ಮಂಗಳೂರು,
ಜುಲೈ. 01: ತ್ವರಿತ ನ್ಯಾಯದಾನ ಹಾಗೂ ಕಕ್ಷಿದಾರನ ಜೇಬಿಗೆ ಹೆಚ್ಚು
ಹೊರೆಯಾಗದ ರೀತಿಯಲ್ಲಿ ಲೋಕ ಅದಾಲತ್(ಜನತಾ ನ್ಯಾಯಾಲಯ) ಮೂಲಕ ಸೌಹಾರ್ದ ವಾತಾವರಣದಲ್ಲಿ
ನ್ಯಾಯದಾನ ಇಂದಿನ ವಿಶೇಷತೆಯಾಗಿದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ 2013 ರ ಜನವರಿಯಿಂದ
2013 ಮೇ ಅಂತ್ಯದ ವರೆಗೆ 5 ತಿಂಗಳಲ್ಲಿ 282 ಸಿಟ್ಟಿಂಗ್ ಗಳ ಮೂಲಕ ಒಟ್ಟು 3126 ವಿವಿಧ
ಮೊಕದ್ದಮೆಗಳನ್ನು ಇತ್ಯರ್ಥಪಡಿಸಿ ಸಾಧನೆ ಮಾಡಲಾಗಿದೆ.
ಇದರಲ್ಲಿ ಮೋಟಾರು ವಾಹನಗಳಿಗೆ ಸಂಬಂಧಿಸಿದ 53 ಪ್ರಕರಣಗಳು,2834 ಕ್ರಿಮಿನಲ್ ಮೊಕದ್ದಮೆಗಳು,239 ಸಿವಿಲ್ ವ್ಯಾಜ್ಯಗಳು ಸೇರಿವೆ. ಇತ್ಯರ್ಥವಾದ ಮೋಟಾರು ವಾಹನಗಳ ಮೊಕದ್ದಮೆಗಳಲ್ಲಿ ಪುತ್ತೂರು ತಾಲ್ಲೂಕಿನ 8 ಮೊಕದ್ದಮೆಗಳು ಇತ್ಯರ್ಥವಾಗಿದ್ದು,ರೂ.6,21,000ಗಳ ಪರಿಹಾರ ದೊರಕಿಸಿದ್ದರೆ,ಮಂಗಳೂರು ತಾಲೂಕಿನ 45 ಮೊಕದ್ದಮೆಗಳು ಇತ್ಯರ್ಥವಾಗಿದ್ದು, ಇದರಿಂದ ರೂ.40,77,000/-ಪರಿಹಾರ ಧನ ದೊರಕಿಸಲಾಗಿದೆ.