Friday, July 12, 2013

ಆನೆಗಳ ಉಪಟಳ, 15 ಲಕ್ಷ ರೂ. ಪರಿಹಾರ

ಮಂಗಳೂರು, ಜುಲೈ.12:- ವಿವಿಧ ಕಾರಣಗಳಿಂದ ಮಾನವ ಹಾಗೂ ಕಾಡುಪ್ರಾಣಿಗಳ ನಡುವಿನ ಸ0ಘರ್ಷದಿಂದ  ಸಂಭವಿಸಿದ ದುರಂತಕ್ಕೆ ಪರಿಹಾರವಾಗಿ ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ ಕಳೆದ 2011-12 ಮತ್ತು 2012-13 ರ ಸಾಲಿನಲ್ಲಿ ಒಟ್ಟು 66 ಪ್ರಕರಣಗಳಿಗೆ ಅರಣ್ಯ ಇಲಾಖೆಯಿಂದ ನೆರವು ನೀಡಲಾಗಿದೆ. ಕಾಡಾನೆಗಳು ರೈತರ ಬೆಳೆಗಳಿಗೆ ನಷ್ಟವು0ಟು ಮಾಡಿ ಆಸ್ತಿಪಾಸ್ತಿಗಳಿಗೆ ಹಾನಿಮಾಡಿವೆ ಹಾಗೂ ಇಬ್ಬರು ವ್ಯಕ್ತಿಗಳ ಮರಣ ಸಂಭವಿಸಿದ್ದು,  ಇದಕ್ಕಾಗಿ  ಅರಣ್ಯ ಇಲಾಖೆ  ಒಟ್ಟು ರೂ. 15,30,967 ಗಳ  ಪರಿಹಾರವನ್ನು ನೀಡಿದೆ.
    2011-12ರ ಸಾಲಿನಲ್ಲಿ ಜಿಲ್ಲೆಯ ಗ್ರಾಮಗಳಾದ ಕೊಲ್ಲಮೊಗರು, ಚಾಮರ್ಾಡಿ, ಕಡಿರುದ್ಯಾವರ, ಬಾಳುಗೋಡು,  ಕೊಂಬಾರು,  ಕೊಣಾಜೆ,   ತೋಟತ್ತಾಡಿ,  ನೂಜಿಬಾಳ್ತಿಲ, ದೇವಚಳ್ಳ, ಅಲೆಟ್ಟಿ ಮತ್ತು ಮಂಡೆಕೋಲುಗಳಲ್ಲಿ ಆನೆಗಳ ಹಾವಳಿಯಿಂದ ಬೆಳೆ ನಾಶವಾದ 20 ಪ್ರಕರಣಗಳು ದಾಖಲಿಸಿದ್ದು ಇದಕ್ಕಾಗಿ  ಸಕರ್ಾರ ಅರಣ್ಯ ಇಲಾಖೆ ಮೂಲಕ 1,71,801 ರೂ ಗಳ ಪರಿಹಾರ ವಿತರಿಸಿದೆ.
   2012-13 ನೇ ಸಾಲಿನಲ್ಲಿ ಚಾರ್ಮಾಡಿ, ಕಲ್ಮಡ್ಕ, ಕೆಲಿಮಂಜ, ಸುಬ್ರಹ್ಮಣ್ಯ, ಮಡಪಾಡಿ, ಸ0ಪಾಜೆ, ನೆಲ್ಯಾಡಿ, ಕೌಕ್ರಾಡಿ, ಹತ್ಯಡ್ಕ, ಕೊಂಬಾರು, ರೆಕಿಯಾ, ಕೊಲ್ಲಮೊಗ್ರು, ಹರಿಹರಪಲ್ಲತಡ್ಕ, ಕೋಡಿಂಬಾಳ, ಕಳಂಜ, ಕೊಣಾಜೆ, ನೂಜಿಬಾಳ್ತಿಲ, ದೇವಚಳ್ಳ, ಅಲೆಟ್ಟಿ ಹಾಗೂ ಮಂಡೆಕೋಲು ಗ್ರಾಮಗಳಲ್ಲಿ ಆನೆ ಉಪಟಳದಿಂದ ಬೆಳೆನಷ್ಟದ 46 ಪ್ರಕರಣಗಳು ದಾಖಲಾಗಿ ರೂ 4,59,030 ಗಳನ್ನು ನಷ್ಟ ಪರಿಹಾರವಾಗಿ ನೀಡಲಾಗಿದೆ. ಇದೇ ಅವಧಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಆನೆ ಕೊಂದು ಹಾಕಿದ್ದು, ಇವರ ಕುಟುಂಬದವರಿಗೆ ಒಟ್ಟು 9,00,000 ಲಕ್ಷ ರೂಗಳ ಪರಿಹಾರವನ್ನು ಅರಣ್ಯ ಇಲಾಖೆಯಿ0ದ ಕೊಡಮಾಡಲಾಗಿದೆ.