಸಂಖ್ಯೆ ಹೆಚ್ಚಳದಿಂದ ಜನಸಂಖ್ಯಾ ಸುನಾಮಿ ಆಗುವುದನ್ನು ನಾವೆಲ್ಲರೂ ತಡೆಯಬೇಕಿದೆ. ಅದಕ್ಕಾಗಿ ನಾವು ಜನಸಂಖ್ಯಾ ಸ್ಪೋಟದ ದುಷ್ಪರಿಣಾಮಗಳ ಕುರಿತು ಜನರನ್ನು ಜಾಗೃತಗೊಳಿಸಬೇಕೆಂದರು.
ಮುಖ್ಯ ಅತಿಥಿಗಳಾಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ  ಬಿ.ಎ.ಮೊಯಿದಿನ್ ಬಾವಾ, ಜಿಲ್ಲಾಧಿಕಾರಿ ಎನ್.ಪ್ರಕಾಶ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಾ.ಕಿಶೋರ್ ಕುಮಾರ್ ಸ್ವಾಗತಿಸಿದರು,ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ಪ್ರಾಸ್ತವಿಕ ನುಡಿಗಳನ್ನಾಡಿದರು. ಆರ್ಸಿಎಚ್ ಅಧಿಕಾರಿ ಡಾ.ರುಕ್ಮಿಣಿ ಜನಸಂಖ್ಯಾ ಸ್ಪೋಟ ಕುರಿತು ಉಪನ್ಯಾಸ ನೀಡಿದರು. ಡಾ.ರಾಜೇಶ್ ವಂದಿಸಿದರು.